ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸರಬ್ಜಿತ್ ಕ್ಷಮಾದಾನ ನಿರ್ಧಾರ ಅಂತಿಮವಾಗಿಲ್ಲ: ಪಾಕಿಸ್ತಾನ (Sarabjit Singh | Mercy petition | Pakistan | Asif Ali Zardari)
ಬಾಂಬ್‌ ಸ್ಫೋಟದ ಆಪಾದನೆಯ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿ ಬಂಧಿತರಾಗಿ ಮರಣದಂಡನೆ ಶಿಕ್ಷೆಗೆ ಒಳಗಾಗಿರುವ ಭಾರತದ ಪ್ರಜೆ ಸರಬ್ಜಿತ್‌ ಸಿಂಗ್‌ ಅವರು ಸಲ್ಲಿಸಿರುವ ಕ್ಷಮಾದಾನ ಅರ್ಜಿಯು ಪಾಕಿಸ್ತಾನ ಅಧ್ಯಕ್ಷರ ಬಳಿಯಿದ್ದು, ಈ ಕುರಿತು ಇನ್ನೂ ತೀರ್ಮಾನವಾಗಿಲ್ಲ ಎಂದು ಪಾಕ್‌ ಸರಕಾರವು ಬುಧವಾರ ನ್ಯಾಯಾಲಯಕ್ಕೆ ತಿಳಿಸಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

1990ರಲ್ಲಿ ಲಾಹೋರ್ ಮತ್ತು ಮುಲ್ತಾನ್‌ಗಳಲ್ಲಿ ಸಂಭವಿಸಿದ ಬಾಂಬ್ ಸ್ಫೋಟಗಳಲ್ಲಿ ಸರಬ್ಜಿತ್ ಆರೋಪಿ ಎಂದು ನ್ಯಾಯಾಲಯ ತೀರ್ಪು ನೀಡಿತ್ತು. ಬಾಂಬ್ ಸ್ಫೋಟಗಳಲ್ಲಿ 14 ಜನರು ಸಾವನ್ನಪ್ಪಿದ್ದರು.

ಸರಕಾರದ ಪರವಾಗಿ ಡೆಪ್ಯುಟಿ ಅಟಾರ್ನಿ ಜನರಲ್‌ ನಾಸೀಮ್‌ ಕಾಶ್ಮೀರಿ ಅವರು ಲಾಹೋರ್‌ ಹೈಕೋರ್ಟ್‌ ಮುಖ್ಯ ನ್ಯಾಯಾಧೀಶ ಇಜಾಜ್‌ ಚೌಧರಿ ಅವರಿಗೆ ಅರ್ಜಿ ಸಲ್ಲಿಸಿದ್ದರು.

ಅಧ್ಯಕ್ಷ ಆಸಿಫ್‌ ಅಲಿ ಜರ್ದಾರಿ ಅವರು ಸರಬ್ಜಿತ್‌ ಸಿಂಗ್‌ ಅವರಿಗೆ ಕ್ಷಮಾದಾನ ನೀಡುವುದಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಕೋರಿ ವಕೀಲ ಇಯಾಮುದ್ದೀನ್‌ ಘಾಜಿ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಧೀಶರು ವಜಾಗೊಳಿಸಿದ್ದರು.

ಸರಬ್ಜಿತ್‌ಗೆ ಮರಣದಂಡನೆ ಶಿಕ್ಷೆ ನೀಡಿ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶವನ್ನು ಲಾಹೋರ್‌ ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ ಸಹ ಎತ್ತಿ ಹಿಡಿದಿತ್ತು ಎಂದು ಘಾಜಿ ವಾದಿಸಿದ್ದರು.

ಮಾಜಿ ಅಧ್ಯಕ್ಷ ಜನರಲ್‌ ಪರ್ವೇಜ್‌ ಮುಷರ್ರಫ್ ಅವರು ಸಹಾ ಸರಬ್ಜಿತ್‌ ಸಿಂಗ್‌ ಅವರ ಕ್ಷಮಾ‌ದಾನ ಅರ್ಜಿಯನ್ನು ತಿರಸ್ಕರಿಸಿದ್ದರು ಎಂಬ ಅಂಶವನ್ನೂ ಘಾಜಿ ಪ್ರಸ್ತಾಪಿಸಿದ್ದರು.

ಸರಬ್ಜಿತ್‌ ಅವರ ಆರೋಗ್ಯ ತಪಾಸಣೆ ನಡೆಸಬೇಕು ಹಾಗೂ ಚಿಕಿತ್ಸೆ ನೀಡಬೇಕು ಎಂದು ಅವರ ವಕೀಲ ಸಲ್ಲಿಸಿದ್ದ ಅರ್ಜಿಯನ್ನೂ ಸಹ ಮುಖ್ಯ ನ್ಯಾಯಮೂರ್ತಿ ವಜಾಗೊಳಿಸಿದ್ದಾರೆ.

ಸರಬ್ಜಿತ್‌ ಅವರಿಗೆ ಚಿಕಿತ್ಸೆ ಅಗತ್ಯವಿದೆ ಎಂದು ಅವರ ಪರ ವಕೀಲ ಅವೀಸ್‌ ಶೇಕ್‌ ಅವರು ಸಲ್ಲಿಸಿದ್ದ ವಾದವನ್ನು ತಿರಸ್ಕರಿಸಲಾಗಿದೆ. ಸರಬ್ಜಿತ್‌ ಸಿಂಗ್‌ ಅವರು ಆರೋಗ್ಯವಾಗಿದ್ದು, ಅವರಿಗೆ ಕೋಟ್‌ ಲಾಕ್‌ಪಟ್‌ ಜೈಲಿನಲ್ಲಿ ಆರೋಗ್ಯ ತಪಾಸಣೆ ನಡೆಸುವುದು ಅಗತ್ಯವಿಲ್ಲ ಎಂದು ಪಂಜಾಬ್‌ ಗೃಹ ಸಚಿವಾಲಯ ವರದಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಕೋರ್ಟ್‌ ಸರಬ್ಜಿತ್‌ ಪರ ವಕೀಲ ರ ಅರ್ಜಿ ತಿರಸ್ಕರಿಸಿದೆ.

ಸರಬ್ಜಿತ್‌ ಅವರಿಗೆ ಜೈಲಿನಲ್ಲಿ ಯೋಗಾಸನ ಕಲಿಸಬೇಕು ಎಂದು ಅವರ ಪರ ವಕೀಲ ಶೇಕ್‌ ಅವರು ಮಂಡಿಸಿರುವ ವಾದವು ಕಾರ್ಯರೂಪಕ್ಕೆ ಬರುವ ಸಾಧ್ಯವಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿತ್ತು.

ವಕೀಲ ಶೇಖ್‌ ಅವರು ತಮ್ಮ ಕಕ್ಷಿದಾರ ಸರಬ್ಜಿತ್‌ ಸಿಂಗ್‌ ಅವರನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಸರಬ್ಜಿತ್ ಸಿಂಗ್, ಕ್ಷಮಾದಾನ ಅರ್ಜಿ, ಆಸಿಫ್ ಅಲಿ ಜರ್ದಾರಿ ಪಾಕಿಸ್ತಾನ, ಕನ್ನಡ ಸುದ್ದಿ, ಕರ್ನಾಟಕ ಸುದ್ದಿ, ರಾಷ್ಟ್ರೀಯ ಸುದ್ದಿ, ಬ್ರೇಕಿಂಗ್ ನ್ಯೂಸ್, ತಾಜಾ ಕನ್ನಡ ಸುದ್ದಿ, ರಾಜಕೀಯ, ಬೆಂಗಳೂರು ಸುದ್ದಿ, ಫಾರಿನ್ ಸುದ್ದಿ, ಅಂತಾರಾಷ್ಟ್ರೀಯ, ಅಂತರರಾಷ್ಟ್ರೀಯ, ಅಂತರ್ರಾಷ್ಟ್ರೀಯ ಸುದ್ದಿ