ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಧ್ವನಿ ಮಾದರಿ ಸಂಗ್ರಹಿಸಲು ಪಾಕ್ ಕಾಯ್ದೆಯಲ್ಲಿ ಅವಕಾಶವಿಲ್ಲ:ಮಲಿಕ್ (Pak law | Does not permit | Taking voice sample | Rehman Malik)
ಅಪರಾಧಿಗಳ ಧ್ವನಿ ಮಾದರಿ ಸಂಗ್ರಹಿಸಲು ಪಾಕಿಸ್ತಾನ ಸಂವಿಧಾನದಲ್ಲಿ ಅವಕಾಶವಿಲ್ಲ. ಆದರೆ 26/11 ದಾಳಿ ಆರೋಪಿಗಳ ಧ್ವನಿ ಮಾದರಿ ಭಾರತಕ್ಕೆ ನೀಡಲು ಎಲ್ಲ ಸಾಧ್ಯತೆಗಳನ್ನೂ ಪರಿಶೀಲಿಸುವುದಾಗಿ ಪಾಕಿಸ್ತಾನ ಹೇಳಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಮುಂಬೈ ದಾಳಿ ಆಪಾದಿತರ ಬಗ್ಗೆ ಪಾಕಿಸ್ತಾನ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ವಿಳಂಬವಾಗಲು ಪಾಕಿಸ್ತಾವವೊಂದೇ ಹೊಣೆಯಲ್ಲ, ಈ ಪ್ರಕರಣದ ಕುರಿತು ವಿಚಾರಣೆ ನಡೆಸಲು ತೆರಳಲಿದ್ದ ಪಾಕ್‌ ನ್ಯಾಯಾಂಗ ನಿಯೋಗಕ್ಕೆ ಅನುಮತಿ ನೀಡಲು ಭಾರತವು ಒಂದು ವರ್ಷ ಸಮಯಾವಕಾಶ ತೆಗದುಕೊಂಡಿದ್ದೂ ಇದಕ್ಕೆ ಕಾರಣ ಎಂದು ಪಾಕಿಸ್ತಾನ ಆಪಾದಿಸಿದೆ.

ಪಾಕಿಸ್ತಾನದ ಕಾನೂನಿನಲ್ಲಿ ಅವಕಾಶವಿರುವ ಏಕೈಕ ದೈಹಿಕ ಗುರುತು ಎಂದರೆ ಹೆಬ್ಬೆಟ್ಟು ಮುದ್ರೆ ಮಾತ್ರ. ಭಾವಚಿತ್ರ ಅಥವಾ ಧ್ವನಿ ಮಾದರಿಯನ್ನು ನೀಡುವುದಕ್ಕೂ ಅವಕಾಶವಿಲ್ಲ ಎಂದು ಪಾಕ್‌ ಆಂತರಿಕ ಸಚಿವ ರೆಹಮಾನ್‌ ಮಲಿಕ್ ತಿಳಿಸಿದ್ದಾರೆ. ನಾನೇನಾದರೂ ಬೇರೆ ಮೂಲಗಳಿಂದ ಶಂಕಿತರ ವಾಯ್ಸ್ ಸ್ಯಾಂಪಲ್ ತೆಗೆದುಕೊಂಡು ಭಾರತಕ್ಕೆ ಕಳುಹಿಸಿದರೆ ಅದರ ವಿರುದ್ಧ ನ್ಯಾಯಾಲಯದಲ್ಲಿ ಪ್ರಶ್ನಿಸಬಹದು ಹಾಗೂ ನ್ಯಾಯಾಂಗ ನಿಂದನೆ ಎಂದೂ ಪರಿಗಣಿಸಲಾಗುತ್ತದೆ ಎಂದಿದ್ದಾರೆ.

ಶಂಕಿತರ ಧ್ವನಿ ಮಾದರಿಯನ್ನು ತೆಗೆದುಕೊಳ್ಳಲು ಅನುಮತಿ ನೀಡುವಂತೆ ಕೋರಿ ಪಾಕಿಸ್ತಾನ ಸರಕಾರ ಕೆಳ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿ ತಿರಸ್ಕೃತವಾಗಿದೆ. ಈ ಕುರಿತು ತಾವು ಭಾರತದ ಗೃಹ ಸಚಿವ ಪಿ.ಚಿದಂಬರಂ ಅವರೊಂದಿಗೆ ಚರ್ಚಿಸುವುದಾಗಿ ಮಲಿಕ್‌ ತಿಳಿಸಿದ್ದಾರೆ.

ನಾವು ಈ ಕುರಿತು ಕಾನೂನು ಪ್ರಕಾರವೇ ನಡೆಯುತ್ತೇವೆ. ಮೊದಲ ಹಂತದಲ್ಲಿ ಕೆಳ ನ್ಯಾಯಾಲಯವು ವಾಯ್ಸ್‌ ಸ್ಯಾಂಪಲ್‌ ಪಡೆಯಲು ನಿರಾಕರಿಸಿತ್ತು. ಇದರಿಂದಾಗಿ ಸರಕಾರವು ಅನುಮತಿ ನೀಡಿರಲಿಲ್ಲ. ನಾವು ವಾಯ್ಸ್‌ ಸ್ಯಾಂಪಲ್‌ಗೆ ಅನುಮತಿ ನೀಡುವಂತೆ ಹೈಕೋರ್ಟ್‌ ಮೊರೆ ಹೋಗುತ್ತೇವೆ ಎಂದು ಹೇಳಿದರು.

'ಶಂಕಿತರ ವಾಯ್ಸ್‌ ಸ್ಯಾಂಪಲ್‌ ತೆಗೆದುಕೊಳ್ಳಲು ಕೆಳ ನ್ಯಾಯಾಲಯವು ಅನುಮತಿ ನೀಡದೇ ಇರುವುದನ್ನು ಪ್ರಶ್ನಿಸಿ ಹೈಕೋರ್ಟ್‌‌ಗೆ ಅರ್ಜಿ ಸಲ್ಲಿಸುತ್ತೇವೆ.' ಮುಂಬೈ ದಾಳಿ ಆಪಾದಿತರನ್ನು ನ್ಯಾಯಾಂಗ ವ್ಯಾಪ್ತಿಗೆ ತರುವುದೇ ನಮ್ಮ ಉದ್ದೇಶವಾಗಿದೆ ಎಂದು ಮಲಿಕ್‌ ಹೇಳಿದರು.

ನ್ಯಾಯಾಲಯವೇನಾದರೂ ಅನುಮತಿ ನೀಡಿದರೆ ನಾವು ಭಾರತಕ್ಕೆ ಧ್ವನಿ ಮಾದರಿಯನ್ನು ನೀಡುತ್ತೇವೆ. ಇದಕ್ಕೆ ಅನುಮತಿ ನೀಡಲು ಹೈಕೋರ್ಟ್‌ ನಿರಾಕರಿಸಿದರೆ ನಾವು ಸುಪ್ರೀಂ ಕೋರ್ಟಿಗೆ ಹೋಗುತ್ತೇವೆ. ಶಂಕಿತರ ಧ್ವನಿ ಮಾದರಿ ನೀಡಲು ಸಾಧ್ಯವಿರುವ ಎಲ್ಲ ಕ್ರಮಗಳನ್ನೂ ಪಾಕಿಸ್ತಾನವು ಪರಿಶೀಲಿಸಲಿದೆ ಎಂದು ಅವರು ತಿಳಿಸಿದರು.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಧ್ವನಿ ಮಾದರಿ ಪರೀಕ್ಷೆ, ಪಾಕ್ ಕಾಯ್ದೆಯಲ್ಲಿ ಅವಕಾಶವಿಲ್ಲ, ರೆಹಮಾನ್ ಮಲಿಕ್, ಆಂತರಿಕ ಸಚಿವ