ಇಸ್ಲಾಮಾಬಾದ್, ಮಂಗಳವಾರ, 13 ಸೆಪ್ಟೆಂಬರ್ 2011( 09:28 IST )
ಪಾಕಿಸ್ತಾನದ ಆಡಳಿತಾರೂಢ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ), ಮುಂಬರುವ ಚುನಾವಣೆಯಲ್ಲಿ ಪ್ರಬಲ ಎದುರಾಳಿ ನವಾಜ್ ಶರೀಫ್ ಅವರ ಪಿಎಂಎಲ್ ನ್ನು ಹಣಿಯುವ ನಿಟ್ಟಿನಲ್ಲಿ ಮಾಜಿ ಮಿಲಿಟರಿ ಆಡಳಿತಗಾರ ಜನರಲ್ ಪರ್ವೇಜ್ ಮುಷರ್ರಫ್ ಅವರೊಂದಿಗೆ ರಹಸ್ಯ ಮಾತುಕತೆ ನಡೆಸಿದೆ ಎಂಬ ಅಂಶ ಮಾಧ್ಯಮ ವರದಿಯಿಂದ ಬಹಿರಂಗವಾಗಿದೆ.
ಪಿಪಿಪಿ ಹಾಗೂ ಜನರಲ್ ಪರ್ವೇಜ್ ಮುಷರ್ರಫ್ ಅವರ ಆಲ್ ಪಾಕಿಸ್ತಾನ್ ಮುಸ್ಲಿಂ ಲೀಗ್(ಎಪಿಎಂಎಲ್) ತಮ್ಮ ಪ್ರಬಲ ಎದುರಾಳಿ ಪಿಎಂಎಲ್-ಎನ್ ಸೋಲಿಸಲು ಗುಟ್ಟಾಗಿ ಕಾರ್ಯತಂತ್ರ ರೂಪಿಸಿವೆ ಎಂದು ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.
ಪಿಪಿಪಿ ಪಕ್ಷದ ನಿಯೋಗವು ಜನರಲ್ ಪರ್ವೇಜ್ ಮುಷರ್ರಫ್ ಅವರ ಹಿರಿಯ ಸಲಹೆಗಾರ ಚೌಧರಿ ಸಫ್ರಾಜ್ ಅಂಜುಂ ಕೋಲ್ಹಾನ್ ಅವರೊಂದಿಗೆ ಬ್ರಿಟನ್‌ನ ಕೇಂಬ್ರಿಡ್ಜ್ ನಲ್ಲಿ ಸೆಪ್ಟೆಂಬರ್ 7ರಂದು ಎರಡು ಗಂಟೆಗೂ ಹೆಚ್ಚುಕಾಲ ಮಾತುಕತೆ ನಡೆಸಿದ್ದು, ಸ್ವಯಂ ಗಡೀಪಾರಾಗಿರುವ ಮುಷರ್ರಫ್ ಅವರು ಚುನಾವಣೆ ವೇಳೆ ದೇಶಕ್ಕೆ ಮರಳುವುದಾಗು ಹೇಳಿದ್ದ ಹಿನ್ನೆಲೆಯಲ್ಲಿ ಈ ಮಾತುಕತೆ ಪ್ರಾಮುಖ್ಯುತೆ ಪಡೆದಿದೆ.
ಪಿಪಿಪಿ ಮತ್ತು ಜನರಲ್ ಪರ್ವೇಜ್ ಮುಷರ್ರಫ್ ಅವರ ಎಪಿಎಂಎಲ್ ಪರಸಸ್ಪರ ಸಾರ್ವಜನಿಕವಾಗಿ ಟೀಕಿಸದಿರಲು ಹಾಗೂ ಸಮಾನ ಪ್ರತಿಸ್ಪರ್ಧಿ ಪಿಎಂಎಲ್ ವಿರುದ್ದ ವಾಗ್ದಾಳಿ ನಡೆದಲು ಒಪ್ಪಂದ ಮಾಡಿಕೊಂಡಿವೆ.
ತಮ್ಮ ಪ್ರಬಲ ಎದುರಾಳಿ ಪಿಎಂಎಲ್‌ಎನ್ ಪಕ್ಷವನ್ನು ಮುಂಬರುವ ಚುನಾವಣೆಯಲ್ಲಿ ಸೋಲಿಸುವ ನಿಟ್ಟಿನಲ್ಲಿ ಪಿಪಿಪಿ ಮತ್ತು ಎಪಿಎಂಎಲ್ ಒಪ್ಪಂದ ಮಾಡಿಕೊಂಡಿವೆ ಎನ್ನಲಾಗಿದೆ.
ಮಹಾಭಿಯೋಗವನ್ನು ತಪ್ಪಿಸಿಕೊಳ್ಳಲು 2008ರಲ್ಲಿ ಅಧಿಕಾರದಿಂದ ಕೆಳಗಿಳಿದಿದ್ದ ಜನರಲ್ ಪರ್ವೇಜ್ ಮುಷರ್ರಫ್, 2009ರಿಂದಲೂ ಪಾಕಿಸ್ತಾನದ ಹೊರಗೆ ವಾಸಿಸುತ್ತಿದ್ದಾರೆ. 2013 ರಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಮಾರ್ಚ್ 23ರಂದು ಪಾಕಿಸ್ತಾನಕ್ಕೆ ಮರಳುವುದಾಗಿ ಪರ್ವೇಜ್ ಮುಷರ್ರಫ್ ತಿಳಿಸಿದ್ದರು.