ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಗಡಾಫಿ ಸೇಫ್, ಲಿಬಿಯಾ ರಕ್ಷಣೆಗೆ ತಂತ್ರ ರೂಪಿಸ್ತಿದ್ದಾರೆ: ಇಬ್ರಾಹಿಂ (Muammar Gaddafi, Libyan leader,Latest News in Kannada, Kannada News, International News in Kannada)
ಗಡಾಫಿ ಸೇಫ್, ಲಿಬಿಯಾ ರಕ್ಷಣೆಗೆ ತಂತ್ರ ರೂಪಿಸ್ತಿದ್ದಾರೆ: ಇಬ್ರಾಹಿಂ
ನಿಕೋಸಿಯಾ, ಮಂಗಳವಾರ, 6 ಸೆಪ್ಟೆಂಬರ್ 2011( 17:05 IST )
ಲಿಬಿಯಾ ಅಧ್ಯಕ್ಷ ಮುಅಮ್ಮರ್ ಗಡಾಫಿ ಅವರ ಆರೋಗ್ಯ ಉತ್ತಮವಾಗಿದ್ದು, ಅವರು ಲಿಬಿಯಾ ರಕ್ಷಣೆಗೆ ತಂತ್ರ ರೂಪಿಸುತ್ತಿದ್ದಾರೆ ಎಂದು ಮುಅಮ್ಮರ್ ಗಡಾಫಿ ಅವರ ವಕ್ತಾರ ಮೌಸಾ ಇಬ್ರಾಹಿಂ ಅವರು ಸಿರಿಯಾದ ಅರೈ ಟಿವಿ ಚಾನಲ್‌ಗೆ ತಿಳಿಸಿದ್ದಾರೆ.
ನಾವು ಈಗಲೂ ಪ್ರಬಲರಾಗಿದ್ದೇವೆ, ಲಿಬಿಯಾ ರಕ್ಷಣೆಗಾಗಿ ಪ್ರಾಣತ್ಯಾಗ ಮಾಡಲೂ ಸಿದ್ಧರಿರುವುದಾಗಿ ಮುಅಮ್ಮರ್ ಗಡಾಫಿ ಅವರ ಪುತ್ರರು ಹೇಳಿದ್ದಾರೆ ಎಂದು ಮೌಸಾ ಇಬ್ರಾಹಿಂ ತಿಳಿಸಿದ್ದಾರೆ.
ಗೆಲುವಿಗಾಗಿ ಕೊನೆಯುಸಿರಿನವರೆಗೂ ಹೋರಾಟ ನಡೆಸುವುದಾಗಿ ಹೇಳಿರುವ ಮೌಸಾ ಇಬ್ರಾಹಿಂ, ಮುಅಮ್ಮರ್ ಗಡಾಫಿ ಅವರ ತವರೂರಾದ ಬನಿ ವಾಲಿದ್‌ನಲ್ಲಿರುವ ಗಡಾಫಿ ಪರ ಯೋಧರು ಲಿಬಿಯಾವನ್ನು ಬಂಡುಕೋರರ ಹಿಡಿತದಿಂದ ಪಾರು ಮಾಡಲು ಹೋರಾಡುತ್ತಾರೆ ಎಂದು ತಿಳಿಸಿದ್ದಾರೆ.
ಬಂಡುಕೋರ ಪಡೆಯನ್ನು ನ್ಯಾಟೋ ಏಜೆಂಟರು ಎಂದು ಆಪಾದಿಸಿರುವ ಮೌಸಾ ಇಬ್ರಾಹಿಂ, ಲಿಬಿಯಾದಲ್ಲಿ ನಡೆದ ಅತ್ಯಾಚಾರ ಹಾಗೂ ಅಪರಾಧ ಪ್ರಕರಣಗಳಿಗೆ ಬಂಡುಕೋರರೇ ಹೊಣೆಯಾಗಿದ್ದಾರೆ ಎಂದು ಆಪಾದಿಸಿದ್ದಾರೆ.