ಸ್ಲಂ ಡಾಗ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿರುವ ಎ.ಆರ್.ರೆಹಮಾನ್ ಅವರಿಗೆ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಒಲಿದಿದ್ದು, ಈ ಪ್ರಶಸ್ತಿ ಗೆದ್ದಿರುವ ಪ್ರಥಮ ಭಾರತೀಯ ಎಂಬುದಾಗಿ ರೆಹಮಾನ್ ಭಾನುವಾರ ರಾತ್ರಿ ಹೊಸದೊಂದು ಇತಿಹಾಸ ಬರೆದಿದ್ದಾರೆ.ಇದಲ್ಲದೆ ಸ್ಲಂ ಡಾಗ್ ಚಿತ್ರಕ್ಕೆ ಶ್ರೇಷ್ಠ ನಿರ್ದೇಶನ ಹಾಗೂ ಶ್ರೇಷ್ಠ ಚಿತ್ರಕಥೆಗಾಗಿಯೂ ಪ್ರಶಸ್ತಿ ಲಭಿಸಿದ್ದು, ಚಿತ್ರಕ್ಕೆ ಒಟ್ಟು ನಾಲ್ಕು ಗೋಲ್ಡನ್ ಗ್ಲೋಬ್ ಪ್ರಶಸ್ತಿ ಲಭ್ಯವಾಗಿದೆ.ಸಾಹಿತಿ ಗುಲ್ಜಾರ್ ಅವರು ಬರೆದಿರುವ ಜೈ ಹೋ ಹಾಡಿಗೆ ರೆಹಮಾನ್ ನೀಡಿರುವ ಸಂಗೀತಕ್ಕಾಗಿ ಅವರಿಗೆ ಬೆಸ್ಟ್ ಒರಿಜಿನಲ್ ಮ್ಯೂಸಿಕ್ ಪ್ರಶಸ್ತಿ ಲಭಿಸಿದೆ.ಭಾರತೀಯ ಕಥಾನಕವಿರುವ ಈ ಚಿತ್ರವೀಗ ವಿಶ್ವಮಟ್ಟದಲ್ಲಿ ಬಿಸಿಬಿಸಿ ಚರ್ಚೆಯ ವಸ್ತುವಾಗಿದೆ. ಡೇನಿ ಬೊಯ್ಲೆ ಅವರ ಸ್ಲಮ್‌ಡಾಮ್ ಮಿಲಿಯನೇರ್ ಚಿತ್ರ ಮುಂದಿನ ತಿಂಗಳು ನಡೆಯಲಿರುವ ಅಕಾಡೆಮಿ ಅವಾರ್ಡ್ಸ್‌ನಲ್ಲಿ ಇದು ಇನ್ನಷ್ಟು ಪ್ರಶಸ್ತಿ ಬಾಚಿಕೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.ಕೊಳಗೇರಿ ವ್ಯಕ್ತಿಯೊಬ್ಬ ದೂರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೋಟ್ಯಾಧೀಶನಾಗುವ ಕಥಾಹಂದರದ ಈ ಸಿನಿಮಾ ಇತರ ಮೂರು ವಿಭಾಗಕ್ಕೂ ನಾಮ ನಿರ್ದೇಶನಗೊಂಡಿತ್ತು. ಭಾರತೀಯ ರಾಯಭಾರಿ ವಿಕಾಸ್ ಸ್ವರೂಪ್ ಅವರ ಕಾದಂಬರಿ ಆಧಾರಿತ ಈ ಚಿತ್ರದಲ್ಲಿ ಬಾಲಿವು ನಟರಾದ ಅನಿಲ್ ಕಪೂರ್ ಮತ್ತು ಇರ್ಫಾನ್ ಖಾನ್ ಇತರರೊಂದಿಗೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕೊಳಗೇರಿ ನಿವಾಸಿ ಜಮಾಲ್ ಎಂಬಾತ 'ಹೂ ವಾಂಟ್ಸ್ ಟು ಬಿ ಎ ಮಿಲಿಯನೇರ್' ಎಂಬ ರಿಲಾಯಲ್ಟಿ ಶೋದಲ್ಲಿ ಭಾಗವಹಿಸಿ 20 ಮಿಲಿಯನ್ ಡಾಲರ್ ಗೆದ್ದು ತನ್ನ ಪ್ರೀತಿಯನ್ನು ಉಳಿಸಿಕೊಳ್ಳುವ ಕಥೆಯಾಧಾರಿತ ಚಿತ್ರವಿದು.ಹೆಚ್ಚಿನ ಓದಿಗಾಗಿ ಭಾರತದ ಕೆಟ್ಟಮುಖ ತೋರಿಸೋ ಸ್ಲಮ್‌ಡಾಗ್... ಕ್ಲಿಕ್ ಮಾಡಿ |