ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಮೆರಿಕ ಗರಂ; ಪಾಕ್ ಐಎಸ್ಐ ಮುಖ್ಯಸ್ಥ ಪಾಶಾ ದೌಡು (ISI | Lt Gen Ahmed Shuja Pasha | David Petraeus | CIA)
ಐಎಸ್‌ಐ ಮುಖ್ಯಸ್ಥ ಲೆಫ್ಟಿನೆಂಟ್‌ ಜನರಲ್‌ ಅಹಮದ್‌ ಶುಜಾ ಪಾಶಾ ಅವರು ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ಮುಖಂಡ ಜನರಲ್‌ ಡೇವಿಡ್‌ ಪೀಟರ್ಸ್‌ ಅವರನ್ನು ಅಮರಿಕದಲ್ಲಿ ಭೇಟಿ ಮಾಡಿದರು. ಕಾಬೂಲ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಮೇಲೆ ಉಗ್ರಗಾಮಿ ಸಂಘಟನೆ ಹಕ್ಕಾನಿ ನೆಟ್‌ವರ್ಕ್‌ ದಾಳಿ ನಡೆಸಿದ್ದರ ಹಿಂದೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಕೈವಾಡವಿದೆ ಎಂದು ಅಮೆರಿಕ ಆಪಾದಿಸಿದ್ದ ಹಿನ್ನೆಲೆಯಲ್ಲಿ ಉಂಟಾಗಿದ್ದ ತೀವ್ರ ಒತ್ತಡವೇ ಪಾಶಾ ಅವರು ಸಿಐಎ ಮುಖಂಡರನ್ನು ಭೇಟಿಯಾಗಲು ಕಾರಣವಾಗಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಪಾಶಾ ಹಾಗೂ ಡೇವಿಡ್‌ ಅವರ ಈ ಭೇಟಿಯ ಕುರಿತ ಮಾಹಿತಿ ಬಹಿರಂಗಗೊಂಡಿರಲಿಲ್ಲ ಎಂದು ವಾಷಿಂಗ್ಟನ್‌ ಪೋಸ್ಟ್‌ ದೈನಿಕ ವರದಿ ಮಾಡಿದೆ.

ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್‌ ಅಶ್ಪಾಕ್‌ ಪರ್ವೇಜ್‌ ಕಯಾನಿ ಅವರನ್ನು ಅಮೆರಿಕ ಜಂಟಿ ಸೇನಾ ಪಡೆಯ ಮುಖ್ಯಸ್ಥ ಮೈಕ್‌ ಮುಲನ್‌ ಅವರು ಕಳೆದ ವಾರ ಮ್ಯಾಂಡ್ರಿಡ್‌ನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಈ ಸಂದರ್ಭದಲ್ಲಿ ಪಾಕಿಸ್ತಾನ ಸರಕಾರವು ಹಕ್ಕಾನಿ ಉಗ್ರರನ್ನು ಮಟ್ಟ ಹಾಕುವಂತೆ ಅಮೆರಿಕ ಒತ್ತಡ ಹೇರಿತ್ತು.

ಮುಲಾನ್‌ ಹಾಗೂ ಕಯಾನಿ ಅವರ ನಡುವೆ ನಡೆದ ಮಾತುಕತೆ ಸಂದರ್ಭದಲ್ಲಿ ಪಾಕ್‌ ಗುಪ್ತಚರ ಸಂಸ್ಥೆ ಐಎಸ್‌ಐ ಹಾಗೂ ಹಕ್ಕಾನಿ ನೆಟ್‌ವರ್ಕ್‌ ನಡುವೆ ಇರುವ ಸಂಬಂಧಗಳ ಬಗ್ಗೆ ಪ್ರಮುಖವಾಗಿ ಚರ್ಚಿಸಲಾಯಿತು ಎಂದು ಮುಲನ್‌ ಅವರ ಹೇಳಿಕೆಯನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.

ಏತನ್ಮಧ್ಯೆ ಐಎಸ್‌ಐ ಮುಖ್ಯಸ್ಥ ಪಾಶಾ ಅವರು ಸಿಐಎ ಮುಖ್ಯಸ್ಥ ಪೀಟರ್ಸ್‌ ಹಾಗೂ ಮುಖಂಡರೊಡನೆ ಹಾಗೂ ವೈಟ್‌ ಹೌಸ್‌ನ ಹಿರಿಯ ಅಧಿಕಾರಿಗಳನ್ನು ಪ್ರತ್ಯೇಕವಾಗಿ ಅಮೆರಿಕದಲ್ಲಿರುವ ಪಾಕ್‌ ರಾಯಭಾರಿ ಹುಸೇನ್‌ ಹಕ್ಕಾನಿ ಅವರ ನಿವಾಸದಲ್ಲಿ ಭೇಟಿಯಾಗಿದ್ದಾರೆ ಎಂದು ತಿಳಿಸಿದೆ.


ಇವನ್ನೂ ಓದಿ
ಇದನ್ನು ಸಹ ಶೋಧಿಸು: ಐಎಸ್ಐ, ಅಹಮದ್ ಶುಜಾ ಪಾಶಾ, ಡೇವಿಡ್ ಪೀಟರ್ಸ್, ಕನ್ನಡ ಸುದ್ದಿ, ಕರ್ನಾಟಕ ಸುದ್ದಿ, ರಾಷ್ಟ್ರೀಯ ಸುದ್ದಿ, ಬ್ರೇಕಿಂಗ್ ನ್ಯೂಸ್, ತಾಜಾ ಕನ್ನಡ ಸುದ್ದಿ, ರಾಜಕೀಯ, ಬೆಂಗಳೂರು ಸುದ್ದಿ, ಫಾರಿನ್ ಸುದ್ದಿ, ಅಂತಾರಾಷ್ಟ್ರೀಯ, ಅಂತರರಾಷ್ಟ್ರೀಯ, ಅಂತರ್ರಾಷ್ಟ್ರೀಯ ಸುದ್ದಿ