ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕಿಸ್ತಾನದ ಮೇಲೆ ಭಾರತ ದಾಳಿಗೆ ಸಿದ್ಧವಾಗಿತ್ತು: ಪರ್ವೇಜ್ ಮುಷರ್ರಫ್ (9/11 Anniversary threat | Pakistan | Pervez Musharraf | International News in Kannada)
ಪಾಕಿಸ್ತಾನದ ಮೇಲೆ ಭಾರತ ದಾಳಿಗೆ ಸಿದ್ಧವಾಗಿತ್ತು: ಪರ್ವೇಜ್ ಮುಷರ್ರಫ್
ಬೀಜಿಂಗ್, ಶನಿವಾರ, 10 ಸೆಪ್ಟೆಂಬರ್ 2011( 12:59 IST )
9/11 ದಾಳಿಯ ನಂತರ ಪಾಕಿಸ್ತಾನವು ಉಗ್ರರ ನಿಗ್ರಹಕ್ಕಾಗಿ ಅಮೆರಿಕ ಪಡೆಗಳನ್ನು ದೇಶದೊಳಕ್ಕೆ ಬಿಡದಿದ್ದರೆ ಭಾರತ ಮ್ಮುಅಮೆರಿಕ ಪಡೆಗಳ ಜಂಟಿ ದಾಳಿಯನ್ನು ಎದುರಿಸಬೇಕಾಗುತ್ತಿತ್ತು ಎಂದು ಪಾಕಿಸ್ತಾನದ ಮಾಜಿ ಮಿಲಿಟರಿ ಆಡಳಿತಗಾರ ಜನರಲ್ ಪರ್ವೇಜ್ ಮುಷರ್ರಫ್ ಅವರು ಹೇಳಿದ್ದಾರೆ.
ಪಾಕಿಸ್ತಾನದಿಂದ ಅಮೆರಿಕ ಪಡೆ ಭಯೋತ್ಪಾದಕರ ವಿರುದ್ದ ದಾಳಿ ನಡೆಸಲು ಅನುಮತಿ ನೀಡಿದ್ದಕ್ಕೆ ನನಗೆ ಪಶ್ಚಾತ್ತಾಪವಿಲ್ಲ. ನಾನು ಕೂಡ ಆ ಸನ್ನಿವೇಶದಲ್ಲಿದ್ದರೆ ಇದೇ ನಿರ್ಧಾರ ಕೈಗೊಳ್ಳುತ್ತಿದ್ದೆ ಎಂದು ದುಬೈನಲ್ಲಿ ಚೀನಾದ ಸರಕಾರಿ ಟಿವಿ ಚಾನಲ್ ಸಿಸಿಟಿವಿಗೆ ನೀಡಿದ್ದ ಸಂದರ್ಶನದಲ್ಲಿ ಜನರಲ್ ಪರ್ವೇಜ್ ಮುಷರ್ರಫ್ ತಿಳಿಸಿದ್ದಾರೆ.
ತಾಲಿಬಾನ್ ಉಗ್ರಗಾಮಿ ಸಂಘಟನೆಯ ವಿಚಾರಧಾರೆಗಳು ಪಾಕಿಸ್ತಾನಕ್ಕೆ ಸರಿಹೊಂದುವುದಿಲ್ಲವಾದ್ದರಿಂದ ತಾವು ಈ ನಿರ್ಣಯ ಕೈಗೊಳ್ಳುವುದು ಅನಿವಾರ್ಯವಾಯಿತು ಎಂದು ಹೇಳಿರುವ ಜನರಲ್ ಪರ್ವೇಜ್ ಮುಷರ್ರಫ್, ಅಫ್ಘಾನಿಸ್ತಾನದಲ್ಲಿರುವ ತಾಲಿಬಾನ್ ಉಗ್ರರ ವಿರುದ್ಧ ಭಾರತದಿಂದ ಅಮೆರಿಕ ಪಡೆಗಳು ದಾಳಿನಡೆಸುವ ಸಾಧ್ಯತೆಯಿದ್ದು, ಇದು ಪಾಕಿಸ್ತಾನದ ಸಾರ್ವಭೌಮತೆಗೆ ಧಕ್ಕೆಯುಂಟಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಅಮೆರಿಕ ಪಡೆಗಳು ಅಫ್ಘಾನಿಸ್ತಾನದಲ್ಲಿರುವ ತಾಲಿಬಾನ್ ಉಗ್ರರ ವಿರುದ್ಧ ದಾಳಿ ನಡೆಸುವುದು ನಿಶ್ಚಿತವಾಗಿದೆ ಆದರೆ ಅವರು ಎಲ್ಲಿಂದ ದಾಳಿ ನಡೆಸುತ್ತಾರೆ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ತಮ್ಮ ನೆಲದಿಂದಲೇ ದಾಳಿ ನಡೆಸಲು ಅಮೆರಿಕ ಪಡೆಗೆ ಎಲ್ಲ ಸೌಕರ್ಯ ಕಲ್ಪಿಸಲು ಭಾರತ ಸಜ್ಜಾಗಿದೆ ಎಂದು ಪರ್ವೇಜ್ ಮುಷರ್ರಫ್ ಆಪಾದಿಸಿದ್ದಾರೆ.
ಭಾರತದ ನೆಲದಿಂದ ಅಮೆರಿಕ ಅಫ್ಘಾನ್ ಉಗ್ರರಮೇಲೆ ದಾಳಿ ನಡೆಸುವುದನ್ನು ಪಾಕಿಸ್ತಾನವು ಸಹಜವಾಗಿಯೇ ವಿರೋಧಿಸುತ್ತದೆ. ಅಫ್ಘಾನಿಸ್ತಾನಕ್ಕೆ ದಾಳಿ ನಡೆಸಲು ಅಮೆರಿಕ ಪಡೆಗಳು ಹೋಗಲು ಪಾಕಿಸ್ತಾನದ ಮಾರ್ಗವನ್ನೇ ಬಳಸುವುದು ಅನಿವಾರ್ಯವಾಗಿರುವುದರಿಂದ ನಮ್ಮ ಸಾರ್ವಭೌಮತೆಗೆ ಧಕ್ಕೆಯುಂಟಾಗುತ್ತದೆ ಎಂದು ಪರ್ವೇಜ್ ಮುಷರ್ರಫ್ ಹೇಳಿದ್ದಾರೆ.