ಸೆಕ್ಸ್ ಮಾಡೋವಾಗ ಲಂಗ ಧರಿಸಲು ನಿರಾಕರಿಸಿದ್ದಕ್ಕೆ ಪತಿ ಗರಂ!
ಕೌಲಾಲಂಪುರ್, ಶುಕ್ರವಾರ, 2 ಸೆಪ್ಟೆಂಬರ್ 2011( 19:31 IST )
ಪತಿ ಪತ್ನಿಯರ ನಡುವೆ ನಡೆದ ಜಗಳ ರಾತ್ರಿಯಾಗುತ್ತಿದ್ದಂತೆ ಕೊನೆಗೊಳ್ಳುತ್ತದೆ. ಎಷ್ಟೇ ಆದರೂ ಹಂಡ ಹೆಂಡಿರ ಜಗಳ ಉಂಡು ಮಲಗುವ ತನಕ ಅಲ್ಲವೇ? ಆದರೆ ಇಲ್ಲಿ ಆಗಿದ್ದೇ ಬೇರೆ. ಉಂಡು ಮಲಗಿದ ನಂತರದ ಕ್ರಿಯೆಯಲ್ಲಿ ಉಡುಗೆಯ ಕುರಿತು ಭಿನ್ನಾಭಿಪ್ರಾಯ ಏರ್ಪಟ್ಟಿತ್ತು. ಅಷ್ಟಕ್ಕೂ ಆಗಿದ್ದೇನು ಗೊತ್ತೆ? ಲೈಂಗಿಕ ಕ್ರಿಯೆ ನಡೆಸುವ ಸಂದರ್ಭದಲ್ಲಿ ಲಂಗ ಧರಿಸಲು ಹೆಂಡತಿ ನಿರಾಕರಿಸಿರುವುದು.
ಸಿಂಗಾಪುರ ಮೂಲದ ವಾಂಗ್ ವೆನ್‌ಯುವಾನ್ ಬಾತುಕೋಳಿ ಮಾಂಸ ಖಾದ್ಯದ ಅಂಗಡಿ ನಡೆಸುತ್ತಿದ್ದು, ಚೀನಾ ಮೂಲದ ಯುವತಿಯೊಬ್ಬಳನ್ನು ಮದುವೆಯಾಗಿದ್ದ ಎಂದು ಸಿನ್ ಚ್ಯೂ ದೈನಿಕ ವರದಿ ಮಾಡಿದೆ.
ತಮ್ಮಿಬ್ಬರ ನಡುವೆ ಆದ ಪರಿಚಯ ಪ್ರೇಮಕ್ಕೆ ತಿರುಗಿದ್ದರಿಂದ ಆಕೆಯೊಂದಿಗೆ ಮದುವೆಯಾಗಿದ್ದಾಗಿ ವಾಂಗ್ ವೆನ್ ಯುವಾನ್ ಹೇಳಿಕೆಯನ್ನು ಉಲ್ಲೇಖಿಸಿ ಸ್ಟಾರ್ ಆನ್‌ಲೈನ್ ವರದಿ ಮಾಡಿದೆ.
ಲೈಂಗಿಕ ಕ್ರಿಯೆ ನಡೆಸುತ್ತಿದ್ದ ಸಂದರ್ಭದಲ್ಲಿ ಲಂಗ ಧರಿಸಲು ನಿರಾಕರಿಸಿದ್ದಕ್ಕಾಗಿ ವೆನ್‌ಯುವಾನ್ ತನ್ನ 27 ವರ್ಷದ ಪತ್ನಿಯನ್ನು ಎರಡು ತಿಂಗಳ ಕಾಲ ನಿರ್ಲಕ್ಷಿಸುವ ಮೂಲಕ ತನ್ನ ಸಿಟ್ಟನ್ನು ತೋರ್ಪಡಿಸಿದ್ದ. ಒಟ್ಟಾರೆ ಇದರಿಂದ ಕಂಗೆಟ್ಟು ಹೋದ ಪತ್ನಿ ಎರಡು ತಿಂಗಳ ನಂತರ ವೆನ್ ವಾನ್‌ನ ಬಯಕೆಯಂತೆಯೇ ಲೈಂಗಿಕ ಕ್ರಿಯೆ ಸಂದರ್ಭದಲ್ಲಿ ಲಂಗ ಧರಿಸುವುದಾಗಿ ಒಪ್ಪಿಕೊಂಡಿದ್ದಳು.
ಮೊದಲ ರಾತ್ರಿಯಂದು 100 ಡಾಲರ್ ಹಾಗೂ ಪ್ರತಿ ತಿಂಗಳೂ 300 ಡಾಲರ್ ನೀಡುವುದಾಗಿ ಭರವಸೆ ನೀಡಿದ್ದಾಗಿ ವೆನ್ ಯುವಾನ್ ತಿಳಿಸಿದ್ದಾನೆ.
ಇದಾದ ಎರಡು ವಾರಗಳ ನಂತರವೂ ಆಕೆ ಆತನ ಸೆಕ್ಸ್ ಸ್ಕರ್ಟ್ ಬೇಡಿಕೆಯನ್ನು ಈಡೇರಿಸಲು ನಿರಾಕರಿಸಿದ್ದರಿಂದ ಮತ್ತೆ ಆಕೆಯನ್ನು ಮನೆಯಿಂದ ಹೊರಹಾಕಿದ್ದಾನೆ.