ಸಿರ್ಟೆ ನಗರದ ದಕ್ಷಿಣಕ್ಕೆ ಕೆಲವು ಕಿಲೋಮಿಟರ್‌ಗಳ ದೂರದಲ್ಲಿ ಇರುವ ಮುಅಮ್ಮರ್ ಗಡಾಫಿ ನಿರಂತರವಾಗಿ ಸ್ಥಳವನ್ನು ಬದಲಾಯಿಸುತ್ತಾ ಓಡಾಡುತ್ತಿದ್ದಾರೆ ಎಂದು ಅನೀಸ್ ಶರೀಫ್ ತಿಳಿಸಿದ್ದಾರೆ.
ಮುಅಮ್ಮರ್ ಗಡಾಫಿ ತನ್ನ ನಿಷ್ಠರು ಹೆಚ್ಚಾಗಿರುವ ಸಭಾ ನಗರದಲ್ಲಿ ತಲೆಮರೆಸಿಕೊಳ್ಳಲು ಯತ್ನಿಸಿದ್ದಾರೆ ಎಂದು ಶರೀಫ್ ಹೇಳಿದ್ದಾರೆ.
ಮುಅಮ್ಮರ್ ಗಡಾಫಿಗೆ ಶರಣಾಗಲು ನೀಡಿರುವ ಗಡುವಿನಲ್ಲಿ ಕೆಲವೇ ಸಮಯ ಬಾಕಿ ಉಳಿದಿದ್ದು, ಸಾವು, ಆತ್ಮಹತ್ಯೆ ಅಥವಾ ವಿಚಾರಣೆಯನ್ನು ಮುಅಮ್ಮರ್ ಗಡಾಫಿ ಅವರೇ ನಿರ್ಧರಿಸಬೇಕು ಎಂದು ಶರೀಫ್ ತಿಳಿಸಿದ್ದಾರೆ.
ಸಿಟ್ರೆ, ಸಭಾ ಹಾಗೂ ಬನಿವಾಲಿದ್ ಪಟ್ಟಣದಿಂದ ಹೊರಹೋಗಲು ಮುಅಮ್ಮರ್ ಗಡಾಫಿ ನಿಷ್ಠರಿಗೆ ಒಂದು ವಾರ ಕಾಲಾವಕಾಶ ನೀಡಿದ್ದು, ಈ ಗಡುವು ಸೆಪ್ಟೆಂಬರ್ 10ಕ್ಕೆ ಅಂತ್ಯಗೊಳ್ಳಲಿದೆ ಎಂದು ಬಂಡುಕೋರರ ಪಡೆಯ ಮುಖ್ಯಸ್ಥ ಮುಸ್ತಫಾ ಅಬ್ಡೆಲ್ ಜಲೀಲ್ ತಿಳಿಸಿದ್ದಾರೆ.