ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮಗು ಜನಿಸುವ ತಿಂಗಳಿಗೂ ಉದ್ಯೋಗಕ್ಕೂ ಸಂಬಂಧವಿದೆಯಂತೆ! (Bizarre news in kannada,Latest News in Kannada, Kannada News, International News in Kannada, Latest International News)
ಮಗು ಜನಿಸುವ ತಿಂಗಳಿಗೂ ಉದ್ಯೋಗಕ್ಕೂ ಸಂಬಂಧವಿದೆಯಂತೆ!
ಲಂಡನ್, ಮಂಗಳವಾರ, 6 ಸೆಪ್ಟೆಂಬರ್ 2011( 09:13 IST )
ಮಗು ಹುಟ್ಟಿದ ತಿಂಗಳು ಮುಂಬರುವ ದಿನಗಳಲ್ಲಿ ಅದು ಕೈಗೊಳ್ಳುವ ಉದ್ಯೋಗದ ಆಯ್ಕೆಯನ್ನು ನಿರ್ಧರಿಸುತ್ತದೆ ಎಂಬ ಅಂಶವು ಅಧ್ಯಯನ ವರದಿಯಿಂದ ಬಹಿರಂಗವಾಗಿದೆ.
ಮಕ್ಕಳು ಜನಿಸಿದ ತಿಂಗಳು ಹಾಗೂ ಅವರು ಕೈಗೊಳ್ಳುವ ಉದ್ಯೋಗಕ್ಕೂ ಸಂಬಂಧ ಇರುವ ಕುರಿತು ರಾಷ್ಟ್ರೀಯ ಅಂಕಿ ಅಂಶಗಳ ಕಚೇರಿಯ ನೇತೃತ್ವದಲ್ಲಿ ಸಂಶೋಧನೆ ನಡೆಸಿದ ತಜ್ಞರು ಕಳೆದ ಜನಗಣತಿಯನ್ನೇ ಆಧಾರವಾಗಿಸಿಕೊಂಡಿದ್ದರು ಎಂಬ ಅಂಶವನ್ನು ಉಲ್ಲೇಖಿಸಿ ಡೈಲಿ ಟೆಲಿಗ್ರಾಫ್ ಪತ್ರಿಕೆ ವರದಿ ಮಾಡಿದೆ.
ಮಕ್ಕಳು ಜನಿಸಿದ ತಿಂಗಳು ಅವರ ಬುದ್ದಿವಂತಿಕೆ ಹಾಗೂ ದೀರ್ಘಾಯುಷ್ಯವನ್ನು ನಿರ್ಧರಿಸುತ್ತಿದೆ ಎಂದು ಅಧ್ಯಯನ ವರದಿ ಹೇಳಿದೆ.
ಡಿಸೆಂಬರ್‌ನಲ್ಲಿ ಜನಿಸಿದ ಮಗು ದಂತ ವೈದ್ಯನಾಗುತ್ತಾನೆ. ಜನವರಿಯಲ್ಲಿ ಜನಿಸಿದ ಮಗು ಸಾಲ ವಸೂಲಿಗಾರನಾಗುತ್ತಾನೆ.
ಫೆಬ್ರವರಿಯಲ್ಲಿ ಜನಿಸಿದ ಮಗು ಕಲಾವಿದನಾದರೆ, ಮಾರ್ಚ್‌ನಲ್ಲಿ ಜನಿಸಿದ ಮಕ್ಕಳು ವಿಮಾನ ಚಾಲಕರಾಗುತ್ತಾರೆ ಎಂದು ಟೆಲಿಗ್ರಾಫ್ ವರದಿ ಮಾಡಿದೆ.
ಬೇಸಿಗೆ ಕಾಲವಾದ ಏಪ್ರಿಲ್, ಮೇ ತಿಂಗಳಿನಲ್ಲಿ ಜನಿಸಿದವರು ಫುಟ್ಬಾಲ್ ಆಟಗಾರಾಗುವ ಅಥವಾ ವೈದ್ಯರಾಗುವ ಸಾಧ್ಯತೆ ಕಡಿಮೆ.
ಆದರೆ ಈ ಅಧ್ಯಯನವು ಆರೋಗ್ಯ ಸಮಸ್ಯೆಯನ್ನು ವೈಜ್ಞಾನಿಕ ಆಧಾರದ ಮೇಲೆ ಪತ್ತೆ ಹಚ್ಚುವಲ್ಲಿ ವಿಫಲವಾಗಿದೆ.
ವಸಂತ ಕಾಲದಲ್ಲಿ ಜನಿಸುವ ಮಕ್ಕಳು ಸ್ಕ್ರೀಜೋಫೀನಿಯಾ, ಅಲ್ಜಿಮರ್, ಅಸ್ತಮಾ ರೋಗದಿಂದ ಬಳಲುವ ಸಾಧ್ಯತೆ ಹೆಚ್ಚು ಎಂದು ಅಧ್ಯಯನ ವರದಿ ತಿಳಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವಿಜ್ಞಾನಿ ರಸೆಲ್ ಫೋಸ್ಟರ್, ಈ ಪ್ರಯತ್ನವು ಸಣ್ಣ ಪ್ರಮಾಣದ್ದಾಗಿದ್ದರೂ ನಿಚ್ಚಳವಾಗಿವೆ ಎಂದು ತಿಳಿಸಿದ್ದಾರೆ.
ನಾನು ಜ್ಯೋತಿಷ್ಯವನ್ನು ಬೆಂಬಲಿಸುತ್ತಿಲ್ಲ, ಅದು ಮೂರ್ಖತನವಾಗುತ್ತದೆ. ಆದರೆ ಹವಾಮಾನ ವೈಪರೀತ್ಯಕ್ಕೆ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.