ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕಿಸ್ತಾನ ಆರ್ಮಿ: ಶಹೀದಾ ಮೊದಲ ತ್ರಿ ಸ್ಟಾರ್ ಜನರಲ್ (Pakistan Army, Shahida Badshah Woman officer, International News in Kannada,World News in Kannada)
ಪಾಕಿಸ್ತಾನ ಆರ್ಮಿ: ಶಹೀದಾ ಮೊದಲ ತ್ರಿ ಸ್ಟಾರ್ ಜನರಲ್
ಇಸ್ಲಾಮಾಬಾದ್, ಸೋಮವಾರ, 12 ಸೆಪ್ಟೆಂಬರ್ 2011( 18:58 IST )
ಪಾಕಿಸ್ತಾನ ಸೇನೆಯ ಹಿರಿಯ ಅಧಿಕಾರಿಯಾಗಿರುವ ಶಹೀದಾ ಬಾದ್ ಶಹಾ ದೇಶದ ಮೊದಲ ತ್ರಿ ಸ್ಟಾರ್ ಜನರಲ್ ಆಗುವ ನಿಟ್ಟಿನಲ್ಲಿ ದಾಪುಗಾಲಿಟ್ಟಿದ್ದಾರೆ.
ಪಾಕ್ ಸೇನೆಯ ಹಿರಿಯ ಅಧಿಕಾರಿಯಾಗಿರುವ ಟೂ ಸ್ಟಾರ್ ಜನರಲ್ ಆಗಿರುವ ಶಹೀದಾ ಪ್ರಸ್ತುತ ಸೇನಾ ಮೆಡಿಕಲ್ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅಕ್ಟೋಬರ್‌ನಲ್ಲಿ ಐವರು ಲೆಫ್ಟಿನೆಂಟ್ ಜನರಲ್‌ಗಳು ನಿವೃತ್ತರಾಗಲಿದ್ದು, ಈ ಸಂದರ್ಭದಲ್ಲಿ ತಮಗೆ ಬಡ್ತಿ ದೊರೆಯಲಿದೆ ಎಂದು ಶಹೀದಾ ಬಾದ್‌ಶಹಾ ನಿರೀಕ್ಷಿಸಿದ್ದಾರೆ ಎಂದು ನ್ಯೂಸ್ ಡೈಲಿ ಪತ್ರಿಕೆ ವರದಿ ಮಾಡಿದೆ.
ಸರ್ಜನ್ ಜನರಲ್ ಲೆಫ್ಟಿನೆಂಟ್ ಜನರಲ್ ರೆಹಾನ್ ಬರ್ನಿ ಹಾಗೂ ಇತರೆ ಮೂರು ಮಂದಿ ತ್ರಿ ಸ್ಟಾರ್ ಜನರಲ್‌ಗಳು ಅಕ್ಟೋಬರ್‌ನಲ್ಲಿ ನಿವೃತ್ತಿಯಾಗಲಿದ್ದು, ಅವರ ಸ್ಥಾನದಲ್ಲಿ ಬರ್ನಿ ನೇಮಕವಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಐದು ಮಂದಿ ಲೆಫ್ಟಿನೆಂಟ್ ಜನರಲ್ ಆಯ್ಕೆಗಾಗಿ ಪ್ರಕ್ರಿಯೆಗಳು ಆರಂಭವಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಸೇನೆಯಲ್ಲಿ ಮಹಿಳೆಯರನ್ನು ಹೊಂದಿರುವ ಏಕೈಕ ಮುಸ್ಲಿಂ ರಾಷ್ಟ್ರ ಪಾಕಿಸ್ತಾನವಾಗಿದ್ದು, ಬಹುತೇಕ ಮಹಿಳಾ ಸೇನಾಧಿಕಾರಿಗಳು ಆರೋಗ್ಯ ವಿಭಾಗ ಅಥವಾ ಶಿಕ್ಷಣ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.