ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 1970ರ ತಪ್ಪುಗಳೇ ಪಾಕ್‌ಗೆ ಮಾರಕವಾಗಿದೆ: ಟೋನಿ ಬ್ಲೇರ್ (Pakistan | Mixing religion with politics | Tony Blair | Osama bin laden)
ಪಾಕಿಸ್ತಾನವು 1970ರ ದಶಕದಲ್ಲಿ ರಾಜಕಾರಣದೊಂದಿಗೆ ಧರ್ಮವನ್ನು ಬೆರೆಸುವ ಮೂಲಕ ಮಾಡಿರುವ ತಪ್ಪಿಗೆ ಈಗ ಭಾರೀ ಬೆಲೆ ತೆರುತ್ತಿದೆ ಎಂದು ಬ್ರಿಟನ್‌ ಮಾಜಿ ಪ್ರಧಾನಿ ಟೋನಿ ಬ್ಲೇರ್‌ ಹೇಳಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಪಾಕಿಸ್ತಾನವು 1970ರ ದಶಕದಲ್ಲಿ ಧರ್ಮದೊಂದಿಗೆ ರಾಜಕಾರಣವನ್ನು ಬೆರೆಸಿದ್ದಲ್ಲದೇ ಧಾರ್ಮಿಕ ಶಾಲೆಗಳನ್ನು ಅಭಿವೃದ್ಧಿ ಪಡಿಸಿರುವುದು ಸಹಾ ಭಯೋತ್ಪಾದನೆ ಹೆಚ್ಚಲು ಕಾರಣವಾಗಿದೆ ಎಂಬುದು ನನ್ನ ಅನಿಸಿಕೆಯಾಗಿದೆ ಎಂದು ಸಿಎನ್‌ಎನ್‌ ಐಬಿಎನ್‌ ಸಂಸ್ಥೆಗೆ ಬ್ಲೇರ್ ತಿಳಿಸಿದ್ದಾರೆ.

ಅಘ್ಘಾನಿಸ್ತಾನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಕ್ಕಾನಿ ನೆಟ್‌ವರ್ಕ್‌ ಜೊತೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಸಂಬಂಧ ಹೊಂದಿರುವ ಕುರಿತು ಕೇಳಿರುವ ಪ್ರಶ್ನೆಗೆ ಬ್ಲೇರ್ ಈ ರೀತಿ ತಿಳಿಸಿದ್ದಾರೆ.

ಅಮೆರಿಕ ಕಮಾಂಡೋ ಪಡೆಗಳು ಅಲ್‌ಖೈದಾ ಉಗ್ರಗಾಮಿ ಸಂಘಟನೆಯ ಮುಖಂಡ ಒಸಾಮಾ ಬಿನ್‌ ಲಾಡೆನ್‌ನನ್ನು ಹತ್ಯೆ ಮಾಡಿದ ನಂತರ ಹಕ್ಕಾನಿ ನೆಟ್‌ ವರ್ಕ್‌ ಮೇಲೂ ದಾಳಿ ನಡೆಸಲಿದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬ್ಲೇರ್‌ ಈ ಕುರಿತು ಅಮೆರಿಕವೇ ನಿರ್ಧರಿಸಲಿದೆ ಎಂದು ತಿಳಿಸಿದ್ದಾರೆ.

ಈ ಭಯೋತ್ಪಾದಕ ಸಂಘಟನೆಗಳಿಂದ ಆಗುತ್ತಿರುವ ತೊಂದರೆಯ ಕುರಿತು ಭಾರತ ಹಾಗೂ ಪಾಕಿಸ್ತಾನ ರಾಷ್ಟ್ರಗಳು ತಮ್ಮ ಹಿತ ಕಾಪಾಡಲು ಬಳಸಿಕೊಳ್ಳುತ್ತಿವೆ ಎಂದು ಬ್ಲೇರ್‌ ಆಪಾದಿಸಿದ್ದಾರೆ. ಯಾವುದೇ ರಾಷ್ಟ್ರಗಳು ದುಷ್ಕೃತ್ಯ ನಡೆಸುವಂತಹಾ ಭಯೋತ್ಪಾದಕ ಸಂಘಟನೆಗಳನ್ನು ಬೆಂಬಲಿಸುವುದು ಸರಿಯಲ್ಲ ಎಂದು ಬ್ಲೇರ್‌ ಅಭಿಪ್ರಾಯಪಟ್ಟಿದ್ದಾರೆ.

ಐಎಸ್‌ಐ ಇಂತಹಾ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದ್ದರೆ ಇದು ಅಮೆರಿಕ, ಬ್ರಿಟನ್‌, ಅಫ್ಘಾನಿಸ್ತಾನ ಅಥವಾ ಭಾರತದ ಮೇಲೆ ಅಷ್ಟೇ ಅಲ್ಲ ಪಾಕಿಸ್ತಾನದ ವಾತಾವರಣದ ಮೇಲೂ ದುಷ್ಪರಿಣಾಮ ಬೀರುತ್ತದೆ ಎಂದು ಬ್ಲೇರ್‌ ಅಭಿಪ್ರಾಯಪಟ್ಟಿದ್ದಾರೆ.

ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಲಷ್ಕರ್‌ ಎ ತೊಯ್ಬಾ, ಹಕ್ಕಾನಿ ನೆಟ್‌ವರ್ಕ್‌ ಮೊದಲಾದ ಉಗ್ರಗಾಮಿ ಸಂಘಟನೆಗಳೊಂದಿಗೆ ನಂಟು ಹೊಂದಿದ್ದರೆ ಅದು ದೊಡ್ಡ ಪ್ರಮಾದ ಎಂದು ಬ್ಲೇರ್‌ ತಿಳಿಸಿದ್ದಾರೆ.

ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಪಾಲ್ಗೊಂಡಿರುವ ಪಾಕಿಸ್ತಾನೀಯರಿಗೆ ಮುಕ್ತ ಮನಸ್ಸು ಅಗತ್ಯವಿದೆ ಎಂದು ಅವರು ತಿಳಿಸಿದರು.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಪಾಕಿಸ್ತಾನ, ಧರ್ಮದೊಂದಿಗೆ ರಾಜಕಾರಣ, ಟೋನಿ ಬ್ಲೇರ್, ಐಎಸ್ಐ ಬ್ರೇಕಿಂಗ್ ನ್ಯೂಸ್, ತಾಜಾ ಕನ್ನಡ ಸುದ್ದಿ, ಫಾರಿನ್ ಸುದ್ದಿ, ಅಂತಾರಾಷ್ಟ್ರೀಯ, ಅಂತರರಾಷ್ಟ್ರೀಯ, ಅಂತರ್ರಾಷ್ಟ್ರೀಯ ಸುದ್ದಿ