ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಹಣ ಕಳೆದುಕೊಂಡು 9 ಸಾವಿರ ಕಿಲೋ ಮೀಟರ್ ನಡೆದ! (Russia | Robbed | Moscow | Latest World News in Kannada)
ದರೋಡೆಗೊಳಗಾದರವರು ಏನು ಮಾಡುತ್ತಾರೆ? ಪೊಲೀಸರಿಗೆ ದೂರು ನೀಡಿ ಅವರ ನೆರವು ಪಡೆಯುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ತಾನು ದರೋಡೆಗೊಳಗಾದ ನಂತರ 9 ಸಾವಿರ ಕಿಲೋ ಮೀಟರ್‌ ದೂರವಿರುವ ತನ್ನ ಊರು ತಲುಪಲು 400 ದಿನಗಳ ಕಾಲ ಕಾಲ್ನಡಿಗೆಯಲ್ಲೇ ಸಂಚರಿಸಿದ ವಿಚಿತ್ರ ಘಟನೆ ಕಾಮ್ಚಕ್ಟಾ ಪ್ರದೇಶದಲ್ಲಿ ನಡೆದಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಮಾಸ್ಕೋದಲ್ಲಿ 2010ರಲ್ಲಿ ಈ ವ್ಯಕ್ತಿಯ ಬಗ್ಗೆ ಅರಿತಿದ್ದವರೇ ಹಣ ಮತ್ತು ಆತನ ಬಳಿ ಇದ್ದ ದಾಖಲೆ ಪತ್ರಗಳನ್ನು ದೋಚಿದ್ದರು. ಇದರಿಂದ ಆತ ತನ್ನ ಮನೆಗೆ ನಡೆದೇ ಹೋಗಲು ನಿರ್ಧರಿಸಿದ್ದ ಎಂದು ರಷ್ಯಾದ ಕೊಮ್ಸೋಮೊಲಾಸ್ಕ್ಯ ಪ್ರವಾಡಾ ಪತ್ರಿಕೆ ತಿಳಿಸಿದೆ.

ತನ್ನ 400 ದಿನಗಳ ಪ್ರವಾಸದಲ್ಲಿ ಈ ಮನುಷ್ಯ ಖಾಲಿ ಬಾಟಲಿಗಳನ್ನು ಸಂಗ್ರಹಿಸಿದ್ದಲ್ಲದೇ ಕೂಲಿ ಕೆಲಸವನ್ನೂ ಮಾಡುವ ಮೂಲಕ ಹೊಟ್ಟೆ ಹೊರೆಯುತ್ತಿದ್ದ ಎಂದು ಪತ್ರಿಕೆ ತಿಳಿಸಿದೆ.

ಹರಿದ ಬೂಟಿನಲ್ಲೇ ಅಲೆದಾಡುತ್ತಿದ್ದ ಈ ವ್ಯಕ್ತಿಯ ಬಗ್ಗೆ ಅನುಮಾನಗೊಂಡ ವ್ಲಾಡಿವೋಟೋಸ್ಕ್‌ ಪೊಲೀಸರು ಈತನ್ನು ವಿಚಾರಣೆಗೊಳಪಡಿಸಿದಾಗ ದುಷ್ಕರ್ಮಿಗಳು ಮಾಸ್ಕೋದಲ್ಲಿ ತನ್ನನ್ನು ಸುಲಿಗೆ ಮಾಡಿ ಹಣ ಹಾಗೂ ದಾಖಲೆಗಳನ್ನು ದೋಚಿದ್ದಾರೆ ಎಂದು ತಿಳಿಸಿದ್ದಾನೆ. ಈತ ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಕಳ್ಳರನ್ನು ಬಂಧಿಸಿ ದೋಚಿದ್ದ ಹಣ ಹಾಗೂ ದಾಖಲೆಗಳನ್ನು ಆತನಿಗೆ ಹಿಂತಿರುಗಿಸಿದ್ದಾರೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಮಾಸ್ಕೋ, ರಷ್ಯಾ, ಕನ್ನಡ ಸುದ್ದಿ, ಕರ್ನಾಟಕ ಸುದ್ದಿ, ರಾಷ್ಟ್ರೀಯ ಸುದ್ದಿ, ಬ್ರೇಕಿಂಗ್ ನ್ಯೂಸ್, ತಾಜಾ ಕನ್ನಡ ಸುದ್ದಿ, ರಾಜಕೀಯ, ಬೆಂಗಳೂರು ಸುದ್ದಿ, ಫಾರಿನ್ ಸುದ್ದಿ, ಅಂತಾರಾಷ್ಟ್ರೀಯ, ಅಂತರರಾಷ್ಟ್ರೀಯ, ಅಂತರ್ರಾಷ್ಟ್ರೀಯ ಸುದ್ದಿ