ನೇಪಾಳದಲ್ಲಿ ರಾಜರ ಆಡಳಿತ ಕೊನೆಗೊಂಡು ಪ್ರಜಾಪ್ರಭುತ್ವ ಸರಕಾರ ಅಸ್ಥಿತ್ವಕ್ಕೆ ಬಂದು ಮೂರು ವರ್ಷ ಕಳೆದರೂ ನೂತನ ಸಂವಿಧಾನ ರಚಿಸುವಲ್ಲಿ ವಿಫಲವಾಗಿದೆ. ಹೊಸ ಸಂವಿಧಾನ ರಚಿಸುವ ಗಡುವು ಆಗಸ್ಟ್ 31ರಂದು ಅಂತ್ಯಗೊಳ್ಳುವ ಹಿನ್ನೆಲೆಯಲ್ಲಿ ನೇಪಾಳ ಪ್ರಧಾನಿ ಬಾಬೂರಾಮ್ ಭಟ್ಟಾರಾರ್ ಹೊಸ ಸಂವಿಧಾನ ರಚನೆಗೆ ಮತ್ತೆ ಮೂರು ತಿಂಗಳು ಕಾಲಾವಕಾಶ ಕೋರಿದ್ದಾರೆ.
ನೇಪಾಳದ ಹೊಸ ಪ್ರಧಾನಿ ಬಾಬುರಾಮ್ ಭಟ್ಟಾರಾಯ್ ನವಂಬರ್ 30ರಂದು ಹೊಸ ಸಂವಿಧಾನ ರಚನೆಯಾಗುವುದಾಗಿ ಘೋಷಿಸಿದ್ದರು.
ಬಾಬುರಾಮ್ ಭಟ್ಟಾರಾಯ್ ಸೋಮವಾರ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಮಧ್ಯಂತರ ಸಂವಿಧಾನಕ್ಕೆ ತಿದ್ದುಪಡಿ ತರುವ ಅವಧಿ ಆಗಸ್ಟ್ 31ಕ್ಕೆ ಕೊನೆಯಾಗಿದ್ದ ಹಿನ್ನೆಲೆಯಲ್ಲಿ ಮತ್ತೆ ಮೂರು ತಿಂಗಳು ಕಾಲಾವಕಾಶ ಕೋರಿದ್ದಾರೆ.
ಹೊಸ ಸಂಸತ್ ರಚನೆಗೆ ಮೂರು ತಿಂಗಳು ಕಾಲಾವಕಾಶ ಕೋರಿರುವುದನ್ನು ಸ್ವಾಗತಿಸಲಾಗಿದೆ.
ಹೊಸ ಸಂಸತ್ ರಚನೆ ಕುರಿತು ಕರೆದಿದ್ದ ಮ್ಯಾರಾಥಾನ್ ಮಾದರಿ ಅಧಿವೇಶನ ತಡ ರಾತ್ರಿಯವರೆಗೆ ನಡೆದರೂ ಯಾವುದೇ ನಿರ್ಣಯ ಕೈಗೊಳ್ಳುವಲ್ಲಿ ವಿಫಲವಾಗಿದ್ದರಿಂದ ಪ್ರಧಾನಿ ಪ್ರಚಂಡ ಅವರು ರಾಜೀನಾಮೆ ನೀಡಿದ್ದರು.
ಹೊಸ ಸಂಸತ್ ರಚನೆಗಾಗಿ ಕೊನೆ ಘಳಿಗೆಯವರೆಗೆ ನಡೆದ ಕಸರತ್ತಿನ ಹೊರತಾಗಿಯೂ ನೇಪಾಳದ ಹೊಸ ಮಾವೋ ವಾದಿ ಪ್ರಧಾನಿ ಬಾಬುರಾಮ್ ಭಟ್ಟಾರಾಯ್ ಮಂಗಳವಾರದಿಂದ ಆರಂಭಿಸಿರುವ ಹೊಸ ಆಡಳಿತಕ್ಕೆ ಕಠಿಣ ಸವಾಲುಗಳು ಎದುರಾಗಿವೆ.
ಪ್ರಧಾನಿ ಬಾಬುರಾಮ್ ಭಟ್ಟಾರಾಯ್ ಅವರು ಅತಿದೊಡ್ಡ ಪ್ರತಿಪಕ್ಷವಾಗಿರುವ ನೇಪಾಳ ಕಾಂಗ್ರೆಸ್ ಮುಖಂಡರನ್ನು ಭೇಟಿ ಮಾಡಿ ತಮ್ಮ ಸರಕಾರವನ್ನು ಸೇರುವಂತೆ ಕೋರಿದರು. ಆದರೆ ನೇಪಾಳಿ ಕಾಂಗ್ರೆಸ್ ಪಕ್ಷವು ಸರಕಾರ ಸೇರಲು ನಿರಾಕರಿಸಿತ್ತು.