ಲಿಂಗ ಪರಿವರ್ತನೆ ಶಸ್ತ್ರಕ್ರಿಯೆ ಮಾಡಿಸಿಕೊಂಡ ಬಳಿಕವೂ ಹೆಸರು ಮತ್ತು ಲಿಂಗ ಬದಲಾವಣೆಯ ಪ್ರಯತ್ನದಲ್ಲಿ ವಿಫಲನಾಗಿದ್ದ ಮಲೇಷ್ಯಾದ ಮುಸ್ಲಿಂ ಯುವಕನೊಬ್ಬ ಹೃದ್ರೋಗದಿಂದಾಗಿ ಮೃತಪಟ್ಟಿದ್ದಾನೆ.
ಮೋಹದ್ ಅಶ್ರಫ್ ಹಫೀಜ್ ಅಬ್ದುಲ್ ಅಜೀಜ್ ಎಂಬ 25ರ ಯುವಕ, ಲಿಂಗ ಪರಿವರ್ತನೆ ಮಾಡಿಸಿಕೊಂಡ ನಂತರ ತನ್ನ ಹೆಸರನ್ನು ಅಲೀಶಾ ಫರ್ಹಾನಾ ಎಂದು ಬದಲಿಸಿಕೊಳ್ಳಲು ಇಚ್ಛಿಸಿದ್ದ. ಆದರೆ ರಾಷ್ಟ್ರೀಯ ಗುರುತಿನ ಚೀಟಿಯಲ್ಲಿ ತನ್ನ ಹೆಸರು ಮತ್ತು ಲಿಂಗವನ್ನು ಬದಲಾಯಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ನಿರಾಕರಿಸಿತ್ತು ಎಂದು ಮಲೇಷ್ಯಾ ಸುದ್ದಿ ಸಂಸ್ಥೆಯೊಂದು ತಿಳಿಸಿದೆ.
2009ರಲ್ಲಿ ಥಾಯ್‌ಲ್ಯಾಂಡ್‌ನಲ್ಲಿ ಈತ ಲಿಂಗ ಪರವರ್ತನೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ. ಆದರೆ ಶುಕ್ರವಾರ ಕಡಿಮೆ ರಕ್ತದೊತ್ತಡ ಮತ್ತು ಹೃದಯದ ಸಮಸ್ಯೆಯಿಂದ ಬಳಲುತ್ತಿದ್ದ ಅಜೀಜ್‌ನನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ.