ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ನೀವು ಒಳ್ಳೆ ಮಿತ್ರ ರಾಷ್ಟ್ರ ಕಳೆದುಕೊಳ್ಳುತ್ತೀರಿ!: ಅಮೆರಿಕಕ್ಕೆ ಪಾಕ್
(Pakistan | Hina Rabbani Khar | Admiral Mike Mullen | Haqqani Network)
ನೀವು ಒಳ್ಳೆ ಮಿತ್ರ ರಾಷ್ಟ್ರ ಕಳೆದುಕೊಳ್ಳುತ್ತೀರಿ!: ಅಮೆರಿಕಕ್ಕೆ ಪಾಕ್
ಇಸ್ಲಾಮಾಬಾದ್, ಶುಕ್ರವಾರ, 23 ಸೆಪ್ಟೆಂಬರ್ 2011( 12:06 IST )
ಭಯೋತ್ಪಾದನೆಯ ವಿರುದ್ಧ ಪಾಕಿಸ್ತಾನ ನಡೆಸುತ್ತಿರುವ ಹೋರಾಟದ ಬಗ್ಗೆ ಅಮೆರಿಕವು ಬಹಿರಂಗವಾಗಿ ಟೀಕಿಸುವುದನ್ನು ನಿಲ್ಲಿಸದಿದ್ದರೆ ಒಳ್ಳೆಯ ಮಿತ್ರ ರಾಷ್ಟ್ರವನ್ನು ಕಳೆದುಕೊಳ್ಳುತ್ತೀರಿ ಎಂದು ಎಚ್ಚರಿಸಿರುವುದಾಗಿ ಪಾಕ್ ವಿದೇಶಾಂಗ ಸಚಿವೆ ಹೀನಾ ರಬ್ಬಾನಿ ಖಾರ್ ಹೇಳಿದ್ದಾರೆ.
ಈ ಕುರಿತು ಜಿಯೋ ಟಿವಿ ಚಾನಲ್‌ಗೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ ಹೀನಾ ರಬ್ಬಾನಿ ಖಾರ್ ನಿಮಗೆ (ಅಮೆರಿಕ) ಪಾಕಿಸ್ತಾನದ ಅಥವಾ ಪಾಕ್ ನಾಗರಿಕರೊಂದಿಗಿನ ಬಾಂಧವ್ಯವನ್ನು ಅಗಲಿಸುವ ಸಾಮರ್ಥ್ಯವಿಲ್ಲ. ನೀವು ಈ ರೀತಿ ಮಾಡಲು ನಿರ್ಧರಿಸಿದರೆ ಅದು ನಿಮ್ಮ ಹೊಣೆಯಾಗಿರುತ್ತದೆ ಎಂದು ಹೇಳಿದ್ದಾರೆ.
ಅಮೆರಿಕ ಸೇನಾಪಡೆಗಳ ಜಂಟಿ ಮುಖ್ಯಸ್ಥ ಅಡ್ಮಿರಲ್ ಮೈಕ್ ಮುಲನ್ ಅವರು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಪರವಾಗಿ ವಿಧ್ವಂಸಕ ಕೃತ್ಯ ನಡೆಸುತ್ತಿರುವ ಹಕ್ಕಾನಿ ನೆಟ್‌ವರ್ಕ್ ಭಯೋತ್ಪಾದಕ ಸಂಘಟನೆಯೊಂದಿಗೆ ನಂಟು ಹೊಂದಿದೆ ಎಂದು ಆಪಾದನೆಯ ಹಿನ್ನೆಲೆಯಲ್ಲಿ ಹೀನಾ ರಬ್ಬಾನಿ ಖಾರ್ ಅವರು ಈ ಹೇಳಿಕೆ ನೀಡಿದ್ದಾರೆ.