ಲಿಬಿಯಾ ಅಧ್ಯಕ್ಷ ಮುಅಮ್ಮರ್ ಗಡಾಫಿ ಅವರ ಪುತ್ರ ಖಾಮೀಸ್ ಅವರನ್ನು ದಕ್ಷಿಣ ಟ್ರಿಪೋಲಿಯಲ್ಲಿ ಕೊಲೆಗೈದ ನಂತರ ಅಂತ್ಯ ಸಂಸ್ಕಾರ ನಡೆಸಲಾಗಿದೆ ಎಂದು ಬಂಡುಕೋರ ಪಡೆಯ ವಕ್ತಾರರು ತಿಳಿಸಿದ್ದಾರೆ.
ದಕ್ಷಿಣ ಟ್ರಿಪೋಲಿಯಿಂದ 80 ಕಿಲೋ ಮೀಟರ್ ದೂರ ಇರುವ ತಾರ್‌ಹುನಾದಲ್ಲಿ ಕೊಲೆ ಮಾಡಲಾಗಿದೆ ಎಂದು ಒಂಡುಕೋರರ ಪಡೆಯ ಮುಖಂಡರೊಬ್ಬರು ತಮಗೆ ಸ್ಪಷ್ಟಪಡಿಸಿರುವುದಾಗಿ ಮಾನವ ಹಕ್ಕು ಖಾತೆಯ ಸಚಿವ ಮಹಮದ್ ಅಲ್ ಅಲ್ಲಾಜಿ ತಿಳಿಸಿದ್ದಾರೆ.
ಖಾಮೀಸ್‌ನಲ್ಲಿ ಯುದ್ಧದಲ್ಲಿ ಹತ್ಯೆಮಾಡಿದ ನಂತರ ಅಂತ್ಯಸಂಸ್ಕಾರ ನಡೆಸಿರಬಹುದು ಎಂದು ಅಲ್ಲಾಜಿ ತಿಳಿಸಿದ್ದಾರೆ.
ಖಾಮೀಸ್ ಮೃತಪಟ್ಟಿದ್ದಾನೆ ಎಂಬುದನ್ನು ಬಂಡುಕೋರ ಸರಕಾರದ ವಕ್ತಾರ ಮಹಮದ್ ಶಾಮ್ಮಮ್ ಪತ್ರಿಕಾಗೋಷ್ಠಿಯಲ್ಲಿ ದೃಢಪಡಿಸಿದ್ದಾರೆ. ತಾರ್‌ಹುನಾ ಮತ್ತು ಜೆಲ್ಟಾನ್ ನಡುವೆ ಖಾಮೀಸ್‌ರನ್ನು ಕೊಲೆ ಮಾಡಿರಬಹುದು ಎಂದು ಹೇಳಿದ್ದಾರೆ.
ಬಂಡುಕೋರರು ಮತ್ತು ಗಡಾಫಿ ಪಡೆಯ ನಡುವೆ ಭಾನುವಾರ ನಡೆದ ಕಾಳಗದಲ್ಲಿ ಮುಅಮ್ಮರ್ ಗಡಾಫಿ ಪುತ್ರ ಖಾಮೀಸ್ ಮೃತಪಟ್ಟಿರಬಹುದು ಎಂದು ಬಂಡುಕೋರರು ಭಾನುವಾರ ಹೇಳಿದ್ದರು.