ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ತೀರ್ಪುಗಳ ಗದ್ದಲ:ಮಸುಕಾದ ಚುನಾವಣೆ
ತೀರ್ಪುಗಳ ಗದ್ದಲ...

1993ರ ಮುಂಬೈ ಸರಣಿ ಸ್ಫೋಟದಲ್ಲಿ ಜನಪ್ರಿಯ ನಟ ಸಂಜಯ್‌ದತ್‌ಗೆ ಟಾಡಾ ನ್ಯಾಯಾಲಯ ಆರು ವರ್ಷ ಕಠಿಣ ಸಜೆಗೆ ತೀರ್ಪಿತ್ತಿರುವುದು ಒಂದೆಡೆಯಾದರೆ, ಇತ್ತ ತಮಿಳುನಾಡಿನ ಕೊಯಮತ್ತೂರಿನಲ್ಲಿ 1998ರ ಸರಣಿ ಸ್ಫೋಟ ಕುರಿತಂತೆ 9 ವರ್ಷಕಾಲ ಜೈಲಲ್ಲಿ ಕಳೆದ ಕೇರಳದ ಪಿಡಿಪಿ ಸಂಘಟನೆಯ ನಾಯಕ ಅಬ್ದುಲ್ ನಾಸರ್ ಮದನಿಗೆ ಬಿಡುಗಡೆಯ ತೀರ್ಪಾಗಿರುವುದು ಇನ್ನೊಂದೆಡೆ ಮಹತ್ವ ಪಡೆದಿದೆ.

ಇದೇ ವೇಳೆ ಪಂಜಾಬ್ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಹಂತಕರಿಗೆ ಶಿಕ್ಷೆಯಾಗಿರುವುದು. ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಹತ್ಯೆಯಾದ ಬಳಿಕ ಸಂಭವಿಸಿದ ಸಿಖ್‌ ವಿರೋಧಿ ಗಲಭೆಯಲ್ಲಿ ನೊಂದವರಿಗೆ ಸರ್ಕಾರ ನೀಡಿದ ಪರಿಹಾರವನ್ನು ಗುಳುಂಕರಿಸಿದವರಿಗೆ ನೀಡಿರುವ ಕಠಿಣ ಶಿಕ್ಷೆ... ಇವುಗಳೆಲ್ಲಾ ಈ ವಾರದಲ್ಲಿ ನ್ಯಾಯಾಲಯಗಳು ಜನಮಾನಸದಲ್ಲಿ ವಿಜ್ರಂಭಿಸಲು ಕಾರಣ.

ಜನರ ಚರ್ಚೆಯ ವಿಷಯವೆಂದರೆ ನ್ಯಾಯಾಲಯ ಶಿಕ್ಷೆಗೆ ಅರ್ಹತೆ ಕಂಡಿರುವ ವ್ಯಕ್ತಿಗೆ ಜಾಮೀನು ಲಭಿಸುವಂತಾಯಿತು, ಆದರೆ ದೋಷಮುಕ್ತಿಯ ತೀರ್ಪಾದ ವ್ಯಕ್ತಿ 9 ವರ್ಷಕಾಲ ಜೈಲಲ್ಲಿ ಆಯುಷ್ಯ ಸವೆಸುವಂತಾಯಿತು ಇತ್ಯಾದಿಗಳು ನ್ಯಾಯಾಂಗ ವ್ಯವಸ್ಥೆಯಲ್ಲಿನ ವೈರುಧ್ಯದತ್ತ ಬೆಳಕು ಚೆಲ್ಲಿದಂತಾಗಿದೆ.

ಆದರೆ, ಟಾಡಾ ನ್ಯಾಯಾಲಯದ ದಿಟ್ಟ ಹೆಜ್ಜೆ ದೇಶಾದ್ಯಂತ ಶ್ಲಾಘನೆಗೆ ಪಾತ್ರವಾಗಿರುವುದಂತೂ ನಿಜ. ಒಟ್ಟು 100 ಮಂದಿ ಆರೋಪಿಗಳಲ್ಲಿ 11 ಮಂದಿಗೆ ಮರಣದಂಡನೆ ವಿಧಿಸಿದ ವಿಚಾರದಷ್ಟೇ ಸಾಮಾಜಿಕ ಸ್ಥಾನಮಾನ ಕಡೆಗಣಿಸಿ ಸಂಜಯ್‌ಗೆ ಶಿಕ್ಷೆ ವಿಧಿಸಿರುವುದು ನ್ಯಾಯಸ್ಥಾನಗಳ ಮಹತ್ವ ವೃದ್ಧಿಸಿವೆ. ಅದರಂತೆ ಮದನಿ ರಕ್ಷೆ, ಇತರರಿಗೆ ಶಿಕ್ಷೆಗೆ ನಿರ್ಧರಿಸಿದ ಪ್ರಕರಣ ಕೂಡ.

ಈ ಎಲ್ಲಾ ವಿಷಯಗಳಲ್ಲಿ ಇನ್ನೊಂದು ಮಹತ್ವದ ಕೊಂಡಿ ಎಂದರೆ ಮುಸ್ಲಿಂ ಭಯೊತ್ಪಾದಕರ ವಿಕಟಾಟ್ಟಹಾಸಕ್ಕೆ ಉದಾಹರಣೆಯೆಂಬಂತೆ ದೇಶದಲ್ಲಿ ಸಂಭವಿಸಿದ ಎರಡು ಸರಣಿ ಸ್ಫೋಟಗಳಿದೆ ಈ ದೇಶ ನೀಡಿದ ಕಾನೂನು ತೀರ್ಪುಗಳು, ಇನ್ನೊಂದೆಡೆ ಮುಸ್ಲೀಂ ಅಲ್ಪಸಂಖ್ಯಾತರಿಗಾಗಿ ಈ ದೇಶ ನೀಡುವ ಉನ್ನತ ಸ್ಥಾನಮಾನ( ಉಪರಾಷ್ಟ್ರಪತಿ)ದ ಗೌರವ ಎರಡೂ ಈ ವಾರದಲ್ಲೇ ಚರ್ಚಿಸಬೇಕಾಗಿ ಬರುತ್ತಿರುವುದು ಗಮನಾರ್ಹ ಅಂಶ.

ವಿಷ್ಣು ಭಾರದ್ವಾಜ್
1| 2
ಮತ್ತಷ್ಟು
ಮುಂಬೈಮಳೆ: ಜನಜೀವನ ಅಸ್ತವ್ಯಸ್ತ
ಸ್ಫೋಟ:84 ಮಂದಿಯಿಂದ ಜಾಮೀನು ಅರ್ಜಿ
ಜೆಸ್ಸಿಕಾಪ್ರಕರಣ: ಕಲಾಪ ಸ್ಥಗಿತ
ಗ್ಲಾಸ್ಗೊಸ್ಫೋಟ ಆರೋಪಿ ಕಫೀಲ್ ಸಾವು
ಸಂಜಯ್‌ದತ್‌ ಯರವಾಡ ಜೈಲಿಗೆ
ಪ್ರಿಯಾಂಕಾ ಚೋಪ್ರ ದೋಷಮುಕ್ತಿ