ಇರಾನ್ ರಾಜಧಾನಿ ತೆಹ್ರಾನ್‌ನಲ್ಲಿ ಶನಿವಾರ ನಡೆದ ಅಂತಾರಾಷ್ಟ್ರೀಯ ಮುಸ್ಲಿಂ ರಾಷ್ಟ್ರಗಳ ಸಮ್ಮೇಳನದಲ್ಲಿ ಮಾತನಾಡಿದ ಅಯಾತ್ ಉಲ್ಲಾ ಅಲ್ ಖಾಮೇನಿ ಅವರು ಅಮೆರಿಕ ಮತ್ತು ನ್ಯಾಟೊ ಪಡೆಗಳ ಬಗ್ಗೆ ಈ ಎಚ್ಚರಿಕೆ ನೀಡಿದ್ದಾರೆ.
ಅಮೆರಿಕ ಮತ್ತು ನ್ಯಾಟೊ ಪಡೆಗಳು ಮುಂಬರುವ ದಿನಗಳಲ್ಲಿ ಈಜಿಪ್ಟ್, ಟುನಿಶಿಯಾ, ಲಿಬಿಯಾ ಮೊದಲಾದ ರಾಷ್ಟ್ರಗಳ ಸರಕಾರದ ಮೇಲೆ ದಬ್ಬಾಳಿಕೆ ನಡೆಸುವ ಸಾಧ್ಯತೆಯಿದ್ದು, ಅರಬ್ ರಾಷ್ಟ್ರಗಳು ಇಸ್ಲಾಮಿಕ್ ಸಂಪ್ರದಾಯವನ್ನು ಬಿಡಬಾರದು ಎಂದು ಹೇಳಿದ್ದಾರೆ.
ಈಜಿಪ್ಟ್ ಮತ್ತು ಟುನಿಷಿಯಾದಲ್ಲಿ ಆಡಳಿತ ಕುಸಿಯಲು ಅಮೆರಿಕದ ಪ್ರೇರೇಪಣೆಯೇ ಕಾರಣ ಎಂದು ಆಪಾದಿಸಿರುವ ಖಾಮೇನಿ, ಈ ವಲಯದಲ್ಲಿ ಇಸ್ಲಾಂ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಹೇಳಿದ್ದಾರೆ.
ಇರಾನ್‌ನಲ್ಲಿ 1979ರಲ್ಲಿ ನಡೆದ ದಂಗೆಯ ಫಲವಾಗಿ ಅಮೆರಿಕದ ಪರವಾದ ಶಹಾನನ್ನು ಅಧಿಕಾರದಿಂದ ಕೆಳಗಿಳಿಸಿದ ನಂತರ ಕಟ್ಟಾ ಸಂಪ್ರದಾಯವಾದಿ ಸರಕಾರ ಅಧಿಕಾರಕ್ಕೆ ಬಂದಿತು ಎಂದು ಖಾಮೇನಿ ಹೇಳಿದ್ದಾರೆ.