ತಮ್ಮ ಬಲ ಕುಗ್ಗಿರುವುದರಿಂದ ಲಿಬಿಯಾ ಗಡಿಯನ್ನು ದಾಟಿರುವ ಗಡಾಫಿ ಪುತ್ರ ಅಲ್ ಸಾದಿ, ಲಿಬಿಯಾ ಗಡಿಯನ್ನು ದಾಟಿದ್ದಾನೆ. ಸೋಮವಾರ ಆತ ಅಗಾದೇಜ್ ನಗರದಲ್ಲಿದ್ದ ಎಂದು ಹೇಳಲಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಸರಕಾರಿ ವಕ್ತಾರ ಮರೋಅಮದೌ, ಮಂಗಳವಾರ ಮಧ್ಯರಾತ್ರಿ ಆತ ನಿಗರ್ ದೇಶದ ರಾಜಧಾನಿ ನಿಯಾಮಿಗೆ ಪರಾರಿಯಾಗಿದ್ದಾನೆ ಎಂದು ತಿಳಿಸಿದ್ದಾರೆ.
ಮುಅಮ್ಮರ್ ಗಡಾಫಿ ಅವರ ಮೂರು ಮಂದಿ ಸೇನಾಧಿಕಾರಿಗಳೂ ಸಹ ನಿಯಾಮಿಯಲ್ಲಿದ್ದು, ರಾಜಕೀಯ ಆಶ್ರಯಕ್ಕಾಗಿ ಯತ್ನಿಸುತ್ತಿದ್ದು, ನಿಗೇರ್ ದೇಶದ ಅಧಿಕಾರಿಗಳೊಂದಿಗೆ ಮಂಗಳವಾರ ಸಂಧಾನ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.