ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ನೇಪಾಳ: ಪ್ರಧಾನಿಯಿಂದ 15 ಕ್ಯಾಬಿನೆಟ್ ಸಚಿವರ ನೇಮಕ
(Baburam Bhattarai | Nepal new prime minister | Latest News in Kannada | Kannada News | International News in Kannada | Latest International News)
ನೇಪಾಳ: ಪ್ರಧಾನಿಯಿಂದ 15 ಕ್ಯಾಬಿನೆಟ್ ಸಚಿವರ ನೇಮಕ
ಕಾಠ್ಮಂಡು, ಸೋಮವಾರ, 5 ಸೆಪ್ಟೆಂಬರ್ 2011( 18:47 IST )
ನೇಪಾಳದ ನೂತನ ಪ್ರಧಾನಿ ಬಾಬುರಾಮ್ ಭಟ್ಟಾರಾಯ್ ಅವರು ಉಪ ಪ್ರಧಾನಿ ಹಾಗೂ 15 ಮಂದಿ ಸಂಪುಟ ಸಹೋದ್ಯೋಗಿಗಳನ್ನು ನೇಮಿಸಿದ್ದಾರೆ.
ಮಾವೋವಾದಿ ಪಕ್ಷದ ನಾರಾಯಣ ಕಾಜಿ ಶ್ರೇಷ್ಠ ಅವರನ್ನು ಉಪ ಪ್ರಧಾನಿ ಹಾಗೂ ವಿದೇಶಾಂಗ ಸಚಿವರನ್ನಾಗಿ ಪ್ರಧಾನಿ ಬಾಬುರಾಮ್ ಭಟ್ಟಾರಾಯ್ ನೇಮಕ ಮಾಡಿದ್ದಾರೆ.
ಭಟ್ಟಾರಾಯ್ ಅವರ ಸಂಪುಟಕ್ಕೆ ಮಾವೋವಾದಿ ಪಕ್ಷದ ಏಳು ಮಂದಿ ಸದಸ್ಯರು ಹಾಗೂ ಚುನಾವಣೆ ಸಂದರ್ಭದಲ್ಲಿ ಬೆಂಬಲಿಸಿದ್ದ ಸಣ್ಣ ಪಕ್ಷಗಳ 8 ಮಂದಿಗೆ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ.
ನೇಪಾಳ ಪ್ರಧಾನಿಯಾಗಿ ಬಾಬುರಾಮ್ ಭಟ್ಟಾರಾಯ್ ಕಳೆದ ವಾರವೇ ಅಧಿಕಾರ ಸ್ವೀಕರಿಸಿದ್ದರೂ ಅಂಗ ಪಕ್ಷಗಳು ಹಾಗೂ ತಮ್ಮ ಪಕ್ಷದಲ್ಲಿದ್ದ ಆಂತರಿಕ ಭಿನ್ನಾಭಿಪ್ರಾಯದಿಂದಾಗಿ ಸರಕಾರ ರಚನೆಯಲ್ಲಿ ವಿಳಂಬವಾಗಿತ್ತು.
ನೇಪಾಳ ರಾಜಮನೆತನದೊಂದಿಗೆ ಕಳೆದ 10 ವರ್ಷಗಳಿಂದಲೂ ಸಂಘರ್ಷ ನಡೆಸುತ್ತಿದ್ದ ಮಾವೋವಾದಿ ಬಂಡುಕೋರರು 2008ರಲ್ಲಿ ನಡೆದ ಸಂಸತ್ ಚುನಾವಣೆಯಲ್ಲಿ ಅತಿ ಹೆಚ್ಚು ಸೀಟು ಗಳಿಸುವ ಮೂಲಕ ಅಧಿಕಾರಕ್ಕೇರಿದರು.