ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಜರ್ಮನಿಯಲ್ಲಿ ವೇಶ್ಯೆಯರಿಂದ ಸೆಕ್ಸ್ ಟ್ಯಾಕ್ಸ್ ವಸೂಲಿ! (Sex news | Sex tax metres | Latest News in Kannada | Kannada News | Germany | introduces sex tax metres | International News in Kannada | Internatio)
ಜರ್ಮನಿಯಲ್ಲಿ ವೇಶ್ಯೆಯರಿಂದ ಸೆಕ್ಸ್ ಟ್ಯಾಕ್ಸ್ ವಸೂಲಿ!
ಲಂಡನ್, ಶುಕ್ರವಾರ, 2 ಸೆಪ್ಟೆಂಬರ್ 2011( 09:40 IST )
ಜರ್ಮನಿಯಲ್ಲಿ ವೇಶ್ಯಾವೃತ್ತಿಯನ್ನು ಕಾನೂನು ಬದ್ಧಗೊಳಿಸಲಾಗಿದ್ದು, ವಿಶ್ವದ ಅತಿ ಪುರಾತನ ನಗರ ಬಾನ್‌ನ ಬೀದಿ ಬದಿಯ ಲೈಂಗಿಕ ಕಾರ್ಯಕರ್ತೆಯರಿಗೆ ಜರ್ಮನಿ ಸರಕಾರ ಸೆಕ್ಸ್ ಟ್ಯಾಕ್ಸ್ ಮೀಟರ್ ಸುಂಕವನ್ನು ಜಾರಿಗೊಳಿಸಿದೆ.
ಲೈಂಗಿಕ ಕಾರ್ಯಕರ್ತರು ಪಶ್ಚಿಮ ಜರ್ಮನಿಯ ರಾಜಧಾನಿ ಬಾನ್‌ನಲ್ಲಿ ತಮ್ಮ ಕೆಲಸವನ್ನು ಆರಂಭಿಸುವ ಮುನ್ನ ರಸ್ತೆ ಬದಿ ಇರುವ ವೆಂಡಿಂಗ್ ಮಿಷನ್‌ಗಳಿಂದ ಟೆಕೆಟ್ ಪಡೆಯಬೇಕು. ಬಾನ್ ನಗರದಲ್ಲಿ ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಿದ್ದು, ರಾತ್ರಿ 8.15ರಿಂದ ಬೆಳಗ್ಗೆ 6 ಗಂಟೆಯವರೆಗೂ ಈ ವೃತ್ತಿ ನಡೆಸಲು ಅವಕಾಶವಿದೆ.
ರಾತ್ರಿ ವೇಳೆ ಖರೀದಿಸುವ ಟೆಕೆಟ್‌ನಲ್ಲಿ ಲೈಂಗಿಕ ಕಾರ್ಯಕರ್ತೆಯರಿಗೆ 5.30 ಪೌಂಡ್ ವಾಪಸ್ ನೀಡಲಾಗುತ್ತದೆ. ಈ ಮೊತ್ತವು ಅವರಿಗೆ ಆಗಮಿಸುವ ಗ್ರಾಹಕರ ಸಂಖ್ಯೆಯ ಮೇಲೆ ನಿರ್ಧಾರವಾಗುತ್ತದೆ ಎಂದು ದಿ ಡೈಲಿ ಟೆಲಿಗ್ರಾಫ್ ಪತ್ರಿಕೆ ವರದಿ ಮಾಡಿದೆ.
ಪಾರ್ಕಿಂಗ್ ಮೀಟರ್ ಮಾದರಿಯಲ್ಲಿರುವ ವೆಂಡಿಂಗ್ ಮಿಷನ್‌ಗಳ ಮಾದರಿಯಲ್ಲಿರುವ ಸೆಕ್ಸ್ ಟಿಕೆಟ್ ಮಿಷನ್‌ಗಳು ಕಾರ್ಯನಿರ್ವಹಿಸುತ್ತಿವೆ. ಬಳಕೆದಾರರಿಗೆ ಯಾವಾಗ ಟಿಕೆಟ್ ಅಗತ್ಯವಿದೆ ಎಂಬುದನ್ನೂ ಸಹ ಮಿಷನ್ ಮಾಹಿತಿ ನೀಡುತ್ತದೆ. ಸೋಮವಾರದಿಂದ ಭಾನುವಾರದವರೆಗೆ ಪ್ರತಿದಿನ ರಾತ್ರಿ 8.15ರಿಂದ ಬೆಳಗ್ಗೆ 6 ಗಂಟೆಯ ವರೆಗೂ ಅನುಮತಿ ಇರುವ ಬಗ್ಗೆ ಈ ಯಂತ್ರಗಳ ಮೂಲಕವೇ ಮಾಹಿತಿ ನೀಡಲಾಗುತ್ತದೆ.
ಟಿಕೆಟ್ ಇಲ್ಲದೇ ಕಾರ್ಯನಿರ್ವಹಿಸುವ ಲೈಂಗಿಕ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರೆ ಅವರಿಗೆ ದಂಡ ವಿಧಿಸುವುದಲ್ಲದೇ ಲೈಂಗಿಕ ವೃತ್ತಿಯಿಂದಲೇ ನಿಷೇಧಿಸಲಾಗುತ್ತದೆ.
ಈ ಕುರಿತು ಮಾತನಾಡಿರುವ ಬಾನ್ ನಗರಸಭೆಯ ವಕ್ತಾರೆ ಮೋನಿಕಾ ಫ್ರೋಮ್‌ಗೆನ್, ಟಿಕೆಟ್ ಯಂತ್ರಗಳು ರಸ್ತೆ ಬದಿಯ ವೇಶ್ಯಾವಾಟಿಕೆ ನಡೆಸುವವರಿಂದ ನಗರದ ಆಡಳಿತಕ್ಕೆ ಆದಾಯ ತರುವುದಲ್ಲದೇ ಅವರನ್ನು ನೋಂದಾಯಿತ ಲೈಂಗಿಕ ಸಂಸ್ಥೆಗಳೊಂದಿಗೆ ಅವರು ಸಮಾನತೆ ಕಾಯ್ದುಕೊಳ್ಳಲು ಇದು ಸಹಕಾರಿಯಾಗಿದೆ ಎಂದು ತಿಳಿಸಿದ್ದಾರೆ.
ವೇಶ್ಯಾಗೃಹಗಳು ಹಾಗೂ ಸೌನಾ ಕ್ಲಬ್‌ಗಳು ಈ ಗಾಗಲೇ ತೆರಿಗೆ ಪಾವತಿಸುತ್ತಿದ್ದು, ರಸ್ತೆ ಬದಿಯ ಲೈಂಗಿಕ ಕಾರ್ಯಕರ್ತೆಯರಿಂದಲೂ ಕ್ರಮಬದ್ಧವಾಗಿ ತೆರಿಗೆ ಸಂಗ್ರಹಿಸಲು ಇದು ಸಹಕಾರಿಯಾಗಿದೆ ಎಂದು ಬಾನ್ ನಗರ ಸಭೆ ವಕ್ತಾರೆ ಮೋನಿಕಾ ಫ್ರೋಮ್‌ಗೆನ್ ಹೇಳಿಕೆಯನ್ನು ಉಲ್ಲೇಖಿಸಿ ದಿ ಡೈಲಿ ಟೆಲಿಗ್ರಾಫ್ ಪತ್ರಿಕೆ ವರದಿ ಮಾಡಿದೆ.
ಬಾನ್ ನಗರದಲ್ಲಿ ಸುಮಾರು 200 ಲೈಂಗಿಕ ಕಾರ್ಯಕರ್ತೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ಜರ್ಮನಿಯ ಬೀದಿಗಳಲ್ಲಿ ಇದೇ ಮೊದಲ ಬಾರಿಗೆ ಸೆಕ್ಸ್ ಟ್ಯಾಕ್ಸ್ ಟಿಕೆಟ್‌ಗಳನ್ನು ಮಾರಾಟ ಮಾಡಲಾಗುತ್ತಿದೆ.