ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಹೀಗೂ ಉಂಟೆ...ಹೆಬ್ಬಾವಿಗೆ ಕಚ್ಚಿದ ವ್ಯಕ್ತಿ ಪೊಲೀಸ್ ಅತಿಥಿ! (Bizarre news in kannada | Latest News in Kannada | Kannada News | International News in Kannada | Latest International News)
ಹೀಗೂ ಉಂಟೆ...ಹೆಬ್ಬಾವಿಗೆ ಕಚ್ಚಿದ ವ್ಯಕ್ತಿ ಪೊಲೀಸ್ ಅತಿಥಿ!
ನ್ಯೂಯಾರ್ಕ್, ಮಂಗಳವಾರ, 6 ಸೆಪ್ಟೆಂಬರ್ 2011( 09:12 IST )
ಹಾವುಗಳು ಮನುಷ್ಯರಿಗೆ ಕಚ್ಚುವುದು ಸಹಜ ಆದರೆ ಮನುಷ್ಯರೇ ಹಾವಿಗೆ ಕಚ್ಚಿದರೆ ಹೇಗಿರುತ್ತದೆ? ಇಂತಹದೊಂದು ವಿಲಕ್ಷಣ ಘಟನೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದ್ದು, ವ್ಯಕ್ತಿಯೊಬ್ಬ ಹೆಬ್ಬಾವಿಗೆ ಕಚ್ಚಿದ ಪರಿಣಾಮ ಅದು ಗಂಭೀರವಾಗಿ ಗಾಯಗೊಂಡಿದೆ. ಅಲ್ಲದೇ ಆತ ಈಗ ಪೊಲೀಸರ ಅತಿಥಿ ಕೂಡ ಆಗಿದ್ದಾನೆ!
ಸಾಕಿದ್ದ ಹಾವನ್ನು ಕಚ್ಚಿದ್ದಾನೆ ಎಂದು ಶಂಕಿಸಿ ಡೇವಿಡ್ ಸೆಂಕ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರ ಹೇಳಿಕೆಯನ್ನು ಉಲ್ಲೇಖಿಸಿ ಬಿಬಿಸಿ ವರದಿ ಮಾಡಿದೆ.
ತೀವ್ರವಾಗಿ ಗಾಯಗೊಂಡಿದ್ದ ಹೆಬ್ಬಾವಿಗೆ ತುರ್ತು ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು, ನಗರದ ಪ್ರಾಣಿ ದಯಾ ಸಂಘಕ್ಕೆ ಹಾವನ್ನು ಬಿಡಲಾಗಿದೆ.
ಶಸ್ತ್ರ ಚಿಕಿತ್ಸೆಯ ನಂತರ ಹಾವು ಚೇತರಿಸಿಕೊಳ್ಳುತ್ತಿದೆ ಎಂದು ಪ್ರಾಣಿ ದಯಾ ಸಂಘದ ಮ್ಯಾನೇಜರ್ ಗಿನಾ ಕೀಪ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಸ್ಕ್ರೆಮೆಮಟೋ ಬೀ ವರದಿ ಮಾಡಿದೆ.
ಹಾವಿಗೆ ಕಚ್ಚಿ ಗಾಯಗೊಳಿಸಿದ ಆಪಾದನೆಯ ಮೇರೆಗೆ ಬಂಧಿತನಾಗಿ ಜೈಲಿನಲ್ಲಿರುವ ಡೇವಿಡ್ ಸೆಂಕ್, ಮದ್ಯ ವ್ಯಸನಿಯಾಗಿರುವ ತನಗೆ ಏನು ನಡೆಯಿತೋ ಗೊತ್ತಿಲ್ಲ ಎಂದು ತಿಳಿಸಿದ್ದಾನೆ.
ಹಾವಿನ ಮಾಲೀಕರು ಯಾರು ಎಂದು ಗೊತ್ತಾದರೆ ಅವರ ಬಳಿ ಕ್ಷಮೆ ಯಾಚಿಸುತ್ತೇನೆ. ಹಾವಿನ ಚಿಕಿತ್ಸೆಯ ಸಂಪೂರ್ಣ ವೆಚ್ಛವನ್ನೂ ನಾನೇ ಭರಿಸುತ್ತೇನೆ ಎಂದು ಅಲವತ್ತುಕೊಂಡಿದ್ದಾನೆ. ಪ್ರಸ್ತುತ ಪ್ರಾಣಿ ದಯಾ ಸಂಘದಲ್ಲಿರುವ ಹಾವಿನ ಮಾಲೀಕರು ಯಾರು ಎಂಬುದು ಇನ್ನೂ ಪತ್ತೆಯಾಗಿಲ್ಲ.