ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ನಾನು ಮಲಗಿದ್ದು ಕೆಲವರ ಜತೆ ಮಾತ್ರ: ಹಿಲ್ಟನ್
ಸುದ್ದಿ/ಗಾಸಿಪ್
Feedback Print Bookmark and Share
 
"ನಾನು ಕೆಲವೇ ಕೆಲವು ವ್ಯಕ್ತಿಗಳ ಜತೆ ಮಾತ್ರ ಹಾಸಿಗೆ ಹಂಚಿಕೊಂಡಿದ್ದೇನೆ. ಜನ ಏನು ಬೇಕಾದರೂ ಮಾತಾಡಿಕೊಳ್ಳಬಹುದು. ಆದರೆ ನಾನು ಹೆಚ್ಚಿನ ಸಂದರ್ಭಗಳಲ್ಲಿ ಕಿಸ್ ಮಾತ್ರ ಕೊಡುತ್ತಿದ್ದೆ. ನಮಗೆ ಬೇಕಾದುದನ್ನು ಪಡೆದುಕೊಳ್ಳಲು ಸಿದ್ಧರಾಗಿರಬೇಕಾಗುತ್ತದೆ ಎಂಬುದು ನನ್ನ ಅನಿಸಿಕೆ" ಇದು ನಟಿ ಪ್ಯಾರಿಸ್ ಹಿಲ್ಟನ್ ಸೆಕ್ಸ್ ಜೀವನದ ಬಗ್ಗೆ ಪತ್ರಕರ್ತರ ಜತೆ ಹಂಚಿಕೊಂಡ ಮಾತುಗಳು.

ಪ್ಯಾರಿಸ್ ಹಿಲ್ಟನ್ ಎಂದರೆ ಗೊತ್ತಲ್ಲ. ಹಾಲಿವುಡ್ ಖ್ಯಾತ ನಟಿ, ಫ್ಯಾಷನ್ ಡಿಸೈನರ್, ಸಿಂಗರ್, ಸಮಾಜ ಸೇವಕಿ... ಹೀಗೆ ಪಟ್ಟಿ ಉದ್ದುದ್ದ ಸಾಗುತ್ತದೆ. ಯಾವತ್ತೂ ತುಂಡು ಬಟ್ಟೆಗಳನ್ನು ಅಲ್ಲಲ್ಲಿ ಕಟ್ಟಿಕೊಂಡು ತಿರುಗಾಡುವ ಈಕೆಗೆ ಹುಡುಗರ ಹುಚ್ಚು ಎಲ್ಲರಿಗಿಂತ ತುಸು ಹೆಚ್ಚು. ಅದಕ್ಕಿಂತಲೂ ಹುಡುಗರನ್ನು ತೀರಾ ನಿಕೃಷ್ಟವಾಗಿ ಕಾಣುವವಳು ಎಂದರೆ ತಪ್ಪಲ್ಲ. ಹಾಲಿವುಡ್ ನಟರು, ಟೀವಿ ನಟರ ಜತೆ ಬೀಚ್, ಪಬ್‌ಗಳಲ್ಲಿ ಅರೆಬೆತ್ತಲೆಯಾಗಿ ತಿರುಗುವುದು ಪ್ಯಾರಿಸ್‌ಗೆ ಮಾಮ‌ೂಲಿ. ಅಂತಹ 27ರ ಮಾದಕ ಹುಡುಗಿ ತನ್ನ ಜೀವನ ಶೈಲಿ ಮತ್ತು ಅನುಭವಗಳ ಬಗ್ಗೆ ಹೇಳಿಕೊಂಡಿದ್ದಾಳೆ.
PR


"ನೀವು ಒಮ್ಮೆಲೆ 'ಎಲ್ಲವನ್ನೂ' ಗೆಳೆಯನಿಗೆ ಕೊಟ್ಟು ಬಿಟ್ಟರೆ ನಿಮ್ಮನ್ನು ಗೌರವಿಸುವುದೇ ಇಲ್ಲ. ಹಾಗಾಗಿ ನಿಧಾನಗತಿಯಿಂದ ಮುಂದುವರಿಯಬೇಕು. ನಾನು ಯಾವ ಪುರುಷನನ್ನೂ ಅವಲಂಭಿಸಿಲ್ಲ. ನಾನೊಬ್ಬ ಶಕ್ತಿಯುತ ಮಹಿಳೆಯಾಗಿದ್ದು ಬೇಕಾದದ್ದನ್ನು ಪಡೆದುಕೊಳ್ಳಲು ಅರ್ಹಳಿದ್ದೇನೆ" ಎನ್ನುವುದು ಆಕೆಯ ಅಭಿಮತ.

"ಯಾರಿಗೂ ಹರಿದು ಹೋದ ಬ್ಯಾಗುಗಳು ಬೇಕಾಗಿರುವುದಿಲ್ಲ. ಎಲ್ಲರೂ ಹೊಸತು ಮತ್ತು ಯಾರಿಗೂ ಸಿಕ್ಕಿರದ ಬ್ಯಾಗುಗಳ ಹುಡುಕಾಟದಲ್ಲಿರುತ್ತಾರೆ. ಹಾಗಾಗಿ ಅದು ಅಮ‌ೂಲ್ಯವೆನಿಸುತ್ತದೆ..." ಎನ್ನುವ ಲೋಕಾಭಿರಾಮದ ಮಾತುಗಳೂ ಅಕೆಯ ಬಾಯಿಯಿಂದ ಹೊರಳಿವೆ.

ನೀವು ಸಲಿಂಗಕಾಮಿಯಾಗುತ್ತಿದ್ದೀರಾ ಎಂದು ಎದುರು ಪ್ರಶ್ನೆ ಹಾಕಿದಾಗ, "ನೋ.. ನನ್ನ ಜೀವನಶೈಲಿ ಆ ರೀತಿಯಲ್ಲಿಲ್ಲ. ನನಗದು ಪಥ್ಯವಾಗುವ ವಿಚಾರವಲ್ಲ. ನಾನು ಹುಡುಗಿಯ ಶಕ್ತಿಯ ಮೇಲೆ ನಂಬಿಕೆಯಿರಿಸಿದವಳು. ಯಾವತ್ತೂ ಬಿಟ್ಟು ಕೊಡುವುದಿಲ್ಲ" ಎಂದಿದ್ದಾಳೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪ್ಯಾರಿಸ್ ಹಿಲ್ಟನ್, ಹಾಲಿವುಡ್, ನಟಿ, ಸೆಕ್ಸ್, ಕಿಸ್