ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಓಡಿ ಹೋಗಲು ನಾವೇನು ಹೆಂಗಸರಲ್ಲ : ಮುಅಮ್ಮರ್‌ ಗಡಾಫಿ (Muammar Gaddafi Libya Fugitive leader, International News in Kannada, Latest International News)
ಓಡಿ ಹೋಗಲು ನಾವೇನೂ ಹೆಂಗಸರಲ್ಲ, ಲಿಬಿಯಾವನ್ನು ಮತ್ತೆ ವಶಕ್ಕೆ ತೆಗೆದುಕೊಳ್ಳುವವರೆಗೂ ಹೋರಾಟ ಮುಂದುವರಿಸುತ್ತೇವೆ ಎಂದು ಬಂಡುಕೋರರ ದಾಳಿಯಿಂದ ಕಂಗಾಲಾಗಿ ಅಡಗಿ ಕುಳಿತುರುವ ಲಿಬಿಯಾ ಸರ್ವಾಧಿಕಾರಿ ಮುಅಮ್ಮರ್‌ ಗಡಾಫಿ ಗುಡುಗಿರುವ ಪರಿ ಇದು.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಮುಅಮ್ಮರ್‌ ಗಡಾಫಿಯ 42 ವರ್ಷಗಳ ನಿರಂಕುಶ ಆಡಳಿತದಿಂದ ಬೇಸತ್ತಿದ್ದ ಲಿಬಿಯಾ ಜನರು ಆತನ ವಿರುದ್ಧ ಬಂಡೆದ್ದಿದರು. ದುರಾಡಳಿತವನ್ನು ಹತ್ತಿಕ್ಕಲು ಹೊರಟ ಬಂಡುಕೋರ ಪಡೆಗೆ ನ್ಯಾಟೋ ಪಡೆಗಳೂ ಸಹ ಸಹಾಯ ನೀಡಿದ್ದರಿಂದ ಆತನ ಸಾಮ್ರಾಜ್ಯ ಪತನವಾಗಿದ್ದು, ಜೀವ ಉಳಿಸಿಕೊಳ್ಳಲು ಅಡಗಿ ಕುಳಿತಿರುವ ಗಡಾಫಿ ತೆರೆಮರೆಯಿಂದಲೇ ತನ್ನ ಸಹಚರರಿಗೆ ಸೂಚನೆ ನೀಡುತ್ತಿದ್ದಾರೆ.

ಲಿಬಿಯಾದಲ್ಲಿ ಸುದೀರ್ಘ ಕದನ ಮುಂದುವರಿದಿದ್ದು, ದೇಶ ಹೊತ್ತಿ ಉರಿಯುತ್ತಿದೆ. ನಾವು ಲಿಬಿಯಾವನ್ನು ಬಂಡುಕೋರರ ಕೈಯಿಂದ ವಶಪಡಿಸಿಕೊಳ್ಳಲು ಹೋರಾಡುತ್ತೇವೆ, ನಾವು ಹೆಂಗಸರಲ್ಲ ಎಂದು ಲಿಬಿಯಾ ಅಧ್ಯಕ್ಷ ಮುಅಮ್ಮರ್‌ ಗಡಾಫಿ ಹೇಳಿಕೆಯನ್ನು ಉಲ್ಲೇಖಿಸಿ ಅರೇಬಿಯಾ ಟಿವಿ ಚಾನಲ್‌ಗಳು ವರದಿ ಮಾಡಿವೆ.

ಲಿಬಿಯಾದ ರಾಜರ ಆಡಳಿತವನ್ನು ಅಂತ್ಯಗೊಳಿಸುವ ಮೂಲಕ ಅಧಿಕಾರ ಸ್ವೀಕರಿಸಿದ 42ನೇ ವರ್ಷಾಚರಣೆ ಸಂದರ್ಭದಲ್ಲಿ ಲಿಬಿಯಾಧ್ಯಕ್ಷ ಮುಅಮ್ಮರ್‌ ಗಡಾಫಿ ಈ ಹೇಳಿಕೆ ನೀಡಿದ್ದಾರೆ. ಸೇನಾ ನಾಯಕರಾಗಿದ್ದ ಮುಅಮ್ಮರ್‌ ಗಡಾಫಿ 1969ರಲ್ಲಿ ರಾಜರ ಆಡಳಿತವನ್ನು ಅಂತ್ಯಗೊಳಿಸಿ ಅಧಿಕಾರಕ್ಕೇರಿದ್ದರು. ಆಗ ಅವರಿಗೆ ಕೇವಲ 27ವರ್ಷ. ಅಂದಿನಿಂದ ಕಳೆದ ಮಂಗಳವಾರದ ವರೆಗೂ ಅಧಿಕಾರ ನಡೆಸುತ್ತಿದ್ದ ಮುಅಮ್ಮರ್‌ ಗಡಾಫಿ ಬಂಡುಕೋರರ ಪ್ರತಿರೋಧದಿಂದಾಗಿ ತಲೆ ತಪ್ಪಿಸಿಕೊಂಡು ಅಜ್ಞಾತವಾಸ ನಡೆಸುತ್ತಿದ್ದಾರೆ.

ಲಿಬಿಯಾಧ್ಯಕ್ಷ ಮುಅಮ್ಮರ್‌ ಗಡಾಫಿ ಲಿಬಿಯಾ ರಾಜಧಾನಿ ಟ್ರಿಪೋಲಿಯಲ್ಲಿರುವ ತಮ್ಮ ಅಲ್‌ ಅಜೀಜಿಯಾ ಕಾಂಪೌಂಡ್‌ನಲ್ಲಿದ್ದಾರೆ ಎನ್ನುವ ಕುರಿತು ಭಿನ್ನಾಭಿಪ್ರಾಯಗಳಿರುವ ಬೆನ್ನಲ್ಲೇ ಮುಅಮ್ಮರ್‌ ಗಡಾಫಿ ಟ್ರಿಪೋಲಿಯ ಹೊರಗಿರುವ ನಗರವೊಂದರಲ್ಲಿ ತಮ್ಮ ಪುತ್ರ ಸೈಫ್‌ ಅಲ್‌ ಇಸ್ಲಾಂ ಹಾಗೂ ಗುಪ್ತಚರ ಇಲಾಖೆ ಅಧಿಕಾರಿ ಅಬ್‌ಉಲ್ಲಾ ಅಲ್‌ ಸೆನ್ನೂಸಿ ಜೊತೆ ಇದ್ದಾರೆ ಎಂದು ಲಿಬಿಯಾ ಮಧ್ಯಂತರ ಸರಕಾರದ ಮಿಲಿಟರಿ ಕಮಾಂಡರ್‌
ಹೇಳಿದ್ದಾರೆ. ಲಿಬಿಯಾ ಅಧ್ಯಕ್ಷ ಮುಅಮ್ಮರ್‌ ಗಡಾಫಿ, ಅವರ ಪುತ್ರ ಸೈಫ್‌ ಅಲ್‌ ಇಸ್ಲಾಂ ಹಾಗೂ ಗುಪ್ತಚರ ಇಲಾಖೆ ಅಧಿಕಾರಿ ಅಬ್‌ಉಲ್ಲಾ ಅಲ್‌ ಸೆನ್ನೂಸಿ ಅವರು ಅಮಾನವೀಯವಾಗಿ ವರ್ತಿಸಿದ್ದಕ್ಕಾಗಿ ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾಗಿದ್ದು, ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

ಲಿಬಿಯಾ ಅಧ್ಯಕ್ಷ ಮುಅಮ್ಮರ್‌ ಗಡಾಫಿ ಎಲ್ಲೋ ಬದುಕಿದ್ದಾರೆ ಎಂದು ನಾವು ನಂಬಿದ್ದೇವೆ ಎಂದು ಟ್ರಿಪೋಲಿ ಸೇನಾ ಕಾರ್ಯಾಚರಣೆಯ ಸಮನ್ವಯಕಾರ ಅಬ್ಡೆಲ್‌ ಮಜೀದ್‌ ಮ್ಲೆಗ್‌ತಾ, ಟ್ರಿಪೋಲಿ ಪತನವಾದ ಮೂರುದಿನಗಳ ನಂತರ ಬನಿ ವಾಲೀದ್‌ ನಗರಕ್ಕೆ ಮುಅಮ್ಮರ್‌ ಗಡಾಫಿ ಓಡಿಹೋಗಿದ್ದರು ಎಂದು ತಿಳಿಸಿದ್ದಾರೆ.

ಲಿಬಿಯಾ ಅಧ್ಯಕ್ಷ ಮುಅಮ್ಮರ್‌ ಗಡಾಫಿ, ಗಡಿ ಪಟ್ಟಣವಾದ ಗಢಾಮೀಸ್‌ನಲ್ಲಿದ್ದು, ತಮಗೆ ಆಶ್ರಯ ನೀಡುವಂತೆ ಅಲ್ಜೀರಿಯಾ ಅಧ್ಯಕ್ಷ ಅಬ್ಡೆಲ್‌ ಅಜೀಜ್‌ ಬೌಟೇ‌ಫ್ಲಿಕಾ ಅವರಿಗೆ ಮನವಿ ಮಾಡಲು ಯತ್ನಿಸುತ್ತಿದ್ದಾರೆ. ಆದರೆ ಮುಅಮ್ಮರ್‌ ಗಡಾಫಿ ಅವರ ಮನವಿಯನ್ನು ಅಲ್ಜೀರಿಯಾ ಅಧ್ಯಕ್ಷ ಅಬ್ಡೆಲ್‌ ಅಜೀಜ್‌ ಬೌಟೇ‌ಫ್ಲಿಕಾ ಸ್ವೀಕರಿಸಿಲ್ಲ ಎಂದು ಅಲ್ಜೀರಿಯಾ ದಿನ ಪತ್ರಿಕೆಯೊಂದು ತಿಳಿಸಿದೆ. ಲಿಬಿಯಾ ಅಧ್ಯಕ್ಷ ಮುಅಮ್ಮರ್‌ ಗಡಾಫಿಯ ಪತ್ನಿ, ಒಬ್ಬ ಪುತ್ರಿ ಹಾಗೂ ಇಬ್ಬರು ಪುತ್ರರಿಗೆ ಅಲ್ಜೀರಿಯಾ ಆಶ್ರಯ ನೀಡಿತ್ತು.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಮುಅಮ್ಮರ್ ಗಡಾಫಿ, ಲಿಬಿಯಾ ಸರ್ವಾಧಿಕಾರಿ, ಕನ್ನಡ ಸುದ್ದಿ, ಕರ್ನಾಟಕ ಸುದ್ದಿ, ರಾಷ್ಟ್ರೀಯ ಸುದ್ದಿ, ಬ್ರೇಕಿಂಗ್ ನ್ಯೂಸ್, ತಾಜಾ ಕನ್ನಡ ಸುದ್ದಿ, ರಾಜಕೀಯ, ಬೆಂಗಳೂರು ಸುದ್ದಿ, ಫಾರಿನ್ ಸುದ್ದಿ, ಅಂತಾರಾಷ್ಟ್ರೀಯ, ಅಂತರರಾಷ್ಟ್ರೀಯ, ಅಂತರ್ರಾಷ್ಟ್ರೀಯ ಸುದ್ದಿ