ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕಿಸ್ತಾನ: ಅಲ್ ಖೈದಾ ಮುಖಂಡ ಡ್ರೋನ್ ದಾಳಿಗೆ ಬಲಿ (Al Qaeda | Abu Hafs al-Shari | Latest News in Kannada | International News in Kannada)
ಪಾಕಿಸ್ತಾನದಲ್ಲಿ ಉಗ್ರಗಾಮಿ ಚಟುವಟಿಕೆ ನಡೆಸುತ್ತಿದ್ದ ಅಲ್‌ಖೈದಾ ಸಂಘಟನೆಯ ಮುಖಂಡ ಅಬು ಅಲ್‌ ಶಾರಿಯನ್ನು ಕೊಲ್ಲಲಾಗಿದೆ ಎಂದು ಅಮೆರಿಕ ಅಧಿಕಾರಿಗಳು ತಿಳಿಸಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಅಲ್‌ಖೈದಾ ಉಗ್ರ ಅಲ್‌ ಶಾರಿಯನ್ನು ವಜೀರಿಸ್ತಾನದಲ್ಲಿ ಹತ್ಯೆ ಮಾಡಲಾಗಿದೆ ಎಂದು ತಿಳಿಸಿರುವ ಸಿಎನ್‌ಎನ್‌ ಸುದ್ದಿ ಸಂಸ್ಥೆ, ಆತ ಹೇಗೆ ಕೊಲೆಯಾದ ಎಂಬುದನ್ನು ವಿವರಿಸಿಲ್ಲ. ಅಮೆರಿಕ ಸೇನಾ ಪಡೆ ನಡೆಸಿದ ಡ್ರೋನ್‌ ದಾಳಿಯಲ್ಲಿ ಆತ ಮೃತಪಟ್ಟಿದ್ದಾನೆ ಎಂದು ಶಂಕಿಸಲಾಗಿದೆ.

ಅಬು ಅಲ್‌ ಶಾರಿಯ ನಿಧನದ ನಂತರ ಪಾಕಿಸ್ತಾನದಲ್ಲಿ ಅಲ್‌ ಖೈದಾ ಉಗ್ರಗಾಮಿ ಸಂಘಟನೆಯನ್ನು ಯಾರು ಮುನ್ನಡೆಸುತ್ತಾರೆ ಎಂಬ ಚಿಂತೆ ಅಲ್‌ ಖೈದಾ ಮುಖಂಡ ಐಮನ್‌ ಅಲ್‌ ಜವಾಹಿರಿಯನ್ನು ಕಾಡುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಮೆರಿಕ ಸೇನಾ ಪಡೆಯಿಂದ ಇತ್ತೀಚೆಗೆ ಹತ್ಯೆಗೀಡಾದ ಅತಿಯಾ ಅಬ್ದುಲ್‌ ರೆಹಮಾನ್‌ ನಿಧನದಿಂದ ತೆರವಾದ ಸ್ಥಾನಕ್ಕೆ ಅಬು ಹಫ್ಜ್‌ ಸ್ಪರ್ಧಿಯಾಗಿದ್ದ. ಪಾಕಿಸ್ತಾನದಲ್ಲಿ ಅಮೆರಿಕ ಪಡೆಗಳ ವಿರುದ್ಧ ನಡೆಯುತ್ತಿದ್ದ ಸಂಚಿನಲ್ಲಿ ಅತಿಯಾ ಅಬ್ದುಲ್‌ ರೆಹಮಾನ್‌ ಪ್ರಮುಖ ಪಾತ್ರ ವಹಿಸಿದ್ದ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಅಲ್ ಖೈದಾ, ಪಾಕಿಸ್ತಾನ, ಅಬು ಅಲ್ ಶಾರಿ, ಕನ್ನಡ ಸುದ್ದಿ, ಕರ್ನಾಟಕ ಸುದ್ದಿ, ರಾಷ್ಟ್ರೀಯ ಸುದ್ದಿ, ಬ್ರೇಕಿಂಗ್ ನ್ಯೂಸ್, ತಾಜಾ ಕನ್ನಡ ಸುದ್ದಿ, ರಾಜಕೀಯ, ಬೆಂಗಳೂರು ಸುದ್ದಿ, ಫಾರಿನ್ ಸುದ್ದಿ, ಅಂತಾರಾಷ್ಟ್ರೀಯ, ಅಂತರರಾಷ್ಟ್ರೀಯ, ಅಂತರ್ರಾಷ್ಟ್ರೀಯ ಸುದ್ದಿ