ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಯದ ನಡುವೆ ಗಡಾಫಿ ಪತ್ನಿಗೆ ರೆಸಾರ್ಟ್ ಖರೀದಿ ಚಿಂತೆ! (Muammar Gaddafi | Libya | Latest News in Kannada | World News in Kannada)
ಭಯದ ನಡುವೆ ಗಡಾಫಿ ಪತ್ನಿಗೆ ರೆಸಾರ್ಟ್ ಖರೀದಿ ಚಿಂತೆ!
ಜಾಗ್ರೆಬ್, ಗುರುವಾರ, 8 ಸೆಪ್ಟೆಂಬರ್ 2011( 17:51 IST )
ಲಿಬಿಯಾ ಮುಖಂಡ ಮುಅಮ್ಮರ್ ಗಡಾಫಿ ಅವರ ಪತ್ನಿ ಕ್ರೊವೇಶಿಯಾದಲ್ಲಿರುವ ಟೂರಿಸ್ಟ್ ರೆಸಾರ್ಟ್ ಖರೀದಿಸಲು ಮಾತುಕತೆ ನಡೆಸುತ್ತಿದ್ದಾರೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.
ಮುಅಮ್ಮರ್ ಗಡಾಫಿ ಅವರ ಪತ್ನಿ ಸಫಿಯಾ ಬೋಸ್ನಿಯಾ-ಕ್ರೊವೇಶಿಯಾ ಮೂಲದವರಾಗಿದ್ದು, ಇಗ್ರಾನಿ ನಗರದಲ್ಲಿರುವ ರೆಸಾರ್ಟ್ ಖರೀದಿಸಲು ಮಾತುಕತೆ ನಡೆಸುತ್ತಿದ್ದಾರೆ ಎಂದು ಕ್ರೊವೇಶಿಯಾದ ದೈನಿಕ ಮಕಾಸ್ಕಾ ಕ್ರಾನಿಕಲ್ ವರದಿ ಮಾಡಿದೆ.
ಯುಗೋಸ್ಲಾವಾಕಿಯಾದ ಸೋಫಿಯಾ ಫಾರ್ಕಾಸ್‌ನಲ್ಲಿ ಮುಅಮ್ಮರ್ ಗಡಾಫಿ ಅವರ ಪತ್ನಿ ಸಫಿಯಾ ಜನಿಸಿದ್ದರು. ಪ್ರಸ್ತುತ ಈ ನಗರವು ಬೋಸ್ನಿಯಾ-ಹರ್ಜೆಗೊವಿನಾದಲ್ಲಿದೆ. ಸಫಿಯಾ ಮುಅಮ್ಮರ್ ಗಡಾಫಿಯ ಎರಡನೇ ಪತ್ನಿಯಾಗಿದ್ದಾರೆ.
ಯುಗೋಸ್ಲಾವಾಕಿಯಾದ ಸೋಫಿಯಾ ಫಾರ್ಕಾಸ್‌ನಲ್ಲಿ ಮುಅಮ್ಮರ್ ಗಡಾಫಿ ಅವರ ಪತ್ನಿ ಸಫಿಯಾ ಜನಿಸಿದ್ದರು. ಪ್ರಸ್ತುತ ಈ ನಗರವು ಬೋಸ್ನಿಯಾ-ಹರ್ಜೆಗೊವಿನಾದಲ್ಲಿದೆ. ಸಫಿಯಾ ಮುಅಮ್ಮರ್ ಗಡಾಫಿಯ ಎರಡನೇ ಪತ್ನಿಯಾಗಿದ್ದಾರೆ.
ಲಿಬಿಯಾದಲ್ಲಿ ಮೇಲುಗೈ ಸಾಧಿಸಿದ ಬಂಡುಕೋರ ಪಡೆಗಳು ಮುಅಮ್ಮರ್ ಗಡಾಫಿಯನ್ನು ಕೊಲ್ಲಲು ಯತ್ನಿಸಿದ ಸಂದರ್ಭದಲ್ಲೇ ಆಕೆ ಮುಂಜಾಗರೂಕತಾ ಕ್ರಮವಾಗಿ ರೆಸಾರ್ಟ್ ಖರೀದಿಗೆ ಮಾತುಕತೆ ಆರಂಭಿಸಿದ್ದರು. ಬಂಡುಕೋರರು ಲಿಬಿಯಾ ರಾಜಧಾನಿ ಟ್ರಿಪೋಲಿಯನ್ನ ವಶಪಡಿಸಿಕೊಂಡ ನಂತರ ಸಫಿಯಾ ತಮ್ಮ ಮೂರು ಮಕ್ಕಳೊಂದಿಗೆ ಸಫಿಯಾ ಅಲ್ಜೀರಿಯಾಕ್ಕೆ ಹೋಗಿದ್ದರು.
ಲಿಬಿಯಾ ಅಧ್ಯಕ್ಷ ಮುಅಮ್ಮರ್ ಗಡಾಫಿ ಲಿಬಿಯಾದಲ್ಲೇ ಈಗಲೂ ಅಡಗಿದ್ದಾರೆ ಎಂದು ಹೇಳಿದ್ದಾರೆ.
ಯುಗೋಸ್ಲಾವ್ ಏರ್‌ಫೋರ್ಸ್ ಅಕಾಡೆಮಿಗೆ ಲಿಬಿಯಾ ಅಧ್ಯಕ್ಷ ಮುಅಮ್ಮರ್ ಗಡಾಫಿ ಭೇಟಿ ನೀಡಿದ್ದರು. ಯುಗೊಸ್ಲಾವಿಯಾ ಆಡಳಿತಗಾರ ಜೋಶಿಪ್ ಬ್ರೋಸ್ ಟೈಟೋ ಜೊತೆಗೂ ಗಡಾಫಿ ಉತ್ತಮ ಬಾಂಧವ್ಯ ಹೊಂದಿದ್ದಾರೆ.