ಲಿಬಿಯಾದ ಪದಚ್ಯುತ ಅಧ್ಯಕ್ಷ ಮುಅಮ್ಮರ್ ಗಡಾಫಿಯನ್ನು ಸೆರೆಹಿಡಿಯಲು ಪಣ ತೊಟ್ಟಿರುವ ದೇಶದ ನೂತನ ಆಡಳಿತದ ರಕ್ಷಣಾ ಸಿಬ್ಬಂದಿ ಮುಅಮ್ಮರ್ ಗಡಾಫಿ ಅವರ ತವರೂರಾದ ಸಿರ್ಟೆಯನ್ನು ಪ್ರವೇಶಿಸಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿದೆ.
ಮಿಲಿಟರಿ ಟ್ರಕ್‌ಗಳು, ಭಾರೀ ಶಸ್ತ್ರಾಸ್ತ್ರಗಳನ್ನೊಳಗೊಂಡ ಟ್ರಕ್‌ಗಳೊಂದಿಗೆ ವಿಜಯದ ಸಂಕೇತದೊಂದಿಗೆ ಅಲ್ಲಾಹು ಅಕ್ಬರ್ ಘೋಷಣೆ ಕೂಗುತ್ತಾ ಲಿಬಿಯಾ ಸರಕಾರದ ಸೇನಾ ಪಡೆ ಯೋಧರು ಸಿರ್ಟೆ ನಗರದೊಳಗೆ ಪ್ರವೇಶಿಸಿದರು.
ನಾವು ಸಿರ್ಟೆ ನಗರದೊಳಗೆ ತಪಾಸಣಾ ಕೇಂದ್ರಗಳ ಮೇಲೆ ಮುಅಮ್ಮರ್ ಗಡಾಫಿ ಅವರ ಪಡೆಗಳು ಶೆಲ್ ದಾಳಿ ನಡೆಸಿದ್ದರಿಂದ ಸಾವು ನೋವು ಸಂಭವಿಸಿದೆ ಎಂದು ಪೂರ್ವ ಪ್ರವೇಶದ್ವಾರದಲ್ಲಿರುವ ಯೋಧನೊಬ್ಬ ತಿಳಿಸಿದ್ದಾನೆ.