ಮುಂಬೈಯ ಕೊಳಚೆ ಪ್ರದೇಶದ ಹುಡುಗನೊಬ್ಬನ ಕಥೆ ಹೊಂದಿರುವ ಸ್ಲಮ್ ಡಾಗ್ ಮಿಲಿಯನೇರ್ ಕಳೆದೊಂದು ವರ್ಷದಿಂದ ಬಾಚಿಕೊಂಡ ಪ್ರಶಸ್ತಿಗಳು ನೂರಾರು. ಅದೂ ಅಂತಾರಾಷ್ಟ್ರೀಯ ಮಟ್ಟದಲ್ಲಿ. ಅಂತಹಾ ವಿಶೇಷ ಈ ಚಿತ್ರದಲ್ಲೇನಿದೆ ಎನ್ನುವವರಿಗೆ ಸಿಂಪಲ್ಲಾಗಿ ಹೇಳಬಹುದೇನೆಂದರೆ, ಭಾರತದಲ್ಲಿನ ಬಡತನದ ವಿಶ್ವರೂಪ ದರ್ಶನ ಮಾಡಿಸಲಾಗಿದೆ !IFM ಭಾರತದ ಯಾವುದೇ ಚಿತ್ರ ಪಡೆಯದ ಖ್ಯಾತಿಯನ್ನು (ಈ ಚಿತ್ರ ಭಾರತದ್ದಲ್ಲ, ಭಾರತದ ಕಥೆ ಮತ್ತು ನಟರಿದ್ದಾರೆ, ಅಷ್ಟೇ) ಈ ಚಿತ್ರ ಪಡೆಯುತ್ತಿದೆ. ಇದರ ನಿರ್ದೇಶಕರು ಇಂಗ್ಲೆಂಡಿನವರು, ನಿರ್ಮಾಪಕರು