ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಲಿಬಿಯಾ: ಗಡಾಫಿ ನಿಷ್ಠರ ಜತೆಗಿನ ಬಂಡುಕೋರರ ಮಾತುಕತೆ ವಿಫಲ
(Libya | Muammar Gaddafi | Libyan rebels | Latest News in Kannada | Kannada nternational News | Latest Developments around the World)
ಲಿಬಿಯಾ: ಗಡಾಫಿ ನಿಷ್ಠರ ಜತೆಗಿನ ಬಂಡುಕೋರರ ಮಾತುಕತೆ ವಿಫಲ
ತಾರ್ಹೌನಾ (ಲಿಬಿಯಾ), ಸೋಮವಾರ, 5 ಸೆಪ್ಟೆಂಬರ್ 2011( 17:09 IST )
ಲಿಬಿಯಾ ಅಧ್ಯಕ್ಷ ಮುಅಮ್ಮರ್ ಗಡಾಫಿ ಅವರ ಬೆಂಬಲಿಗರು ಇರುವ ಕೆಲವೇ ಪ್ರದೇಶಗಳನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಬಂಡುಕೋರ ಪಡೆಗಳು ಮುಅಮ್ಮರ್ ಗಡಾಫಿ ನಿಷ್ಠರೊಂದಿಗೆ ನಡೆಸಿದ ಮಾತುಕತೆ ಮುರಿದು ಬಿದ್ದಿದ್ದು, ಬನಿ ವಾಲಿದ್ ಮೇಲೆ ಅಂತಿಮ ದಾಳಿ ನಡೆಸಲು ಬಂಡುಕೋರ ಪಡೆಗಳು ಆದೇಶಕ್ಕಾಗಿ ನಿರೀಕ್ಷಿಸುತ್ತಿವೆ.
ಲಿಬಿಯಾ ರಾಜಧಾನಿ ಟ್ರಿಪೋಲಿಗೆ ಬಂದು ಶರಣಾಗಲಿಚ್ಛಿಸುವ ಮುಅಮ್ಮರ್ ಗಡಾಫಿ ಅವರ ಬೆಂಬಲಿಗರು ಶಸ್ತ್ರಾಸ್ತ್ರ ವನ್ನು ಕೆಳಗಿಟ್ಟು ಬರಬೇಕು ಎಂದು ಶರತ್ತು ವಿಧಿಸಲಾಗಿತ್ತು. ಈ ಕುರಿತು ಮುಅಮ್ಮರ್ ಗಡಾಫಿ ಅವರ ಮುಖ್ಯ ವಕ್ತಾರ ಮೌಸಾ ಇಬ್ರಾಹಿಂ ಅವರೊಂದಿಗೆ ನಡೆಸಿದ ಮಾತುಕತೆ ಮುರಿದು ಬಿದ್ದಿದೆ ಎಂದು ಬಂಡುಕೋರ ಪಡೆ ವಕ್ತಾರ ಅಬ್ದುಲ್ಲಾ ಕಾನ್‌ಶಿಲ್ ತಿಳಿಸಿದ್ದಾರೆ.
ಲಿಬಿಯಾದ ಮೇಲೆ ಹಿಡಿತ ಸಾಧಿಸಿರುವ ಬಂಡುಕೋರ ಪಡೆಗಳು ಮಧ್ಯಂತರ ಸರಕಾರವನ್ನೂ ರಚಿಸಿವೆ. ಆದರೆ ಮುಅಮ್ಮರ್ ಗಡಾಫಿ ಮತ್ತು ಆತನ ನಿಷ್ಠರು ಮುಅಮ್ಮರ್ ಗಡಾಫಿಯ ತವರಾದ ಬನಿ ವಾಲಿದ್ ಸೇರಿದಂತೆ ಲಿಬಿಯಾದ ಕೇಂದ್ರ ಭಾಗ ಮತ್ತು ದಕ್ಷಿಣ ಭಾಗದ ಮೇಲೆ ಹಿಡಿತ ಸಾಧಿಸಿದ್ದಾರೆ.
ಲಿಬಿಯಾದಲ್ಲಿರುವ ಮುಅಮ್ಮರ್ ಗಡಾಫಿಯ ಕೆಲವೇ ಬೆಂಬಲಿಗರು ಹೆಚ್ಚು ಶಸ್ತ್ರಾಸ್ತ್ರ ಹೊಂದಿದ್ದು, ಶರಣಾಗಲಿಚ್ಛಿಸುವ ಇತರೆ ಸಾರ್ವಜನಿಕರಿಗೂ ಬೆದರಿಕೆಯೊಡ್ಡುತ್ತಿದ್ದಾರೆ ಎಂದು ಬಂಡುಕೋರರು ತಿಳಿಸಿದ್ದಾರೆ.
ಮುಅಮ್ಮರ್ ಗಡಾಫಿಯ ಬೆಂಬಲಿಗರು ಶರಣಾಗಲು ಇದ್ದ ಗಡುವನ್ನು ಬಂಡುಕೋರರು ಶನಿವಾರದ ವರೆಗೆ ವಿಸ್ತರಿಸಿದ್ದು, ಶರಣಾಗದಿದ್ದರೆ ಬನಿ ವಾಲಿದ್ ನಗರದ ಮೇಲೆ ದಾಳಿ ನಡೆಸುವುದಾಗಿ ಬಂಡುಕೋರ ಪಡೆಗಳು ಎಚ್ಚರಿಸಿವೆ.