ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮತ್ತೆ ಡಬ್ಬಲ್ ಗೇಮ್ ಬಯಲು; ಜವಾಹಿರಿ ಪಾಕ್‌ನಲ್ಲಿ (Al-Qaeda | Ayman al-Zawahiri | Pakistan | Pentagon | Latest News in Kannada)
ಮತ್ತೆ ಡಬ್ಬಲ್ ಗೇಮ್ ಬಯಲು; ಜವಾಹಿರಿ ಪಾಕ್‌ನಲ್ಲಿ
ವಾಷಿಂಗ್ಟನ್, ಶುಕ್ರವಾರ, 16 ಸೆಪ್ಟೆಂಬರ್ 2011( 09:13 IST )
ಅಲ್ ಖೈದಾ ಉಗ್ರಗಾಮಿ ಸಂಘಟನೆ ನಾಯಕ ಐಮನ್ ಅಲ್ ಜವಾಹಿರಿ ಈಗಲೂ ಪಾಕಿಸ್ತಾನದಲ್ಲಿದ್ದಾನೆ ಎಂದು ಪೆಂಟಾಗನ್ ಅಧಿಕಾರಿಗಳು ಹೇಳಿದ್ದಾರೆ.
ಐಮನ್ ಅಲ್ ಜವಾಹಿರಿ ಪಾಕಿಸ್ತಾನದ ಯಾವ ಭಾಗದಲ್ಲಿದ್ದಾನೆ ಎಂಬುದರ ಕುರಿತು ನನಗೆ ಮಾಹಿತಿಯಿಲ್ಲ ಎಂದು ಪೆಂಟಾಗನ್ ವಕ್ತಾರ ಜಾರ್ಜ್ ಲಿಟ್ಲ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ದಿ ನ್ಯೂಸ್ ಪತ್ರಿಕೆ ವರದಿ ಮಾಡಿದೆ.
ಅಮೆರಿಕ ಕಮಾಂಡೋ ಪಡೆಗಳು ಮೇ 2ರಂದು ಪಾಕಿಸ್ತಾನದ ಅಬೋಟಾಬಾದ್‌ನಲ್ಲಿ ಅಲ್ ಖೈದಾ ಮುಖಂಡ ಒಸಾಮಾ ಬಿನ್ ಲಾಡೆನ್ ಅಡಗುತಾಣದ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿದ ನಂತರ ಐಮನ್ ಅಲ್ ಜವಾಹಿರಿ ಅಲ್‌ಖೈದಾ ಉಗ್ರಗಾಮಿ ಸಂಘಟನೆಯ ನೇತೃತ್ವ ವಹಿಸಿದ್ದ.
ಅಮೆರಿಕದ ಮೇಲೆ 9/11 ದಾಳಿ ನಡೆದು 10 ವರ್ಷ ಪೂರೈಸಿರುವ ಸಂದರ್ಭದಲ್ಲೇ ಅಲ್‌ಖೈದಾ ಉಗ್ರಗಾಮಿ ಸಂಘಟನೆ ಜಿಹಾದ್ ವೆಬ್‌ಸೈಟ್‌ಗಳಲ್ಲಿ 9/11 ದಾಳಿಯ ಒಂದು ಗಂಟೆ ಕಾಲಾವಧಿಯ ವೀಡಿಯೋ ಬಿಡುಗಡೆ ಮಾಡಿದ್ದು, ವೀಡಿಯೋ ದೃಶ್ಯಾವಳಿಗೆ ದಿ ಡಾನ್ ಆಫ್ ಇಮಿನೆಂಟ್ ವಿಕ್ಟರಿ ಎಂಬ ತಲೆಬರಹ ನೀಡಲಾಗಿತ್ತು.
ಈ ವೀಡಿಯೋ ದೃಶ್ಯಾವಳಿಯನ್ನು ಅಲ್‌ಖೈದಾದ ಮಾಧ್ಯಮ ವಿಭಾಗ ಅಲ್ ಸಹಬ್ ಬಿಡುಗಡೆ ಮಾಡಿದ್ದ ಈ ವೀಡಿಯೋ ದೃಶ್ಯಾವಳಿಯಲ್ಲಿ ಅಲ್ ಖೈದಾ ಮುಖಂಡ ಐಮನ್ ಅಲ್ ಜವಾಹಿರಿಯ ಧ್ವನಿ ಸಂದೇಶ ಹಾಗೂ ಅಲ್ ಖೈದಾ ಮಾಜಿ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಇರುವ ದೃಶ್ಯಾವಳಿಯನ್ನು ಬಿಡುಗಡೆ ಮಾಡಿತ್ತು ಎಂದು ಸೈಟ್ ಇಂಟಲಿಜೆನ್ಸ್ ತಿಳಿಸಿತ್ತು.