ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಹುಬ್ಬೇರಿಸ್ಬೇಡಿ...ಇದು ಲಾಡ್ಜ್ ಅಲ್ಲ, ಶವಗಳ ಹೋಟೆಲ್ ಅಂತೆ!
(Japan, hotel for the dead, Latest News in Kannada, Kannada News, International News in Kannada)
ಹುಬ್ಬೇರಿಸ್ಬೇಡಿ...ಇದು ಲಾಡ್ಜ್ ಅಲ್ಲ, ಶವಗಳ ಹೋಟೆಲ್ ಅಂತೆ!
ಟೋಕಿಯೋ, ಗುರುವಾರ, 15 ಸೆಪ್ಟೆಂಬರ್ 2011( 12:18 IST )
ರೂಂ ಖಾಲಿ ಇದೆಯಾ ಎಂದು ಕೇಳಲು ಹೋದ ಯುವ ಜೋಡಿಗೆ ಆಘಾತ ಕಾದಿತ್ತು. ಯಾಕೆ ಗೊತ್ತಾ ತಾವು ಬಂದಿದ್ದು ಲಾಡ್ಜಿಂಗ್ ಅಲ್ಲ ಅದು ಹೆಣಗಳನ್ನಿಡುವ ಶೈತ್ಯಾಗಾರ ಕೋಣೆಗಳಿರುವ (ಕೋಲ್ಡ್ ಸ್ಟೋರೇಜ್) ವಿಶೇಷ ಹೋಟೆಲ್ ಅದಾಗಿತ್ತು! ಅಯ್ಯೋ, ಇದೇನಪ್ಪಾ ಅಂತ ಹುಬ್ಬೇರಿಸ್ಬೇಡಿ.
ಜಪಾನ್‌ನ ಯೋಕೋಹಾಮ ನಗರದಲ್ಲಿರುವ ಈ ವಿಶೇಷ ಹೋಟೆಲ್‌ನಲ್ಲಿ ಶವಗಳನ್ನಿಡಲು ಕೋಲ್ಡ್ ಸ್ಟೋರೇಜ್ (ಶೀಥಲೀಕರಣ ವ್ಯವಸ್ಥೆ ) ಮಾಡಲಾಗಿದ್ದು, ಶವಗಳನ್ನು ಹೋಟೆಲ್‌ನಲ್ಲಿರುವ ಕೋಲ್ಡ್ ಸ್ಟೋರೇಜ್‌ನಲ್ಲಿಟ್ಟಿದ್ದು, ಮೃತರ ಸಂಬಂಧಿಕರು ಯಾವಾಗಲಾದರೂ ಬಂದು ಶವವನ್ನು ನೋಡುವ ಅವಕಾಶ ಇಲ್ಲಿದೆ ಎಂದು ದಿ ಡೈಲಿ ಮೇಲ್ ವರದಿ ಮಾಡಿದೆ.
ಶವವನ್ನು ಇಲ್ಲಿ ಶಾಶ್ವತವಾಗಿ ಇಡಲು ಸಾಧ್ಯವಿಲ್ಲ. ಅಂತ್ಯ ಸಂಸ್ಕಾರಕ್ಕಾಗಿ ಬಹಳ ದಿನಗಳ ಕಾಲ ಕಾಯಬೇಕಾಗಿರುವುದರಿಂದ ಈ ವ್ಯವಸ್ಥೆ ಮಾಡಲಾಗಿದೆ.
ಈ ಹೋಟೆಲ್‌ನಲ್ಲಿ 18 ಶವ ಪೆಟ್ಟಿಗೆಗಳಿದ್ದು, ಪ್ರತಿಯೊಂದು ಶವಪೆಟ್ಟಿಗೆಗೂ 12ಸಾವಿರ ಯೆನ್ (157ಡಾಲರ್) ವೆಚ್ಚವಾಗುತ್ತದೆ.
ರೂಂ ಕೇಳಲು ಬಂದ ಯುವ ಜೋಡಿಗಳ ಕುರಿತು ಮಾತನಾಡಿದ ಹೋಟೆಲ್ ಮಾಲೀಕ ಹಿಸಾಯೋಶಿ ಟ್ರಾಮೂರಾ, ನಮ್ಮ ಹೋಟೆಲ್ ನಲ್ಲಿ ಉಳಿಯಲು ರೂಂಗಳಿಲ್ಲ. ಶವಪೆಟ್ಟಿಗೆಗಳಿವೆ ಎಂದು ಹೇಳಿದ್ದಾಗಿ ತಿಳಿಸಿದ್ದಾರೆ.
ಜಪಾನಿನಲ್ಲಿ ಸಾಯುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, 2009ರಲ್ಲಿ 55 ಸಾವಿರ ಜನರು ಮೃತಪಟ್ಟಿದ್ದರೆ, 2010ರಲ್ಲಿ 12 ಲಕ್ಷ ಜನರು ಮೃತಪಟ್ಟಿದ್ದಾರೆ ಎಂದು ಸರಕಾರಿ ದಾಖಲೆಗಳಿಂದ ತಿಳಿದು ಬಂದಿದೆ.
ಕಳೆದೊಂದು ದಶಕದಲ್ಲಿ ಪ್ರತಿ ವರ್ಷ ಸರಾಸರಿ 23 ಸಾವಿರಕ್ಕೂ ಹೆಚ್ಚು ಜನರು ಸಾಯುತ್ತಿದ್ದಾರೆ. ದೇಶದಲ್ಲಿ ಸಾಯುವವರ ಸಂಖ್ಯೆ 2040 ರ ವೇಳೆಗೆ 16.6 ಲಕ್ಷಕ್ಕೇರಲಿದೆ ಎಂದು ಅಂದಾಜಿಸಲಾಗಿದೆ.
ಯೋಕೋಹಾಮದಲ್ಲಿ ಮೃತರ ಅಂತ್ಯ ಸಂಸ್ಕಾರಕ್ಕಾಗಿ ಕನಿಷ್ಟ 4 ದಿನ ಕಾಯಬೇಕಾಗಿದೆ. ಶವಗಳನ್ನು ಇಷ್ಟು ದಿನಗಳ ಕಾಲ ಮನೆಯಲ್ಲಿಡಲು ಸ್ಥಳಾವಕಾಶವಿಲ್ಲದೇ ಇರುವುದರಿಂದ ಶವಗಳನ್ನು ಸಂರಕ್ಷಿಸಲು ಇಂತಹಾ ಹೋಟೆಲ್‌ಗಳು ಸಹಕಾರಿಯಾಗಿವೆ.