ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಲ್ಜೀರಿಯಾದಲ್ಲಿ ಮುಅಮ್ಮರ್ ಗಡಾಫಿ ಕುಟುಂಬ ಅಲೆದಾಟ
(Muammar Gaddafi | Libyan leader | Algeria | Latest News in Kannada | Kannada News | International News in Kannada | Latest International News)
ಅಲ್ಜೀರಿಯಾದಲ್ಲಿ ಮುಅಮ್ಮರ್ ಗಡಾಫಿ ಕುಟುಂಬ ಅಲೆದಾಟ
ಕೈರೋ, ಶನಿವಾರ, 3 ಸೆಪ್ಟೆಂಬರ್ 2011( 16:18 IST )
ಅಲ್ಜೀರಿಯಾದಲ್ಲಿರುವ ಲಿಬಿಯಾ ಅಧ್ಯಕ್ಷ ಮುಅಮ್ಮರ್ ಗಡಾಫಿ ಅವರ ಕುಟುಂಬವನ್ನು ಸುರಕ್ಷತೆಯ ದೃಷ್ಟಿಯಿಂದ ರಾಜಧಾನಿ ಅಲ್ಜರೀಸ್‌ಗೆ ಸ್ಥಳಾಂತರಿಸಲು ನಿರ್ಧರಿಸಿದೆ ಎಂದು ಈಜಿಪ್ಟ್ ವೆಬ್‌ಸೈಟ್ ಅಲ್ ಅಹ್ರಾಮ್ ವರದಿ ಮಾಡಿದೆ.
ಲಿಬಿಯಾವನ್ನು ಬಂಡುಕೋರರು ವಶಪಡಿಸಿಕೊಂಡ ನಂತರ ಸರ್ವಾಧಿಕಾರಿ ಮುಅಮ್ಮರ್ ಗಡಾಫಿಯ ಪತ್ನಿ ಸಫಿಯಾ, ಪುತ್ರಿ ಐಷಾ ಹಾಗೂ ಇಬ್ಬರು ಪುತ್ರರಾದ ಮಹಮದ್ ಮತ್ತು ಹನ್ನಿಬಾಲ್ ಲಿಬಿಯಾದ ನೈಋತ್ಯ ಗಡಿಯ ಮೂಲಕ ಆಗಸ್ಟ್ 29ರಂದು ಅಲ್ಜೀರಿಯಾ ಪ್ರವೇಶಿಸಿದ್ದರು.
ಲಿಬಿಯಾ ಮುಖಂಡ ಮುಅಮ್ಮರ್ ಗಡಾಫಿ ಕುಟುಂಬದ ಸದಸ್ಯರು ಅಲ್ಜೀರಿಯಾ ರಾಜಧಾನಿ ಅಲ್ಜಿರೀಸ್‌ನಲ್ಲಿ ಗೃಹ ಬಂಧನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ವಿಶೇಷ ಪಡೆಗಳ ಸಹಾಯದಿಂದ ಅವರನ್ನು ಅಲ್ಜೀರಿಯಾಕ್ಕೆ ಕರೆದೊಯ್ಯಲಾಗಿದ್ದು, ಇದಕ್ಕಾಗಿ ವಿಶೇಷ ಪಡೆಯ ಪ್ರತಿಯೊಬ್ಬರಿಗೂ 15 ಸಾವಿರ ಡಾಲರ್ ನೀಡಲಾಗಿತ್ತು.
ಬಂಡುಕೋರರ ನೇತೃತ್ವದ ಲಿಬಿಯಾ ತಾತ್ಕಾಲಿಕ ಸರಕಾರ (ಎನ್‌ಟಿಸಿ), ಮುಅಮ್ಮರ್ ಗಡಾಫಿ ಕುಟುಂಬವನ್ನು ಗಡೀಪಾರು ಮಾಡುವಂತೆ ಅಲ್ಜೀರಿಯಾ ಸರಕಾರವನ್ನು ಒತ್ತಾಯಿಸಿದೆ.
ಲಿಬಿಯಾ ತೊರೆದ ಸಂದರ್ಭದಲ್ಲಿ ಗರ್ಭಿಣಿಯಾಗಿದ್ದ ಮುಅಮ್ಮರ್ ಗಡಾಫಿಯ ಪುತ್ರಿ ಐಷಾ ಅಲ್ಜೀರಿಯಾದಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡಿದ್ದಳು. ಐಷಾ ಗರ್ಭಿಣಿಯಾಗಿದ್ದರಿಂದಲೇ ಆಕೆಗೆ ಅಲ್ಜೀರಿಯಾ ಆಶ್ರಯ ನೀಡಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ.