ಆರ್ಕ್ ಹಡಗು ಮಾದರಿಯ ಈ ಮನೆ ನಿರ್ಮಾಣಕ್ಕೆ 20 ಸಾವಿರ ಯುವಾನ್ (3,130ಡಾಲರ್ )ವೆಚ್ಛವಾಗಿದೆ. ಎಂಟು ಮೀಟರ್ ಎತ್ತರ ಹಾಗೂ 2.5 ಮೀಟರ್ ಅಗಲ ಇರುವ ಈ ಮನೆಗೆ ಕಿಟಕಿಗಳಿದ್ದು, ಆರು ಚಕ್ರಗಳನ್ನು ಹೊಂದಿದೆ. ಇದನ್ನು ಲಾರಿಗೆ ಕಟ್ಟಿ ಚಲಿಸಲು ಅನುಕೂಲವಾಗುವಂತೆ ಮಾಡಬಹುದು ಎಂದು ಶಾಂಘೈ ದೈನಿಕ ವರದಿ ಮಾಡಿದೆ.
ಪ್ರವಾಹದ ನೀರು ನುಗ್ಗಿದರೆ ಇದು ನೀರಿನಮೇಲೆ ತೇಲುತ್ತದೆ. ಈ ಸಂದರ್ಭದಲ್ಲಿ ಮನೆಯ ಕಿಟಕಿ ಬಾಗಲುಗಳು ಭದ್ರವಾಗಿ ಮುಚ್ಚಿಕೊಳ್ಳುತ್ತವೆ ಎಂದು ಲ್ಯೂಹೋಮ್ ಪ್ರಾಂತ್ಯದಲ್ಲಿರುವ ಈ ವ್ಯಕ್ತಿ ತಿಳಿಸಿದ್ದಾನೆ.
ಈ ಮನೆಯನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದ್ದು, ಮೊದಲ ಭಾಗದಲ್ಲಿ ವಿಶ್ರಾಂತಿ ಕೊಠಡಿ, ಎರಡನೇ ಭಾಗದಲ್ಲಿ ಸಾಮಗ್ರಿಗಳ ದಾಸ್ತಾನು ಕೊಠಡಿಯಿದ್ದು, ಇಲ್ಲಿ ಒಂದು ತಿಂಗಳಿಗಾಗುವಷ್ಟು ದಿನಸಿ ಸಂಗ್ರಹಿಸಿಡಬಹುದಾಗಿದೆ. ಮೂರನೇ ಭಾಗದಲ್ಲಿ ಮಲಗುವ ಕೋಣೆಯಿದೆ.
ಬೈಬಲ್ ಕಲ್ಪನೆಯ ಈ ಹಡಗು ಮಾದರಿ ಮನೆಯೊಳಗೆ ಏರ್ ಕಂಡೀಷನರ್, ಪವರ್ ಜನರೇಟರ್ ಹಾಗೂ ಅಡುಗೆ ಸಾಮಗ್ರಗಳನ್ನೂ ಅಳವಡಿಸಲಾಗುತ್ತದೆ.
ನೋವಾಸ್ ಆರ್ಕ್ ಎಂದರೇನು? ನೋವಾಸ್ ಆರ್ಕ್ ಎಂಬುದು ಬೈಬಲ್ ಮತ್ತು ಕುರಾನ್‌ಗಳಲ್ಲಿ ನಮೂದಾಗಿರುವ ಬಹಳ ಪ್ರಸಿದ್ಧ ಜಲಪ್ರಳಯದ ಕತೆ. ಅದರಂತೆ ದೇವರು ತನಗೆ ಇಷ್ಟವಾದ ವಾನನ್ನು ಕರೆದು ಈ ರೀತಿ ಹೇಳುತ್ತಾನೆ. ನಾನು ಜಲಪ್ರಳಯ ಸೃಷ್ಟಿಸಿ ಇಡೀ ಜಗತ್ತನ್ನೇ ನಾಶಪಡಿಸಲು ಹೊರಟಿದ್ದೇನೆ. ನೀನು, ನಿನ್ನ ಕುಟುಂಬ, ನಿನ್ನ ಪ್ರೀತಿಪಾತ್ರ ಪ್ರಾಣಿಗಳನ್ನು ರಕ್ಷಿಸಿಕೊಳ್ಳಲು ಒಂದು ಹಡಗನ್ನು ನಿರ್ಮಿಸಿಕೋ. ಆ ಹಡಗನ್ನು ಎತ್ತರದ ಜಾಗದಲ್ಲಿ ನಿಲ್ಲಿಸಿಕೋ ಎಂದನಂತೆ.
ಹೀಗೆ ತಮ್ಮ ಪ್ರಾಣ ಉಳಿಸಿದ್ದಕ್ಕಾಗಿ ನೋವಾ ದೇವರಿಗೆ ಕೃತಜ್ಞತೆಯಿಂದ ಬಲಿಯನ್ನು ಅರ್ಪಿಸುತ್ತಾನೆ. ಅದರಿಂದ ಸುಪ್ರೀತನಾದ ದೇವರು ಮೋಡಗಳ ಮೇಲೆ ಕಾಮನ ಬಿಲ್ಲೊಂದನ್ನು ಸೃಷ್ಟಿಸುತ್ತಾನೆ. ಇನ್ನೆಂದೂ ತಾನು ಜಲಪ್ರಳಯ ಸೃಷ್ಟಿಸಿ ಜಗತ್ತನ್ನು ನಾಶ ಮಾಡುವುದಿಲ್ಲ ಎಂಬ ನಿರ್ಧಾರದ ಪ್ರತೀಕ ಆ ಕಾಮನಬಿಲ್ಲು ಎಂಬುದು ಇಂದಿಗೂ ಇರುವ ನಂಬಿಕೆ. ಆನಂತರ ನೋವಾನ ಕುಟುಂಬ ಮತ್ತೆ ಮನುಕುಲವನ್ನು ಸೃಷ್ಟಿಸಿತು ಎಂಬಲ್ಲಿಗೆ ಪ್ರಳಯದ ನಂತರದ ಸೃಷ್ಟಿಯ ಕತೆ ಆರಂಭವಾಗುತ್ತದೆ.