ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮಹಿಳೆಯ ಹೊಟ್ಟೆಯಿಂದಲೇ ಮಗು ಕಳ್ಳತನ (Srilanka | Colombia | Unborn | Child | baby | Pregnant | Health news | Latest International News in Kannada)
ಮಹಿಳೆಯ ಹೊಟ್ಟೆಯಿಂದಲೇ ಮಗು ಕಳ್ಳತನ
ಬೊಗಾಟಾ, ಸೋಮವಾರ, 5 ಸೆಪ್ಟೆಂಬರ್ 2011( 10:44 IST )
ಹುಟ್ಟಿದ ಮಕ್ಕಳನ್ನು ಕದಿಯವ ಘಟನೆಗಳು ಸರ್ವೇ ಸಾಮಾನ್ಯ ಆದರೆ ಮಹಿಳೆಯೊಬ್ಬಳ ಹೊಟ್ಟೆಯಿಂದಲೇ ಮಗುವನ್ನು ಕದ್ದ ವಿಲಕ್ಷಣ ಘಟನೆ ಶ್ರೀಲಂಕಾದದಲ್ಲಿ ನಡೆದಿದೆ.
ಪ್ರಾಂತೀಯ ರಾಜಧಾನಿ ಸಂತ ಮಾರ್ತಾ ಸಮೀಪ ಈ ವಿಲಕ್ಷಣ ಘಟನೆ ನಡೆದಿದೆ ಎಂದು ಕರ್ನಲ್ ಸಿಸರ್ ಗ್ರಾಂಡೋಸ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ತನ್ನ ವೈಯಕ್ತಿಕ ಕೆಲಸದ ಮೇಲೆ ಸಂತ ಮಾರ್ತಾಕ್ಕೆ ಬಂದಿದ್ದ ಆಂಡ್ರಿಯಾ ಕರೋಲಿನಾ ಪಲ್ಲಾರೆಸ್‌ಗೆ ಅಪರಿಚಿತ ಮಹಿಳೆಯೊಬ್ಬಳು ಸಾರ್ವಜನಿಕ ಆರೋಗ್ಯ ತಪಾಸಣಾ ಶಿಬಿರದಲ್ಲಿ ತನ್ನ ಮಗುವಿನ ಹೆಸರು ನೋಂದಾಯಿಸಲು ಸಹಾಯ ಮಾಡುವಂತೆ ಕೋರಿದಳು.
ಇದಾದ ನಂತರ ಆಂಡ್ರಿಯಾ ಕರೋಲಿನಾ ಪಲ್ಲಾರೆಸ್‌ಳನ್ನು ಸಂತ ಮಾರ್ತಾದ ಹೊರಗಿನ ಮರಗಳಿಂದಾವೃತವಾದ ಪ್ರದೇಶಕ್ಕೆ ಕರೆದೊಯ್ಯಲಾಯಿತು. ಅಲ್ಲಿಗೆ ತನ್ನನ್ನು ಹೇಗೆ ಕರೆದೊಯ್ಯಲಾಯಿತು ಎಂಬುದು ಆಂಡ್ರಿಯಾ ಕರೋಲಿನಾ ಪಲ್ಲಾರೆಸ್‌ಗೆ ಗೊತ್ತಾಗಲಿಲ್ಲ.
ಕೆಲವು ಉಪಕರಣಗಳ ಸಹಾಯದಿಂದ ಆಕೆಯ ಹೊಟ್ಟೆಯನ್ನು ಕೊಯ್ದು ಮಗುವನ್ನು ಹೊರತೆಗೆದುಕೊಂಡ ದುಷ್ಕರ್ಮಿಗಳು ಆಕೆಯನ್ನು ಹಾಗೆಯೇ ಬಿಟ್ಟು ಪರಾರಿಯಾಗಿದ್ದಾರೆ.
ತೀವ್ರವಾಗಿ ಗಾಯಗೊಂಡಿದ್ದ ಆಂಡ್ರಿಯಾ ಕರೋಲಿನಾ ಪಲ್ಲಾರೆಸ್ ಕಷ್ಟಪಟ್ಟು ಸಮೀಪದ ಹೆದ್ದಾರಿ ತಲುಪಿದಳು. ಆಕೆಯನ್ನು ಕಂಡ ಸ್ಥಳೀಯರು ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಆಂಡ್ರಿಯಾ ಕರೋಲಿನಾ ಪಲ್ಲಾರೆಸ್ ಪರಿಸ್ಥಿತಿ ಗಂಭೀರವಾಗಿದ್ದರಿಂದ ಸಂತ ಮಾರ್ತಾದಲ್ಲಿರುವ ಸುಸಜ್ಜಿತ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಆಕೆ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಆಂಡ್ರಿಯಾ ಕರೋಲಿನಾ ಪಲ್ಲಾರೆಸ್‌ಳ ಹೊಟ್ಟೆಯನ್ನು ಅಡ್ಡಾದಿಡ್ಡಿ ಕತ್ತರಿಸಲಾಗಿದ್ದು, ಗರ್ಭಕೋಶವೂ ತೆರೆದುಕೊಂಡಿದೆ. ಹೊಟ್ಟೆಯೊಳಗೆ ರಕ್ತ ಮತ್ತು ಮರಳು ತುಂಬಿಕೊಂಡಿದ್ದು, ಆಕೆಯನ್ನು ಶಸ್ತ್ರ ಚಿಕಿತ್ಸೆಗೊಳಪಡಿಸಿ ಮರಳು ಮತ್ತು ರಕ್ತವನ್ನು ಹೊರತೆಗೆಯುವ ಮೂಲಕ ಸೋಂಕಿನಿಂದ ಪಾರುಮಾಡಲಾಗಿದೆ ಎಂದು ವೈದ್ಯಕೀಯ ವರದಿಯಲ್ಲಿ ತಿಳಿಸಲಾಗಿದೆ.
ಬಂಧಿತ ಮಹಿಳೆಯನ್ನು ವೈದ್ಯಕೀಯ ತಪಾಸಣೆಗೊಳಪಡಿಸಿದಾಗ ಆಕೆ ಇತ್ತೀಚೆಗೆ ಮಗುವಿಗೆ ಜನ್ಮ ನೀಡಿರಲಿಲ್ಲ ಎಂಬ ಅಂಶ ತಿಳಿದು ಬಂದಿದೆ. ಕೆಲವು ತಿಂಗಳ ಹಿಂದೆ ಗರ್ಭಿಣಿಯಾಗಿದ್ದ ಮಹಿಳೆಗೆ ಆಕೆಯ ಪತಿ ಹಿಂಸೆ ನೀಡಿದ್ದರಿಂದ ಆಕೆಯ ಮಗು ಸತ್ತು ಹೋಗಿತ್ತು. ಇದಾದ ನಂತರ ಆಕೆಯ ಪತಿ ಬೇರೊಂದು ಮಗುವನ್ನು ತಂದುಕೊಡುವುದಾಗಿ ಭರವಸೆ ನೀಡಿದ್ದ.
ಆಂಡ್ರಿಯಾ ಕರೋಲಿನಾ ಪಲ್ಲಾರೆಸ್ ಮೇಲೆ ದುಷ್ಕಮಿಗಳು ದಾಳಿ ನಡೆಸಿದ ಸ್ಥಳದ ಸಮೀಪದಲ್ಲೇ ಈ ಮಹಿಳೆ ವಾಸಿಸುತ್ತಿದ್ದಳು ಎನ್ನಲಾಗಿದೆ.
ಮಹಿಳೆಯೊಬ್ಬಳ ಹೊಟ್ಟೆಯಿಂದ ಮಗುವನ್ನು ಅಪಹರಿಸಿರುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ. ಡಿಎನ್‌ಎ ಪರೀಕ್ಷೆಯ ನಂತರ ಸಂಬಂಧದ ಬಗ್ಗೆ ಧೃಡಪಡಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತಮಾರ್ತಾ ಆಸ್ಪತ್ರೆಯಲ್ಲಿರುವ ತೀವ್ರನಿಗಾ ಘಟಕದಲ್ಲಿ ಅವಧಿಗೆ ಮುನ್ನ ಜನಿಸಿರುವ ಮಗುವಿಗೂ ಚಿಕಿತ್ಸೆ ನೀಡಲಾಗುತ್ತಿದೆ.