ವಾಷಿಂಗ್ಟನ್, ಬುಧವಾರ, 21 ಸೆಪ್ಟೆಂಬರ್ 2011( 19:50 IST )
ಅಫ್ಘಾನಿಸ್ತಾನದಲ್ಲಿ ಉಗ್ರರ ನಿಗ್ರಹಕ್ಕಾಗಿ ಡ್ರೋನ್ (ಮಾನವ ರಹಿತ ಯುದ್ಧ ವಿಮಾನ) ಯಶಸ್ವಿ ಪ್ರಯೋಗದಿಂದ ಉತ್ತೇಜಿತವಾಗಿರುವ ಅಮೆರಿಕ ಹಿಂದೂ ಮಹಾಸಾಗರ, ಆಫ್ರಿಕಾ ಹಾಗೂ ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲೂ ಅಲ್ ಖೈದಾ ಉಗ್ರಗಾಮಿ ಸಂಘಟನೆಯ ವಿರುದ್ಧ ಗುಪ್ತ ರಹಸ್ಯ ಕಾರ್ಯಾಚರಣೆ ನಡೆಸಲು ಮುಂದಾಗಿದೆ.
ಅಲ್ ಖೈದಾ ಉಗ್ರಗಾಮಿಗಳು ದಕ್ಷಿಣ ಏಷ್ಯಾದಿಂದ ತಮ್ಮ ನೆಲೆಯನ್ನು ಬದಲಾಯಿಸಬಹುದು ಎಂದು ಅಮೆರಿಕದ ರಕ್ಷಣಾ ಇಲಾಖೆ ಕಾರ್ಯದರ್ಶಿ ಲಿಯೋನ್ ಪೆನೆಟ್ಟಾ ಹಾಗೂ ಸೇನೆಯ ಹಿರಿಯ ಅಧಿಕಾರಿಗಳು ಶಂಕಿಸಿದ್ದರಿಂದಾಗಿ ಅಮೆರಿಕ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.
ಮಾನವ ರಹಿತ ಯುದ್ಧ ವಿಮಾನ ಡ್ರೋನ್, ಅತ್ಯಾಧುನಿಕ ಕ್ಷಿಪಣಿಗಳು ಹಾಗೂ ಉಪಗ್ರಹ ನಿಯಂತ್ರಿತ ಬಾಂಬ್‌ಗಳನ್ನು ಈಗಾಗಲೇ ಹಿಂದೂ ಮಹಾಸಾಗರದಲ್ಲಿರುವ ಸೆಚೆಲ್ಲರರ್ಸ್, ಇಥಿಯೋಪಿಯಾದಿಂದ ಯೆಮನ್ ಮತ್ತು ಸೋಮಾಲಿಯಾವನ್ನು ಸುತ್ತುವರಿದಿರುವ ಪ್ರದೇಶದಲ್ಲಿ ಡ್ರೋನ್ ನೆಲೆಯನ್ನು ಸ್ಥಾಪಿಸಲಾಗುತ್ತದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ಪಾಕಿಸ್ತಾನದಲ್ಲಿ ಅಲ್‌ಖೈದಾ ಉಗ್ರಗಾಮಿ ಸಂಘಟನೆ ನಾಯಕತ್ವ ಬಲಹೀನವಾಗಿರುವುದು ಹಾಗೂ ಅಲ್ ಖೈದಾ ಉಗ್ರರು ಯೆಮನ್ ಮತ್ತು ಸೋಮಾಲಿಯಾದಲ್ಲಿ ನೆಲೆಯೂರುತ್ತಿರುವುದನ್ನು ಮನಗಂಡು ಅಮೆರಿಕ ಅಧಿಕಾರಿಗಳು ಭಯೋತ್ಪಾದನಾ ವಿರೋಧಿ ದಾಳಿಯನ್ನ ಈ ಪ್ರದೇಶಗಳಿಗೂ ವಿಸ್ತರಿಸಿದ್ದಾರೆ ಎನ್ನಲಾಗುತ್ತಿದೆ.