ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಚಂದ್ರಲೋಕದಲ್ಲೂ ಪಿಜ್ಜಾ ರೆಸ್ಟೋರೆಂಟ್ ಓಪನ್...! (Domino's | Pizza restaurant | Moon |International News in Kannada | Latest World News)
ಜನನಿಬಿಡ ಪ್ರದೇಶ, ಪ್ರಮುಖ ನಗರಗಳಲ್ಲಿ ಪಿಜ್ಜಾ ತನ್ನ ಮಾರುಕಟ್ಟೆ ವಿಸ್ತರಿಸಲು ಪೈಪೋಟಿ ನಡೆಸುತ್ತಿರುವ ನಡುವೆಯೇ ಇದೀಗ, ಡೊಮಿನೋಸ್‌ ಪಿಜ್ಜಾ ಕಂಪನಿ ಚಂದ್ರ ಗ್ರಹದಲ್ಲಿ ಮೊದಲ ಪಿಜ್ಜಾ ರೆಸ್ಟೋರೆಂಟ್‌ ಆರಂಭಿಸುವುದಾಗಿ ತಿಳಿಸಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಡೊಮಿನೋಸ್‌ ಪಿಜ್ಜಾದ ವೈರಿ ಚೈನ್‌ ಪಿಜ್ಜಾ ಹಟ್‌ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ಗಗನ ಯಾತ್ರಿಗಳಿಗೆ 2001ರಲ್ಲಿ ಪಿಜ್ಜಾ ನೀಡಿತ್ತು. ಜಪಾನ್‌ನಲ್ಲಿ ಪಿಜ್ಜಾ ಕೇಂದ್ರ ಆರಂಭಿಸಿದ 25ನೇ ವರ್ಷಾಚರಣೆಯ ಅಂಗವಾಗಿ ಡೊಮೊನೋ ಪಿಜ್ಜಾ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಪಿಜ್ಜಾ ಹಟ್‌ಗೆ ತಿರುಗೇಟು ನೀಡಿತ್ತು.

ಪ್ರಮುಖ ನಿರ್ಮಾಣ ಸಂಸ್ಥೆ ಮೇದಾ ಕಾರ್ಪ್‌ ಚಂದ್ರನ ಮೇಲೆ ಗುಮ್ಮಟ ಮಾದರಿಯ ಕಾಂಕ್ರಿಟ್‌ ಡೊಮಿನೊನೋಸ್‌ ರೆಸ್ಟೋರೆಂಟ್‌ ನಿರ್ಮಿಸಲು ಮುಂದಾಗಿದೆ.

ಚಂದ್ರನ ಮೇಲೆ ಪಿಜ್ಜಾ ರೆಸ್ಟೋರೆಂಟ್‌ ನಿರ್ಮಿಸಲು 1300 ಕೋಟಿ ಪೌಂಡ್‌ ಹಾಗೂ 15 ರಾಕೆಟ್‌ಗಳ ಮೂಲಕ 70 ಟನ್‌ ಕಟ್ಟಡ ನಿರ್ಮಾಣ ಸಾಮಗ್ರಿ ಹಾಗೂ ಪಿಜ್ಜಾ ತಯಾರಿಕೆ ಯಂತ್ರ ಸಾಗಣೆಗೆ 450 ಕೋಟಿ ಪೌಂಡ್‌ ವೆಚ್ಛವಾಗಲಿದೆ ಎಂದು ಕಂಪನಿ ಅಂದಾಜಿಸಿದೆ.

ಕಾಂಕ್ರಿಟ್‌ ತಯಾರಿಕೆಗೆ ಚಂದ್ರ ಗ್ರಹದ ಮೇಲಿರುವ ಖನಿಜಾಂಶವನ್ನು ಬಳಸಿಕೊಳ್ಳುವ ಮೂಲಕ 150 ಕೋಟಿ ಪೌಂಡ್‌ ವೆಚ್ಚ ಕಡಿತ ಮಾಡಲಾಗುತ್ತದೆ ಎಂದು ಡೊಮಿನೋಸ್ ಕಂಪನಿ ತಿಳಿಸಿದೆ.

ರೆಸ್ಟೋರೆಂಟ್‌ನ ಎರಡು ಅಂತಸ್ತಿನ 26 ಮೀಟರ್‌ ವ್ಯಾಸದ ಕಟ್ಟಡದ ಚಿತ್ರವನ್ನು ಕಲಾವಿದನೊಬ್ಬ ಬರೆದಿದ್ದು, ಕಟ್ಟಡದ ತಳಪಾಯವು ಕಬ್ಬಿಣದಿಂದ ನಿರ್ಮಾಣವಾಗುತ್ತದೆ. ಚಿತ್ರದಲ್ಲಿ ಪಿಜ್ಜಾ ನಿರ್ಮಾಣವಾಗುವ ಸ್ಥಳವನ್ನೂ ತೋರಿಸಲಾಗಿದೆ.

ಅಂತರಿಕ್ಷದಲ್ಲಿ ಪಿಜ್ಜಾ ರೆಸ್ಟೋರೆಂಟ್‌ ನಿರ್ಮಾಣದ ಬಗ್ಗೆ ನಾವು ಕಳೆದ ವರ್ಷವೇ ಯೋಚಿಸಿದ್ದೆವು ಆದರೆ ಇದು ಯಾವಾಗ ಆರಂಭವಾಗಬೇಕು ಎಂಬುದನ್ನು ಇನ್ನೂ ನಿರ್ಧರಿಸಿಲ್ಲ ಎಂದು ಡೊಮಿನೋಸ್‌ ಪಿಜ್ಜಾದ ಟೋಮೋ ಹೈಡ್‌ ಮಾತ್ಸುಂಗಾ ಡೈಲಿ ಟೆಲಿಗ್ರಾಫ್‌ಗೆ ತಿಳಿಸಿದ್ದಾರೆ.

ಮುಂಬರುವ ದಿನಗಳಲ್ಲಿ ಬಹಳಷ್ಟು ಜನರು ಚಂದ್ರಗ್ರಹದಲ್ಲಿ ವಾಸಿಸುತ್ತಾರೆ, ಅಂತರಿಕ್ಷ ಯಾನಿಗಳು ಜನರು ಚಂದ್ರನ ಮೇಲೆ ವಾಸಿಸಲು ಅಗತ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಡೊಮಿನೋಸ್ ಪಿಜ್ಜಾ, ಚಂದ್ರಲೋಕದಲ್ಲೂ ಪಿಜ್ಜಾ ರೆಸ್ಟೋರೆಂಟ್, ಕನ್ನಡ ಸುದ್ದಿ, ಕರ್ನಾಟಕ ಸುದ್ದಿ, ರಾಷ್ಟ್ರೀಯ ಸುದ್ದಿ, ಬ್ರೇಕಿಂಗ್ ನ್ಯೂಸ್, ತಾಜಾ ಕನ್ನಡ ಸುದ್ದಿ, ರಾಜಕೀಯ, ಬೆಂಗಳೂರು ಸುದ್ದಿ, ಫಾರಿನ್ ಸುದ್ದಿ, ಅಂತಾರಾಷ್ಟ್ರೀಯ, ಅಂತರರಾಷ್ಟ್ರೀಯ, ಅಂತರ್ರಾಷ್ಟ್ರೀಯ ಸುದ್ದಿ