ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕಿಸ್ತಾನದಲ್ಲಿ ಯುವಕರಿಗೆ ಲಷ್ಕರ್ ತರಬೇತಿ: ಅಮೆರಿಕ
(Lashkar-e-Toiba | Commando training | Pakistan | FBI | InternationalLatest News in Kannada | Kannada News | International News in Kannada)
ಪಾಕಿಸ್ತಾನದಲ್ಲಿ ಯುವಕರಿಗೆ ಲಷ್ಕರ್ ತರಬೇತಿ: ಅಮೆರಿಕ
ವಾಷಿಂಗ್ಟನ್, ಶನಿವಾರ, 3 ಸೆಪ್ಟೆಂಬರ್ 2011( 15:41 IST )
ಲಷ್ಕರ್ ಎ ತೊಯ್ಬಾ ಉಗ್ರಗಾಮಿ ಸಂಘಟನೆ ಪಾಕಿಸ್ತಾನದಲ್ಲಿರುವ ಉಗ್ರರ ಶಿಬಿರಗಳಲ್ಲಿ ಯುವಕರಿಗೆ ಕಮಾಂಡೋ ತರಬೇತಿ ನೀಡುತ್ತಿದೆ ಎಂದು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ದೂರು ನೀಡಿದೆ.
ಅಮೆರಿಕದ ವರ್ಜೀನಿಯಾದಲ್ಲಿರುವ ನ್ಯಾಯಾಲಯಕ್ಕೆ ದೂರು ನೀಡಿದ ಎಫ್‌ಬಿಐ, ಲಷ್ಕರ್ ಎ ತೊಯ್ಬಾಗೆ ನೆರವು ನೀಡಿದ ಆಪಾದನೆಯ ಮೇರೆಗೆ ಪಾಕಿಸ್ತಾನ ಮೂಲದ ಜುಬೇರ್ ಅಹಮದ್ ಅವರನ್ನು ಬಂಧಿಸಿದ ಸಂದರ್ಭದಲ್ಲಿ ಎಫ್‌ಬಿಐ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ಈ ವಿಷಯವನ್ನು ತಿಳಿಸಿದೆ.
ವಲಸೆ ದಾಖಲೆಗಳನ್ನು ಗಮನಿಸಿದಾಗ ಜುಬೇರ್ ಪಾಕಿಸ್ತಾನದ ಸಿಯಾಲ್‌ಕೋಟ್‌ನಲ್ಲಿ ಜನಿಸಿದ್ದು,19 ವರ್ಷವಾಗುವ ತನಕ ಪಾಕಿಸ್ತಾನದಲ್ಲೇ ಇದ್ದ ಎಂದು ನ್ಯಾಯಾಲಯಕ್ಕೆ ಎಫ್‌ಬಿಐ ತಿಳಿಸಿದೆ.
ಜುಬೇರ್ ಪಾಕಿಸ್ತಾನದಲ್ಲಿದ್ದಾಗ ಆತ ಲಷ್ಕರ್ ಎ ತೊಯ್ಬಾ ಉಗ್ರಗಾಮಿ ಸಂಘಟನೆಯಿಂದ ತರಬೇತಿ ಪಡೆದಿದ್ದ ಎಂದು ಆತನ ಬಗ್ಗೆ ತನಿಖೆ ನಡೆಸಿದ ಸಂದರ್ಭದಲ್ಲಿ ತಿಳಿದುಬಂದಿದೆ ಎಂದು ಎಫ್‌ಬಿಐ ವಿವರಿಸಿದೆ.
ಜುಬೇರ್ 2004ರಲ್ಲಿ ನಡೆಸಿದ ಸಂಪರ್ಕವನ್ನು ಗಮನಿಸಿದಾಗ ಆತ ದೋರಾ ಸೂಫಾದಲ್ಲಿ ನಡೆದ ಉಗ್ರಗಾಮಿಗಳ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಆತ ಇಸ್ಲಾಂ ತತ್ವ ಸಿದ್ಧಾಂತ ಹಾಗೂ ಮತಾಂತರದ ಬಗ್ಗೆ ಆತ ತರಬೇತಿ ಪಡೆದಿದ್ದ ಎಂದು ಎಫ್‌ಬಿಐ ಸಲ್ಲಿಸಿದ್ದ ದೂರಿನಲ್ಲಿ ತಿಳಿಸಲಾಗಿದೆ.
ಡೋರಾ ಸೂಫಾ ಕ್ಯಾಂಪ್ ನಂತರ ಲಷ್ಕರ್ ಇ ತೊಯ್ಬಾದ ಮೂಲ ತರಬೇತಿ ಶಿಬಿರ ಡೋರಾ ಆಮಾ ಶಿಬಿರದಲ್ಲಿ ಪಾಲ್ಗೊಂಡಿದ್ದ ಜುಬೇರ್ ಅಲ್ಲಿ ಹೆಚ್ಚುವರಿ ಧಾರ್ಮಿಕ ಬೋಧನೆ ಹಾಗೂ ದೈಹಿಕ ನಿಯಂತ್ರಣ ಹಾಗೂ ಶಸ್ತ್ರಾಸ್ತ್ರಗಳ ಬಗ್ಗೆ ಮಾಹಿತಿ ಪಡೆದಿದ್ದ.
ಡೋರಾ ಆಮಾದಲ್ಲಿ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಉಪನ್ಯಾಸ ಕೇಳಿ, ಪ್ರಾರ್ಥನೆ ಸಲ್ಲಿಸಿ, ವ್ಯಾಯಾಮ ನಡೆಸಿ, ಬಂದೂಕು ಎತ್ತಿಕೊಂಡು ಗುಂಡು ಹಾರಿಸಿ ಎಂದು ತನಗೆ ತರಬೇತಿ ನೀಡಲಾಗಿತ್ತು ಎಂದು ಜುಬೇರ್ ತಿಳಿಸಿದ್ದಾಗಿ ಎಫ್‌ಬಿಐ ತಿಳಿಸಿದೆ.
ಮುಂದಿನ ಹಂತವಾಗಿ ಲಷ್ಕರ್ ಎ ತೊಯ್ಬಾ ತರಬೇತಿ ಶಿಬಿರದಲ್ಲಿ ಕಮಾಂಡೋ ತರಬೇತಿ ನೀಡಲಾಗಿತ್ತು ಎಂದು ಜುಬೇರ್ ತಿಳಿಸಿದ್ದಾನೆ.
ಜುಬೇರ್ ಒಂದು ವಾರ ತರಬೇತಿ ಪಡೆದ ನಂತರ ಮಾರ್ಗದರ್ಶಕನೊಬ್ಬ ನೀನಿನ್ನೂ ಚಿಕ್ಕವನು ಎಂದು ಹೇಳಿದ್ದರಿಂದ ಜುಬೇರ್ ಶಿಬಿರವನ್ನು ತೊರೆದು ವ್ಯಾಸಂಗವನ್ನು ಮುಂದುವರಿಸಿದ್ದ. ಆನಂತರ ಆತ ದೋರಾ ಖಾಸಾ ಶಿಬಿರಕ್ಕೆ ಮರಳಿದ್ದ ಎಂದು ಎಫ್‌ಬಿಐ ವಿಶೇಷ ಅಧಿಕಾರಿ ದೌದ್ ಶಾ ಎಸ್ ಆಂಡಿಸ್ ತಿಳಿಸಿದ್ದಾರೆ.