ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಫ್ಘಾನಿಸ್ತಾನ ಮಾಜಿ ಅಧ್ಯಕ್ಷ ಬರ್ಹಾನುದ್ದೀನ್ ರಬ್ಬಾನಿ ಹತ್ಯೆ
(Burhanuddin Rabbani | Former Afghan President | UIFSA | Hamid Karzai)
ಅಫ್ಘಾನಿಸ್ತಾನ ಮಾಜಿ ಅಧ್ಯಕ್ಷ ಬರ್ಹಾನುದ್ದೀನ್ ರಬ್ಬಾನಿ ಹತ್ಯೆ
ಕಾಬೂಲ್, ಮಂಗಳವಾರ, 20 ಸೆಪ್ಟೆಂಬರ್ 2011( 20:32 IST )
ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಹಾಗೂ ಅಫ್ಘಾನಿಸ್ತಾನದ ಶಾಂತಿ ಸ್ಥಾಪನಾ ಮಂಡಳಿಯ ಅಧ್ಯಕ್ಷ ಬರ್ಹಾನುದ್ದೀನ್ ರಬ್ಬಾನಿ ಅವರು ಕಾಬೂಲ್‌ನಲ್ಲಿ ಅವರ ನಿವಾಸದಲ್ಲಿ ನಡೆದ ಆತ್ಮ ಹತ್ಯಾ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಬ್ಬಾನಿ ಅವರು ಇಬ್ಬರು ತಾಲಿಬಾನ್ ಮುಖಂಡರ ಜೊತೆ ಮಂಗಳವಾರ ಚರ್ಚಿಸುತ್ತಿದ್ದಾಗ ಅದರಲ್ಲೊಬ್ಬ ತನ್ನನ್ನು ತಾನೇ ಸ್ಪೋಟಿಸಿಕೊಂಡಿದ್ದರಿಂದ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಕಾಬೂಲ್ ಪೊಲೀಸ್ ಪಡೆಯ ಅಪರಾಧ ತನಿಖಾ ವಿಭಾಗದ ಮುಖ್ಯಸ್ಥ ಮಹಮದ್ ಜಾಹಿರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಬರ್ಹಾನುದ್ದೀನ್ ರಬ್ಬಾನಿ ಅವರು 1992ರಿಂದ 1996ರ ವರೆಗೆ ಅಘ್ಘಾನಿಸ್ತಾನದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಅಫ್ಘಾನಿಸ್ತಾನದ ಜಮೀಯತ್ ಎ ಇಸ್ಲಾಮಿ (ಅಫ್ಘಾನಿಸ್ತಾನ ಇಸ್ಲಾಮಿಕ್ ಸಮಾಜ) ಮುಖಂಡರಾಗಿದ್ದ ರಬ್ಬಾನಿ ಅವರು ತಾಲಿಬಾನ್ ಆಡಳಿತದ ವಿರುದ್ಧ ಹೋರಾಟ ನಡೆಸುತ್ತಿದ್ದ ರಾಜಕೀಯ ಪಕ್ಷಗಳ ಒಕ್ಕೂಟಲಾದ 'ಆಫ್ಘಾನಿಸ್ತಾನ ವಿಮೋಚನೆಯ ಸಂಯುಕ್ತ ಇಸ್ಲಾಮಿ ರಂಗ' (ಯುಐಎಫ್‌ಎಸ್‌ಎ)ದ ಮುಖ್ಯಸ್ಥರಾಗಿಯೂ ಕಾರ್ಯ ನಿರ್ವಹಿಸಿದ್ದರು.
ಅಫ್ಘಾನಿಸ್ತಾನದ ಆಡಳಿತವನ್ನು ಬಲವಂತವಾಗಿ ವಶಪಡಿಸಿಕೊಂಡ ತಾಲಿಬಾನ್, ರಬ್ಬಾನಿ ಅವರನ್ನು ದೇಶದಿಂದಲೇ ಓಡಿಸಿತ್ತು. ರಬ್ಬಾನಿ ಅವರು ಪ್ರಸ್ತುತ ಅಫ್ಘಾನಿಸ್ತಾನ ನ್ಯಾಷನಲ್ ಫ್ರಂಟ್ (ಯುನೈಟೆಡ್ ನ್ಯಾಷನಲ್ ಫ್ರಂಟ್) ಮುಖ್ಯಸ್ಥರಾಗಿದ್ದರು. ಅಫ್ಘಾನಿಸ್ತಾನ ನ್ಯಾಷನಲ್ ಫ್ರಂಟ್ ದೇಶದ ಪ್ರಮುಖ ಪ್ರತಿಪಕ್ಷವಾಗಿದೆ. ಅಲ್ಲದೆ, ಹಾಲಿ ಅಧ್ಯಕ್ಷ ಹಮೀದ್ ಕರ್ಜಾ