ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅರಳು-ಮರಳು;ತಂಗಿ ಶವದ ಜತೆ 8 ತಿಂಗಳು ವಾಸ
(Bizarre news in kannada | Latest News in Kannada | Kannada News | International News in Kannada | Latest International News)
ಅರಳು-ಮರಳು;ತಂಗಿ ಶವದ ಜತೆ 8 ತಿಂಗಳು ವಾಸ
ಮೆಕ್ಸಿಕೋ, ಸೋಮವಾರ, 5 ಸೆಪ್ಟೆಂಬರ್ 2011( 19:53 IST )
ವಯೋ ವೃದ್ಧನೊಬ್ಬ ತನ್ನ ತಂಗಿಯ ಶವದೊಂದಿಗೆ 8 ತಿಂಗಳು ವಾಸ ಮಾಡಿದ ವಿಲಕ್ಷಣ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ.
ಜಾಕ್ವಿನ್ ಸೋಟೋ ಮೊರಾಕ್ವಿನ್ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಆತನ ಮನೆಯಲ್ಲಿ ಆತನ ಸಹೋದರಿಯ ಶವ ಕೊಳೆತ ಸ್ಥಿತಿಯಲ್ಲಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಮೃತ ದೇಹವನ್ನು ತುಲಾಂಕ್ಸಿಂಗೋಕ್ಕೆ ಕೊಂಡೊಯ್ಯಲಾಗಿದೆ.
ಈ ಕುರಿತು ಪೊಲೀಸರೊಂದಿಗೆ ಮಾತನಾಡಿದ ವೃದ್ಧ ತನ್ನ ಸಹೋದರಿ ಕ್ಲೆಮೆಂಟಿನಾ ರೋಗದಿಂದ ಬಳಲುತ್ತಿದ್ದು, ಆಕೆ ಸಾವನ್ನಪ್ಪಿಲ್ಲ ಎಂದು ತಿಳಿಸಿದ್ದಾನೆ.
ಶವ ಪರೀಕ್ಷೆ ನಡೆಸಿದ ಸಂದರ್ಭದಲ್ಲಿ ಮಹಿಳೆ ಮೃತಪಟ್ಟು 8 ತಿಂಗಳು ಕಳೆದಿವೆ ಎಂಬ ಅಂಶ ಬಹಿರಂಗವಾಗಿದೆ.