ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಯೋತ್ಪಾದನೆ ಸಂಚು-ಹೊಸ ವಿಚಾರಣೆಗೆ ರಾಣಾ ಕೋರ್ಟ್ ಮೊರೆ (Tahawwur Rana | Lashkar-e-Taiba | David Coleman Headley | Mumbai terror attacks 2008)
2008ರಲ್ಲಿ ಮುಂಬೈ ಮೇಲೆ ದಾಳಿ ನಡೆಸಿದ ಲಷ್ಕರ್‌ ಎ ತೊಯ್ಬಾ ಉಗ್ರಗಾಮಿ ಸಂಘಟನೆಗೆ ನೆರವು ನೀಡಿದ್ದ ಆಪಾದನೆಯ ಮೇಲೆ ಬಂಧಿತನಾಗಿ ಶಿಕ್ಷೆಗೊಳಗಾಗಿರುವ ಪಾಕ್‌ ಮೂಲದ ಕೆನಡಿಯನ್‌ ಉಗ್ರ ತಹಾವುರ್‌ ರಾಣಾ ಇನ್ನೆರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಹೊಸದಾಗಿ ವಿಚಾರಣೆ ನಡೆಸುವಂತೆ ನ್ಯಾಯಾಲಯದಲ್ಲಿ ಮನವಿ ಮಾಡಿಕೊಂಡಿದ್ದಾನೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಮುಂಬೈ ದಾಳಿಯಲ್ಲಿ ಕೈವಾಡವಿರುವ ಕುರಿತ ಆರೋಪಗಳಿಂದ ಶಿಕಾಗೋ ನ್ಯಾಯಾಲಯವು ರಾಣಾನಿಗೆ ದೋಷಮುಕ್ತಿ ನೀಡಿತ್ತಾದರೂ, ಲಷ್ಕರ್‌ ಎ ತೊಯ್ಬಾ ಉಗ್ರಗಾಮಿ ಸಂಘಟನೆಯು ಡೆನ್ಮಾರ್ಕ್‌ ದಿನ ಪತ್ರಿಕೆ ಜಿಲ್ಯಾಂಡ್ಸ್‌ ಪೋಸ್ಟಿನ್‌ ಪತ್ರಿಕೆಯ ಮೇಲೆ ದಾಳಿ ನಡೆಸಲು ನೆರವು ನೀಡಿದ್ದಕ್ಕಾಗಿ ನ್ಯಾಯಾಲಯವು ಆತನಿಗೆ 30 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಹೊಸದಾಗಿ ವಿಚಾರಣೆ ನಡೆಸುವಂತೆ ರಾಣಾ ನ್ಯಾಯಾಲಯದಲ್ಲಿ ವಾದಿಸಿದ್ದಾನೆ ಎಂದು ಚಿಕಾಗೋ ಸನ್‌ ಟೈಮ್ಸ್‌ ಪತ್ರಿಕೆ ತಿಳಿಸಿದೆ.

ಮುಂಬೈ ದಾಳಿ ಪ್ರಕರಣಕ್ಕೆ ಸಂಭಂಧಿಸಿದಂತೆ ಎಂಟು ದಿನಗಳ ಕಾಲ ನಡೆದ ವಿಚಾರಣೆಯ ಸಂದರ್ಭದಲ್ಲಿ ತನ್ನ ಬಾಲ್ಯದ ಸ್ನೇಹಿತ ಹಾಗೂ ಸಂಚು ರೂಪಿಸಿದ ಆರೋಪಕ್ಕೆ ಒಳಗಾಗಿರುವ ಡೇವಿಡ್‌ ಕೋಲ್ಮನ್‌ ಹೆಡ್ಲಿ ಆಲಿಯಾಸ್ ದಾವೂದ್ ಗಿಲಾನಿ ವಿಚಾರಣೆಯನ್ನು ಶಿಕಾಗೋ ನ್ಯಾಯಾಲಯ ಕಳೆದ ಜೂನ್‌ನಲ್ಲಿ ನಡೆಸಿತ್ತು. ಈ ಸಂದರ್ಭದಲ್ಲಿ ರಾಣಾ ಹೆಡ್ಲಿ ವಿರುದ್ಧ ಸರಕಾರಿ ಸಾಕ್ಷಿಯಾಗಿ ಪರಿವರ್ತನೆಗೊಂಡಿದ್ದ.

ಡೆನ್ಮಾಕ್‌ ಪತ್ರಿಕೆ ಮೇಲೆ ದಾಳಿಗೆ ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಹಾವುರ್‌ ರಾಣಾನನ್ನು ಹೊಸದಾಗಿ ವಿಚಾರಣೆ ನಡೆಸಬೇಕು ಎಂದು ಆತನ ಪರ ವಕೀಲರು ವಾದಿಸಿದ್ದಾರೆ.

ಮುಂಬೈ ದಾಳಿ ಪ್ರಕರಣ ಹಾಗೂ ಡೆನ್ಮಾರ್ಕ್‌ ಪತ್ರಿಕೆಯ ಮೇಲಿನ ದಾಳಿ ಕುರಿತ ವಿಚಾರಣೆಯನ್ನು ಏಕ ಕಾಲಕ್ಕೆ ನಡೆಸುವುದು ಸರಿಯಲ್ಲ ಎಂದು ರಾಣಾ ಪರ ವಕೀಲರು ಪತ್ರ ಬರೆದಿದ್ದಾರೆ.

ಭಯೋತ್ಪಾದನೆಗೆ ಸಂಬಂಧಿಸಿದಂತೆ ಒಂದು ಪ್ರಕರಣದ ಕುರಿತ ವಿಚಾರಣೆಯೇ ಅತಿಯಾದ ಭಯ ಹಾಗೂ ಉದ್ವೇಗಕ್ಕೆ ಒಳಗಾಗುವಂತೆ ಮಾಡುತ್ತದೆ. ಇಂತಹಾ ಸಂದರ್ಭದಲ್ಲಿ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸುವುದು ಅಸಮರ್ಥನೀಯ ಎಂದು ರಾಣಾ ಪರ ವಕೀಲರು ವಾದಿಸಿದ್ದಾರೆ.

ರಾಣಾಗೆ ನೀಡಿರುವ ಶಿಕ್ಷೆಯನ್ನೂ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದ ರಾಣಾ ಪರ ವಕೀಲರು, ರಾಣಾ ವಿರುದ್ಧ ಸರಕಾರ ನೀಡಿರುವ ಎಲ್ಲ ಸಾಕ್ಷ್ಯಾಧಾರಗಳೂ ಇ- ಮೇಲ್‌ ಹಾಗೂ ದೂರವಾಣಿ ಕರೆಗಳೇ ಆಗಿದ್ದು, ಮುದ್ರಿತ ದೂರವಾಣಿ ಸಂಭಾಷಣೆಯನ್ನು ವಿದೇಶೀ ಬೇಹುಗಾರಿಕೆ ಕಣ್ಗಾವಲು ಕಾಯ್ದೆಯಡಿಯಲ್ಲಿ ಈ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ ಎಂದು ಅವರು ತಿಳಿಸಿದ್ದರು.

ಗುಪ್ತಚರ ಸಂಸ್ಥೆಗಳು ಮಾತ್ರ ಈ ದಾಖಲೆಯನ್ನು ಸಂಗ್ರಹಿಸಬಹುದಾಗಿದ್ದು, ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾಕ್ಷ್ಯಗಳನ್ನು ಸಂಗ್ರಹಿಸುವಂತಿಲ್ಲ ಎಂದು ರಾಣಾ ಪರ ವಕೀಲರು ಪತ್ರದ ಮೂಲಕ ತಿಳಿಸಿದ್ದಾರೆ. 2009ರಿಂದ ಪೊಲೀಸರ ವಶದಲ್ಲಿರುವ ರಾಣಾ 30 ವರ್ಷ ಜೈಲು ಶಿಕ್ಷೆಗೆ ಒಳಗಾಗಿದ್ದಾನೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ತಹಾವುರ್ ರಾಣಾ, ಲಷ್ಕರ್ ಎ ತೊಯ್ಬಾ, ಡೇವಿಡ್ ಕೋಲ್ಮನ್ ಹೆಡ್ಲಿ, ಮುಂಬೈ ದಾಳಿ, ಕನ್ನಡ ಸುದ್ದಿ, ಕರ್ನಾಟಕ ಸುದ್ದಿ, ರಾಷ್ಟ್ರೀಯ ಸುದ್ದಿ, ಬ್ರೇಕಿಂಗ್ ನ್ಯೂಸ್, ತಾಜಾ ಕನ್ನಡ ಸುದ್ದಿ, ರಾಜಕೀಯ, ಬೆಂಗಳೂರು ಸುದ್ದಿ, ಫಾರಿನ್ ಸುದ್ದಿ, ಅಂತಾರಾಷ್ಟ್ರೀಯ, ಅಂತರರಾಷ್ಟ್ರೀಯ, ಅಂತರ್ರಾಷ್ಟ್ರೀಯ ಸುದ್ದಿ