62 ವರ್ಷದ ವ್ಯಕ್ತಿ ನೀಡಿದ ದೂರಿನ ಮೇರೆಗೆ 42 ವರ್ಷದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಆಕೆಯೊಂದಿಗೆ ತಾನು ಯಾವುದೇ ರೀತಿಯ ಸಂಬಂಧ ಹೊಂದಿಲ್ಲ ಎಂದು ಆ ವ್ಯಕ್ತಿ ತಿಳಿಸಿದ್ದಾರೆ.
ನಾವಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದುದರಿಂದ ಹಲವಾರು ಬಾರಿ ಕರೆ ಮಾಡಿದ್ದಾಗಿ ಮಹಿಳೆ ಹೇಳಿದ್ದಾಳೆ. ಆದರೆ ಆತ ತಾನು ಯಾವುದೇ ಸಂಬಂಧ ಹೊಂದಿಲ್ಲದಿದ್ದರೂ ಅನಗತ್ಯವಾಗಿ ಕರೆ ಮಾಡುತ್ತಿದ್ದಳು ಎಂದು ಆಪಾದಿಸಿದ್ದಾನೆ.
ರೋಟರ್‌ಡ್ಯಾಂನಲ್ಲಿರುವ ಮಹಿಳೆಯ ಮನೆಯಿಂದ ಪೊಲೀಸರು ಮೊಬೈಲ್ ಫೋನ್‌ಗಳು, ಕಂಪ್ಯೂಟರ್‌ಗಳನ್ನು ವಶಪಡಿಸಿಕೊಂಡಿದ್ದು, ಮತ್ತೆ ಆ ವ್ಯಕ್ತಿಗೆ ಕರೆ ಮಾಡದಂತೆ ತಾಕೀತು ಮಾಡಿದ್ದಾರೆ.