ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಇಂಡಿಯನ್ ಮುಜಾಹಿದೀನ್ ಪಕ್ಕಾ ಟೆರರ್ ಸಂಘಟನೆ:ಅಮೆರಿಕ (Indian Mujahideen | United States | Terror group | Latest News in Kannada)
ಇಂಡಿಯನ್‌ ಮುಜಾಹಿದೀನ್‌ ಕುಖ್ಯಾತ ಉಗ್ರಗಾಮಿ ಸಂಘಟನೆಯನ್ನು ನಿಷೇಧಿತ ವಿದೇಶಿ ಉಗ್ರಗಾಮಿಗಳ ಪಟ್ಟಿಗೆ ಸೇರಿಸುವಂತೆ ಅಮೆರಿಕ ಅಧಿಕಾರಿಗಳಿಗೆ ಸೂಚಿಸಿದೆ. 2005ರಲ್ಲಿ ದಾಳಿ ನಡೆಸಿದ್ದ ಉಗ್ರಗಾಮಿ ಸಂಘಟನೆ ನೂರಾರು ಮುಗ್ದ ಜನರ ಸಾವಿಗೆ ಕಾರಣವಾಗಿತ್ತು ಎಂದು ಅಮೆರಿಕ ಆಪಾದಿಸಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಇಂಡಿಯನ್‌ ಮುಜಾಹಿದೀನ್‌ ಉಗ್ರಗಾಮಿ ಸಂಘಟನೆ ಜನ ನಿಬಿಡ ಸ್ಥಳದಲ್ಲಿ ಬಾಂಬ್‌ ದಾಳಿ ನಡೆಸುವ ಮೂಲಕ ಅನಾಹುತಕ್ಕೆ ಕಾರಣವಾಗುತ್ತಿದ್ದು, ಈ ಉಗ್ರಗಾಮಿ ಸಂಘಟನೆಗೆ ಅಮೆರಿಕದ ಪ್ರಜೆಗಳು ನೆರವು ನೀಡುವುದನ್ನೂ ನಿಷೇಧಿಸಲಾಗಿದ್ದು, ಈ ಉಗ್ರಗಾಮಿ ಸಂಘಟನೆ ಅಮೆರಿಕದಲ್ಲಿ ಆಸ್ತಿಯನ್ನು ಹೊಂದಿದ್ದರೆ ಅದನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಅಮೆರಿಕ ಎಚ್ಚರಿಸಿದೆ.

ಭಾರತ ಮೂಲದ ಉಗ್ರಗಾಮಿ ಸಂಘಟನೆ ಇಂಡಿಯನ್ ಮುಜಾಹಿದೀನ್‌, ಪಾಕಿಸ್ತಾನ ಮತ್ತು ಪಾಕ್‌ ಮೂಲದ ಲಷ್ಕರ್‌ ಎ ತೊಯ್ಬಾ(ಎಲ್‌ಇಟಿ), ಜೈಷ್‌ ಎ ಮಹಮದ್(ಜೆಇಎಂ)‌, ಹಾಗೂ ಹರ್ಕತ್‌ ಉಲ್‌ ಜಿಹಾದ್‌ ಇಸ್ಲಾಮಿ (ಹುಜಿ)ಉಗ್ರಗಾಮಿ ಸಂಘಟನೆಗಳೊಂದಿಗೆ ನಂಟು ಹೊಂದಿದೆ ಎಂದು ಆಪಾದಿಸಿದ್ದ ಅಮೆರಿಕ ಐಎಂ ಸಂಘಟನೆಯನ್ನು ನಿಷೇಧಿಸಿತ್ತು.

ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಭಾರತ ಮತ್ತು ಅಮೆರಿಕ ಕಳೆದ ಹಲವಾರು ವರ್ಷಗಳಿಂದ ಪರಸ್ಪರ ಸಹಕಾರ ಹೊಂದಿವೆ. ಗುಪ್ತಚರ ಮಾಹಿತಿಗಳ ವಿನಿಮಯಕ್ಕೆ ಅಮೆರಿಕ ಇನ್ನಷ್ಟು ನೆರವು ನೀಡಬೇಕು ಎಂದು ಭಾರತದ ಅಧಿಕಾರಿಗಳು ತಿಳಿಸಿದ್ದಾರೆ.

ಪುಣೆಯ ಜರ್ಮನ್‌ ಬೇಕರಿಯ ಮೇಲೆ 2010ರಲ್ಲಿ ಇಂಡಿಯನ್ ಮುಜಾಹಿದೀನ್‌ ನಡೆಸಿದ ಬಾಂಬ್‌ ದಾಳಿಯಲ್ಲಿ 17ಜನ ಮೃತಪಟ್ಟಿದ್ದು, 60ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. 2008ರಲ್ಲಿ ದೆಹಲಿಯ ಮೇಲೆ ಐಎಂ ಸಂಘಟನೆ ನಡೆಸಿದ್ದ ಬಾಂಬ್‌ ದಾಳಿಯಲ್ಲಿ 30 ಜನರು ಮೃತಪಟ್ಟಿದ್ದರು ಎಂದು ಅಮೆರಿಕ ವಿದೇಶಾಂಗ ಇಲಾಖೆ ತಿಳಿಸಿದೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಇಂಡಿಯನ್ ಮುಜಾಹಿದೀನ್, ಅಮೆರಿಕ, ಕನ್ನಡ ಸುದ್ದಿ, ಕರ್ನಾಟಕ ಸುದ್ದಿ, ರಾಷ್ಟ್ರೀಯ ಸುದ್ದಿ, ಬ್ರೇಕಿಂಗ್ ನ್ಯೂಸ್, ತಾಜಾ ಕನ್ನಡ ಸುದ್ದಿ, ರಾಜಕೀಯ, ಬೆಂಗಳೂರು ಸುದ್ದಿ, ಫಾರಿನ್ ಸುದ್ದಿ, ಅಂತಾರಾಷ್ಟ್ರೀಯ, ಅಂತರರಾಷ್ಟ್ರೀಯ, ಅಂತರ್ರಾಷ್ಟ್ರೀಯ ಸುದ್ದಿ