ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಗಡಾಫಿ ಇನ್ನೂ ಲಿಬಿಯಾದಲ್ಲೇ ಇದ್ದಾರೆ: ಅಮೆರಿಕ (Muammar Gaddafi | Libyan leader | Still inside | Col Dave Lapan)
ಲಿಬಿಯಾ ರಾಜಧಾನಿ ಟ್ರಿಪೋಲಿಗೆ ಬಂಡುಕೋರ ಪಡೆಗಳು ಪ್ರವೇಶಿಸಿದರೂ ಅಧ್ಯಕ್ಷ ಮಅಮ್ಮರ್‌ ಗಡಾಫಿ ಇನ್ನೂ ದೇಶದಲ್ಲೇ ಇದ್ದಾರೆ ಎಂದು ನಂಬಲಾಗಿದೆ ಎಂದು ಅಮೆರಿಕ ತಿಳಿಸಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಗಡಾಫಿ ಲಿಬಿಯಾದಲ್ಲೇ ಇದ್ದಾನೆ ಎಂದು ನಾವು ನಂಬಿದ್ದೇವೆ. ಆತ ದೇಶ ಬಿಟ್ಟು ಪರಾರಿಯಾಗಿರುವ ಬಗ್ಗೆ ನಮಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಪೆಂಟಾಗಾನ್‌ ವಕ್ತಾರ ಕರ್ನಲ್‌ ಡೇವ್‌ ಲೇಪನ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಲಿಬಿಯಾದಲ್ಲಿ ಅಮೆರಿಕ ಪಡೆಗಳು ಹೋರಾಟ ನಡೆಸುತ್ತಿರುವುದನ್ನು ಅಲ್ಲಗಳೆದ ಲೇಪನ್‌, ಲಿಬಿಯಾದಲ್ಲಿರುವುದು ನ್ಯಾಟೋ ಪಡೆಗಳು ಹಾಗೂ ವಿಶ್ವ ಸಂಸ್ಥೆ ಶಾಂತಿ ಪಾಲನಾ ಪಡೆಗಳು ಮಾತ್ರ ಎಂದು ಹೇಳಿದರು.

ಲಿಬಿಯಾದಲ್ಲಿ ಗಡಾಫಿ ಪಡೆ ಹಾಗೂ ನ್ಯಾಟೋ ಪಡೆಗಳ ನಡುವೆ ನಡೆಯುತ್ತಿರುವ ಹೋರಾಟವು ನಿರ್ಣಾಯಕ ಹಂತದಲ್ಲಿದ್ದು, ಯುದ್ಧದಲ್ಲಿ ಅಮೆರಿಕ ಪಡೆಗಳನ್ನು ನಿಯೋಜಿಸುವ ಬಗ್ಗೆ ಇನ್ನೂ ಯೋಚಿಸಿಲ್ಲ ಎಂದು ತಿಳಿಸಿದ್ದಾರೆ.

5,300ಕ್ಕೂ ಹೆಚ್ಚು ಅಮೆರಿಕದ ಸೈನಿಕರು ಲಿಬಿಯಾದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಹೊರಗಿನಿಂದಲೇ ಬೆಂಬಲ ನೀಡಲು ನಿಯೋಜಿಸಲಾಗಿದ್ದು, ಈ ಪೈಕಿ 1,210 ಮಂದಿ ಯೋಧರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ವಿವರಿಸಿದ್ದಾರೆ.

ಲಿಬಿಯಾದಲ್ಲಿ ಜುಲೈ 31ರಿಂದ ನಡೆಯುತ್ತಿರುವ ಯುದ್ಧಕ್ಕಾಗಿ ಪೆಂಟಾಗನ್‌ 896 ಮಿಲಿಯನ್‌ ಡಾಲರ್‌ ವ್ಯಯಿಸಿದೆ ಎಂದು ಲೇಪನ್‌ ತಿಳಿಸಿದ್ದಾರೆ.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಮಅಮ್ಮರ್ ಗಡಾಫಿ, ಲಿಬಿಯಾ ಅಧ್ಯಕ್ಷ, ಕರ್ನಲ್ ಡೇವ್ ಲೇಪನ್, ಪೆಂಟಾಗಾನ್ ವಕ್ತಾರ