ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ನಾಯಿ ದಾಳಿ: ವಿರೂಪಗೊಂಡಿದ್ದ ಮಹಿಳೆಗೆ ಜಿಗಣೆ ಚಿಕಿತ್ಸೆ (Leech | Face reconstruction | Skane hospital | Latest News in Kannada)
Leach
WD
ರಕ್ತ ಹೀರುವ ಜಿಗಣೆಯನ್ನು ಎಲ್ಲರೂ ನಿಂದಿಸುವುದು ಸಹಜ. ಆದರೆ ಈ ಜಿಗಣೆಗಳೇ ವಿರೂಪಗೊಂಡಿದ್ದ ಮಹಿಳೆಯೊಬ್ಬಳ ಮುಖದ ಶಸ್ತ್ರ ಚಿಕಿತ್ಸೆಯಲ್ಲಿ ನೆರವಾಗಿದೆ. ನಾಯಿ ಕಡಿತದಿಂದ ವಿರೂಪಗೊಂಡಿದ್ದ ಮಹಿಳೆಯ ಮುಖಕ್ಕೆ ನೂರಾರು ಜಿಗಣೆಗಳನ್ನು ಬಳಸಿಕೊಂಡು ಚಿಕಿತ್ಸೆ ನೀಡಿದ ಸ್ವೀಡನ್‌ ವೈದ್ಯರು ಮುಖವನ್ನು ಮೊದಲಿನ ಸ್ಥಿತಿಗೆ ತಂದಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ತನ್ನದೇ ನಾಯಿಯಿಂದ ಕಚ್ಚಿಸಿಕೊಂಡಿದ್ದ ಮಹಿಳೆಯ ಮೇಲ್ದುಟಿಯಿಂದ ಕಣ್ಣಿನ ರೆಪ್ಪೆಯವರೆಗೂ ಮಾಂಸ ಕಿತ್ತು ಬಂದಿತ್ತು. ಆಕೆ ಚಿಕಿತ್ಸೆಗಾಗಿ ಕೂಡಲೇ ಆಸ್ಪತ್ರೆಗೆ ಧಾವಿಸಿದಳು. ಕಿತ್ತು ಬಂದಿದ್ದ ಚರ್ಮವನ್ನು ಆಕೆಯ ಸಂಬಂಧಿಕರು ಶೀಥಲೀಕರಿಸಿಟ್ಟಿದ್ದರು.

ಕಿತ್ತು ಬಂದಿದ್ದ ಮಾಂಸದೊಂದಿಗೆ ಮಾಲ್ಮೋದಲ್ಲಿರುವ ಸ್ಕಾನೇ ಯೂನಿವರ್ಸಿಟಿ ಹಾಸ್ಪೆಟಲ್‌ಗೆ ಧಾವಿಸಿದ ಮಹಿಳೆಯ ಸಂಬಂಧಿಕರು ವೈದರರಿಗೆ ನೀಡಿದ್ದಾರೆ. 358 ಜಿಗಣೆಗಳ ಸಹಾಯದಿಂದ ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರು ಮಹಿಳೆಯ ಮುಖವನ್ನು ಯಥಾಸ್ಥಿತಿಗೆ ತಂದಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಶಸ್ತ್ರ ಚಿಕಿತ್ಸಾ ತಜ್ಞ ಜೀನ್ಸ್‌ ಲಾರ್ಸನ್‌, ನಾಯಿ ಕಡಿತದಿಂದ ತೀವ್ರವಾಗಿ ಗಾಯಗೊಂಡಿದ್ದ ಮಹಿಳೆ ಮಾಲ್ಮೋ ಆಸ್ಪತ್ರೆಗೆ ಮಧ್ಯರಾತ್ರಿ ಆಗಮಿಸಿದಳು ಎಂದು ತಿಳಿಸಿದ್ದಾರೆ.

ಕೂಡಲೇ ಮಹಿಳೆಗೆ ಶಸ್ತ್ರ ಚಿಕಿತ್ಸೆ ನಡೆಸಲು ಸಿದ್ಧವಾದ ವೈದ್ಯ ಲಾರ್ಸನ್‌ ಅವರು ಇನ್ನೊಬ್ಬ ತಜ್ಞ ಸ್ಟಿನಾ ಕ್ಲಾಸಿನ್‌ ಅವರ ನೆರವು ಪಡೆದರು.

ದೇಹದಿಂದ ಕಿತ್ತು ಬಂದಿದ್ದ ಮಾಂಸದ ಭಾಗದಿಂದ ರಕ್ತವನ್ನು ಹೊರತೆಗೆಯುವುದು ಅಗತ್ಯವಾಗಿತ್ತು ವೈದ್ಯ ಕ್ಲಾಸನ್‌ ಹೇಳಿದ್ದಾರೆ.

ಗಾಯಗೊಂಡಿದ್ದ ಮಹಿಳೆಗೆ ಶಸ್ತ್ರ ಚಿಕಿತ್ಸೆ ನಡೆಸಿ ಮೂಗು, ಮೇಲ್ದುಟಿ ಹಾಗೂ ಕೆನ್ನೆಗಳ ಶಸ್ತ್ರ ಚಿಕಿತ್ಸೆ ನಡೆಸಲು ವೈದ್ಯರು 15 ಗಂಟೆಗಳ ಕಾಲ ಶ್ರಮಿಸಿದರು.

ಶಸ್ತ್ರ ಚಿಕಿತ್ಸೆ ಸಂದರ್ಭದಲ್ಲಿ ಗಾಯಗೊಂಡಿರುವ ಚರ್ಮಕ್ಕೆ ರಕ್ತ ಪೂರೈಕೆಯಾಗುವಂತೆ ಮಾಡುವ ನಿಟ್ಟಿನಲ್ಲಿ ವೈದ್ಯರು ಜಿಗಣೆಗಳನ್ನು ಬಳಸಿಕೊಂಡರು.

ರೋಗಿಯ ಮುಖದಲ್ಲಿದ್ದ ರಕ್ತವನ್ನು ಹೀರಿದ ಜಿಗಣೆಗಳು ಹೀರುವ ಮೂಲಕ ಮರು ರಕ್ತ ಸಂಚಾರಕ್ಕೆ ಸಹಕರಿಸಿದವು ಎಂದು ವೈದ್ಯರು ತಿಳಿಸಿದ್ದಾರೆ.

ಆಸ್ಪತ್ರೆಗೆ ಗ್ರೋವರ್‌ ಸರಬರಾಜು ಮಾಡಿದ್ದ ಜಿಗಣೆಗಳು ಓಡಿ ಹೋಗಿದ್ದರಿಂದ ಇಂಗ್ಲೆಂಡ್‌ನಿಂದ ಇನ್ನಷ್ಟು ಜಿಗಣೆಗಳನ್ನು ತರಿಸಲಾಗುವುದು ಎಂದು ಶಸ್ತ್ರ ಚಿಕಿತ್ಸಾ ತಜ್ಞ ಕ್ಲಾಸಿನ್‌ ತಿಳಿಸಿದ್ದಾರೆ.

ಮಹಿಳೆಗೆ ನಡೆಸಿದ್ದ ಶಸ್ತ್ರಚಿಕಿತ್ಸೆ ತಶಸ್ವಿಯಾಗಿದೆ ಆದರೆ ಮುಂದಿನ ದಿನಗಳಲ್ಲಿ ಮಹಿಳೆಯ ಮುಖಕ್ಕೆ ಸುರೂಪ ಚಿಕಿತ್ಸೆ ನೀಡುವ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಶಸ್ತ್ರ ಚಿಕಿತ್ಸೆ ಫಲಕಾರಿಯಾಗಿದ್ದು, ರೋಗಿ ಉಸಿರಾಟ ನಡೆಸುತ್ತಿದ್ದಾರೆ. ಆಹಾರ ಸೇವಿಸಲು ಹಾಗೂ ಮಾತನಾಡಲು ಶಕ್ತರಾಗಿದ್ದಾರೆ ಎಂದು ವೈದ್ಯ ಲಾರ್ಸನ್‌ ತಿಳಿಸಿದ್ದಾರೆ.

ವಿಶ್ವದಾದ್ಯಂತ ನಡೆಯುವ ಈ ರೀತಿಯ ಶಸ್ತ್ರ ಚಿಕಿತ್ಸೆಗೆ ಜಿಗಣೆಗಳನ್ನು ಬಳಸಲಾಗುತ್ತದೆ. ಆದರೆ ಉತ್ತರ ಯೂರೋಪ್‌ನಲ್ಲಿ ಇದೇ ಮೊದಲ ಬಾರಿಗೆ ಜಿಗಣೆಗಳನ್ನು ಬಳಸಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಜಿಗಣೆ ಚಿಕಿತ್ಸೆ, ಮುಖದ ಶಸ್ತ್ರ ಚಿಕಿತ್ಸೆ, ಕನ್ನಡ ಸುದ್ದಿ, ಕರ್ನಾಟಕ ಸುದ್ದಿ, ರಾಷ್ಟ್ರೀಯ ಸುದ್ದಿ, ಬ್ರೇಕಿಂಗ್ ನ್ಯೂಸ್, ತಾಜಾ ಕನ್ನಡ ಸುದ್ದಿ, ರಾಜಕೀಯ, ಬೆಂಗಳೂರು ಸುದ್ದಿ, ಫಾರಿನ್ ಸುದ್ದಿ, ಅಂತಾರಾಷ್ಟ್ರೀಯ, ಅಂತರರಾಷ್ಟ್ರೀಯ, ಅಂತರ್ರಾಷ್ಟ್ರೀಯ ಸುದ್ದಿ