ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಶಸ್ತ್ರಾಸ್ತ್ರ ಕೊಡುವಂತೆ ಚೀನಾ ಮೊರೆ ಹೋಗಿದ್ದ ಗಡಾಫಿ (Muammar Gaddafi, Libyan leader,China,Ordinance factorie,Latest News in Kannada, Kannada News, International News in Kannada)
ಲಿಬಿಯಾ ಅಧ್ಯಕ್ಷ ಮುಅಮ್ಮರ್‌ ಗಡಾಫಿಯ ಪ್ರತಿನಿಧಿಗಳು ಚೀನಾದ ಶಸ್ತ್ರಾಸ್ತ್ರ ತಯಾರಿಕೆ ಕಾರ್ಖಾನೆಗಳಿಗೆ ಭೇಟಿ ನೀಡಿ ಶಸ್ತ್ರಾಸ್ತ್ರ ಸರಬರಾಜು ಮಾಡುವಂತೆ ಬೇಡಿಕೆ ಸಲ್ಲಿಸಿದ್ದರು ಎಂಬ ವಿಷಯವನ್ನು ಸ್ವತಃ ಚೀನಾ ಸರಕಾರವೇ ಒಪ್ಪಿಕೊಂಡಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಮುಅಮ್ಮರ್‌ ಗಡಾಫಿ ಅವರ ಆಡಳಿತವು ಕಳೆದ ಜುಲೈನಲ್ಲಿ ಕೆಲವರನ್ನು ಚೀನಾದ ಶಸ್ತ್ರಾಸ್ತ್ರ ಕಾರ್ಖಾನೆಗಳಿಗೆ ಕಳುಹಿಸಿ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುವಂತೆ ಬೇಡಿಕೆ ಸಲ್ಲಿಸಿತ್ತು. ಆದರೆ ಯಾವುದೇ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಿರಲಿಲ್ಲ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಜಿಯಾಂಗ್‌ ಯೂ ಸ್ಪಷ್ಟಪಡಿಸಿದ್ದಾರೆ.

ಲಿಬಿಯಾಕ್ಕೆ ಶಸ್ತ್ರಾಸ್ತ್ರಗಳನ್ನು ಸರಬರಾಜು ಒಪ್ಪಂದಕ್ಕೆ ಚೀನಾ ಸಹಿ ಹಾಕಿರಲಿಲ್ಲ ಎಂದು ಜಿಯಾಂಗ್‌ ಯೂ ತಿಳಿಸಿದ್ದಾರೆ.

ವಿಶ್ವ ಸಂಸ್ಥೆ 1970ರಲ್ಲಿ ಮಂಡಿಸಿದ್ದ ನಿರ್ಣಯವನ್ನಾಧರಿಸಿ ಚೀನಾದ ಕಂಪನಿಗಳು ಲಿಬಿಯಾಕ್ಕೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಶಸ್ತ್ರಾಸ್ತ್ರ ಸರಬರಾಜು ಮಾಡಿರಲಿಲ್ಲ ಎಂದು ಜಿಯಾಂಗ್‌ ಯೂ ಹೇಳಿದ್ದಾರೆ. ಲಿಬಿಯಾಕ್ಕೆ ಚೀನಾದಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಸರಬರಾಜು ಮಾಡಿರುವುದು ಆತಂಕಾರಿ ಸಂಗರಿಯಾಗಿದೆ ಎಂದು ಕೆನಡಾದ ಗ್ಲೋಬ್‌ ಅಂಡ್‌ ಮೇಲ್‌ ದೈನಿಕ ವರದಿ ಮಾಡಿದ್ದ ಹಿನ್ನೆಲೆಯಲ್ಲಿ ಜಿಯಾಂಗ್‌ ಯೂ ಈ ಹೇಳಿಕೆ ನೀಡಿದ್ದಾರೆ.

ವಿಶ್ವ ಸಂಸ್ಥೆಯ ನಿರ್ಣಯವನ್ನು ಚೀನಾ ಕಟ್ಟು ನಿಟ್ಟಾಗಿ ಪಾಲಿಸುತ್ತಿದೆ. ಶಸ್ತ್ರಾಸ್ತ್ರ ಸರಬರಾಜಿನ ಬಗ್ಗೆ ನಾವು ಸಾಕಷ್ಟು ಜಾಗ್ರತೆ ವಹಿಸುತ್ತೇವೆ ಎಂದು ಜಿಯಾಂಗ್‌ ಯೂ ತಿಳಿಸಿದ್ದಾರೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಮುಅಮ್ಮರ್ ಗಡಾಫಿ, ಲಿಬಿಯಾ ಅಧ್ಯಕ್ಷ, ಕನ್ನಡ ಸುದ್ದಿ, ಕರ್ನಾಟಕ ಸುದ್ದಿ, ರಾಷ್ಟ್ರೀಯ ಸುದ್ದಿ, ಬ್ರೇಕಿಂಗ್ ನ್ಯೂಸ್, ತಾಜಾ ಕನ್ನಡ ಸುದ್ದಿ, ರಾಜಕೀಯ, ಬೆಂಗಳೂರು ಸುದ್ದಿ, ಫಾರಿನ್ ಸುದ್ದಿ, ಅಂತಾರಾಷ್ಟ್ರೀಯ, ಅಂತರರಾಷ್ಟ್ರೀಯ, ಅಂತರ್ರಾಷ್ಟ್ರೀಯ ಸುದ್ದಿ