ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕುಡಿದು ವಾಹನ ಚಲಾಯಿಸಿದ ಬರಾಕ್‌ ಒಬಾಮಾ ಚಿಕ್ಕಪ್ಪ ಅರೆಸ್ಟ್ (Kannada News | International News in Kannada | Barack Obama | Onyango Obama)
ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದ ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ ಅವರ ಚಿಕ್ಕಪ್ಪ ಆನ್ಯಾಂಗೋ ಒಬಾಮಾ ಅವರನ್ನು ಪೊಲೀಸರು ಬಂಧಿಸಿದ್ದು, ಅವರನ್ನು ವಲಸೆ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಆನ್ಯಾಂಗೋ ಒಬಾಮಾ ಅವರನ್ನು ಕಳೆದ ವಾರ ಫ್ರಾಮಿಂಗ್‌ಹ್ಯಾಂ ಪೊಲೀಸರು ಬಂಧಿಸಿದ್ದಾರೆ. ಆನ್ಯಾಂಗೋ ಒಬಾಮಾ ಅವರು ವಾಹನವನ್ನು ಅಡ್ಡಾದಿಡ್ಡಿ ಚಲಾಯಿಸಿದ್ದರಿಂದ ಇನ್ನೊಂದು ವಾಹನವು ಅವರ ವಾಹನಕ್ಕೆ ಡಿಕ್ಕಿ ಹೊಡೆದಿತ್ತು.

ಪೊಲೀಸರು ಬಂಧಿಸಿದ ನಂತರ 67 ವರ್ಷದ ಆನ್ಯಾಂಗೋ ಒಬಾಮಾ ತಾವು ಒಂದು ದೂರವಾಣಿ ಕರೆ ಮಾಡುವುದಾಗಿ ಹೇಳಿದ್ದರು. ಬಹುಶಃ ಅವರು ವೈಟ್ ಹೌಸ್‌ಗೆ ದೂರವಾಣಿ ಕರೆ ಮಾಡಿದ್ದರು ಎಂದು ನಾನು ಭಾವಿಸಿದ್ದೆ ಎಂದು ಪೊಲೀಸರೊಬ್ಬರು ಹೇಳಿದ್ದಾರೆ.

ಈ ಕುರಿತು ವೈಟ್‌ ಹೌಸ್‌ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೀನ್ಯಾ ಪ್ರಜೆಯಾಗಿರುವ ಆನ್ಯಾಂಗೋ ಒಬಾಮಾ ಅವರು ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ ಅವರ ಚಿಕ್ಕಪ್ಪ.

ಈ ಕುರಿತು ಪ್ರತಿಕ್ರಿಯಿಸಿರುವ ಕ್ಲೀವ್‌ಲ್ಯಾಂಡ್‌ ವಲಸೆ ಅಧಿಕಾರಿ, ಆನ್ಯಾಂಗೋ ಒಬಾಮಾ ಅವರು ತಾನು ಅಧ್ಯಕ್ಷರ ಚಿಕ್ಕಪ್ಪ ಎಂದು ಹೇಳಿದ್ದರು ಎಂದು ತಿಳಿಸಿದ್ದಾರೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಕನ್ನಡ ಸುದ್ದಿ, ಕರ್ನಾಟಕ ಸುದ್ದಿ, ರಾಷ್ಟ್ರೀಯ ಸುದ್ದಿ, ಬ್ರೇಕಿಂಗ್ ನ್ಯೂಸ್, ತಾಜಾ ಕನ್ನಡ ಸುದ್ದಿ, ಫಾರಿನ್ ಸುದ್ದಿ, ಅಂತಾರಾಷ್ಟ್ರೀಯ, ಅಂತರರಾಷ್ಟ್ರೀಯ, ಅಂತರ್ರಾಷ್ಟ್ರೀಯ ಸುದ್ದಿ, ಕುಡಿದು ವಾಹನ ಚಾಲನೆ, ಬರಾಕ್ ಒಬಾಮಾ ಚಿಕ್ಕಪ್ಪ ಅರೆಸ್ಟ