ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್:ರೈಲ್ವೆ ಎಂಜಿನ್ ಗುತ್ತಿಗೆ ಯತ್ನ-ಪ್ರಕರಣ ಕೋರ್ಟ್‌ಗೆ (Pakistan Railways | Indian engines | Lahore High Court | Latest News in Kannada)
ಪಾಕಿಸ್ತಾನ ರೈಲ್ವೆ ಇಲಾಖೆಗೆ ಇಂಜಿನ್‌ಗಳ ಕೊರತೆ ಕಾಡುತ್ತಿರುವ ಹಿನ್ನೆಲೆಯಲ್ಲಿ ಭಾರತದ ರೈಲ್ವೆ ಇಲಾಖೆಯಿಂದ 50 ಎಂಜಿನ್‌ಗಳನ್ನು ಗುತ್ತಿಗೆ ಆಧಾರದ ಮೇಲೆ ಪಡೆಯಲು ಯತ್ನಿಸಿತ್ತು. ಆದರೆ ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರಿಂದಾಗಿ ಇದು ಕಾರ್ಯ ರೂಪಕ್ಕೆ ಬರುವುದು ಅಸಾಧ್ಯವಾಗಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಪಾಕಿಸ್ತಾನ ರೈಲ್ವೆ ಇಲಾಖೆ ಭಾರತದಿಂದ 50 ಎಂಜಿನ್‌ಗಳನ್ನು ಗುತ್ತಿಗೆ ಆಧಾರದ ಮೇಲೆ ಪಡೆಯಲು ನಿರ್ಧರಿಸಿರುವುದನ್ನು ಲಾಹೋರ್ ಹೈಕೋರ್ಟ್‌ನಲ್ಲಿ ವಕೀಲ ಅನ್ಸರ್‌ ಜಸ್ಪಾಲ್‌ ಪ್ರಶ್ನಿಸಿದ್ದಾರೆ.

ರೈಸಾಲ್‌ಪುರ್‌ ಕಾರ್ಖಾನೆಯು ವಾರ್ಷಿಕವಾಗಿ 25 ರೈಲ್ವೆ ಎಂಜಿನ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರುವುದರಿಂದ ಭಾರತದಿಂದ ನೆರವು ಕೋರುವ ಬದಲು ನಮ್ಮ ಸ್ವಂತ ಸಂಪನ್ಮೂಲಗಳನ್ನು ಬಳಸಿಕೊಳ್ಳಬಹುದು ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.

ಭಾರತದಿಂದ ರೈಲ್ವೆ ಇಂಜಿನ್‌ ಗುತ್ತಿಗೆ ಪಡೆಯುವುದಕ್ಕೆ ತಡೆಯೊಡ್ಡುವುದರೊಂದಿಗೆ ಪಾಕಿಸ್ತಾನದಲ್ಲಿರುವ ಸಂಪನ್ಮೂಲಗಳನ್ನೇ ಸದ್ಬಳಕೆ ಮಾಡಿಕೊಳ್ಳುವಂತೆ ಪಾಕಿಸ್ತಾನ ರೈಲ್ವೆ ಇಲಾಖೆಗೆ ನಿರ್ದೇಶನ ನೀಡುವಂತೆಯೂ ಅವರು ಅರ್ಜಿಯಲ್ಲಿ ಕೋರಿದ್ದಾರೆ.

ಇದರೊಂದಿಗೆ ಹಾಳಾಗಿರುವ 450 ರೈಲ್ವೆ ಎಂಜಿನ್‌ಗಳನ್ನು ದುರಸ್ತಿ ಮಾಡಿಸುವಂತೆಯೂ ರೈಲ್ವೆ ಇಲಾಖೆಗೆ ಆದೇಶ ನೀಡುವಂತೆಅರ್ಜಿದಾರರು ಕೋರಿದ್ದಾರೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಪಾಕಿಸ್ತಾನ ರೈಲ್ವೆ ಇಲಾಖೆ, ಭಾರತ ರೈಲ್ವೆ ಎಂಜಿನ್ ಗುತ್ತಿಗೆ, ಲಾಹೋರ್ ಹೈ ಕೋರ್ಟ್, ಕನ್ನಡ ಸುದ್ದಿ, ಕರ್ನಾಟಕ ಸುದ್ದಿ, ರಾಷ್ಟ್ರೀಯ ಸುದ್ದಿ, ಬ್ರೇಕಿಂಗ್ ನ್ಯೂಸ್, ತಾಜಾ ಕನ್ನಡ ಸುದ್ದಿ, ರಾಜಕೀಯ, ಬೆಂಗಳೂರು ಸುದ್ದಿ, ಫಾರಿನ್ ಸುದ್ದಿ, ಅಂತಾರಾಷ್ಟ್ರೀಯ, ಅಂತರರಾಷ್ಟ್ರೀಯ, ಅಂತರ್ರಾಷ್ಟ್ರೀಯ ಸುದ್ದಿ