ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಬಾಲಿವುಡ್ ಬಿಚ್ಚಮ್ಮಳಿಗೆ 30 ತುಂಬಿದೆ!
ಸುದ್ದಿ/ಗಾಸಿಪ್
Feedback Print Bookmark and Share
 
'ಜಿಸ್ಮ್'ನಲ್ಲಿ ಚಪಲದ ಹೆಣ್ಣಾಗಿ ತುಟಿ ಚಪ್ಪರಿಸಿಕೊಂಡ ಬಿಪಾಶಾ ಬಸುವಿಗೀಗ 30. ಆಕೆ ನಟಿಸಿದ ಚಿತ್ರಗಳನ್ನು ಲೆಕ್ಕ ಹಾಕಿದರೆ ಇಂದು 'ಭಯಂಕರ' ನಟಿಯಾಗಬೇಕಿತ್ತು. ದುರದೃಷ್ಟವಶಾತ್ ಹಾಗಾಗಲಿಲ್ಲ. ವಿಸ್ಮಯ ಜಗತ್ತಿಗೆ ಕಾಲಿಟ್ಟದ್ದು 'ಆಜ್‌ನಬೀ' ಮೂಲಕವಾದರೂ ಜನ ಗುರುತಿಸಿದ್ದು ಮಸಾಜ್ ಚಿತ್ರ 'ಜಿಸ್ಮ್' ನಂತರ.

ಬಾಲಿವುಡ್‌ನ ಈ ಕೃಷ್ಣ ಸುಂದರಿ ಕಣ್ಣುಗಳಲ್ಲೇ ಏನನ್ನೋ ಹೇಳುವವಳು. ಆಕೆಯ ಸೆಕ್ಸ್ ಇಮೇಜ್ ಹೊರತುಪಡಿಸಿಯೂ ನಟನಾ ಕೌಶಲ್ಯ ಹೊಂದಿರುವವಳು ಎಂಬುದು ಬಾಲಿವುಡ್ ಪಂಡಿತರೇ ಹೇಳುವ ಮಾತು. ಸೆಂಟಿಮೆಂಟ್ ದೃಶ್ಯಗಳಲ್ಲಿ ಆಕೆಯ ನಟನೆ ಎಕ್ಸಲೆಂಟ್. ರಫ್ ಎಂಡ್ ಟಫ್‌ನಲ್ಲೂ ಮಿಂಚಿದವಳು.

ರಾಝ್, ಜಿಸ್ಮ್, ನೋ ಎಂಟ್ರಿ, ಫಿರ್ ಹೇರಾ ಪೇರಿ, ಕಾರ್ಪೋರೇಟ್, ಓಂಕಾರ, ರೇಸ್ ಮುಂತಾದ ಚಿತ್ರಗಳಲ್ಲಿ ಉತ್ತಮ ನಟನೆ ಆಕೆಯಿಂದ ಬಂದಿದೆ. ಬಂಗಾಳಿ ಮ‌ೂಲದ ಆಕೆ ಹುಟ್ಟಿದ್ದು ನವದೆಹಲಿಯಲ್ಲಿ (7-1-1979). ಡಾಕ್ಟರ್ ಆಗಬೇಕಿದ್ದವಳು ಅಪ್ಪಿ-ತಪ್ಪಿ ನಟಿಯಾಗಿದ್ದಾಳೆ. ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದೇ ನಟಿಯಾಗಲು ಪ್ರೇರೇಪಿಸಿದ್ದು.

ರೂಮರ್‌ಗಳಲ್ಲೂ ಕಡಿಮೆ ರೇಟಿಂಗ್ ಪಡೆದುಕೊಂಡವಳಲ್ಲ ಬಿಪಾಶಾ. ಮೊದಲಿಗೆ ಡಿನೋ ಮೋರಿಯಾ, ಮಿಲಿಂದ್ ಸೋಮನ್ ಜತೆ ಡೇಟಿಂಗ್ ಅಂತೆಲ್ಲಾ ಥಳುಕು ಹಾಕಿಕೊಂಡು ರಾತ್ರಿ ಕಳೆಯುತ್ತಿದ್ದ ಹುಡುಗಿ ನಂತರ ಬಿದ್ದದ್ದು ಜಾನ್ ಅಬ್ರಹಾಂ ತೆಕ್ಕೆಗೆ. 2002ರ ನಂತರ ಬೇರೆಯಾಗದೆ ಜತೆಯಾಗಿರುವ ಈ ಜೋಡಿ ಮೇಡ್ ಫಾರ್ ಈಚ್ ಅದರ್ ಎಂಬ ಪಾಠ ಹೇಳುತ್ತಿದೆ.

2007ರಲ್ಲಿ ಲಂಡನ್‌ನ ಈಸ್ಟರ್ನ್ ಐ ಎಂಬ ಮ್ಯಾಗಜೀನ್ ಬಿಪಾಶಾ ಬಸುವನ್ನು ಏಷ್ಯಾದ ಮಾದಕ ನಟಿ ಎಂದು ಘೋಷಣೆ ಮಾಡಿತ್ತು. ಕಳೆದ ವರ್ಷ ಜಾನ್ ಅಬ್ರಹಾಂನನ್ನು ಪತ್ರಿಕೆಯೊಂದು ಮಾದಕ ನಟ ಎಂಬ ಬಿರುದು ನೀಡಿತ್ತು. ಹಾಗಾಗಿ ಇಬ್ಬರು ಸೆಕ್ಸಿಯೆಸ್ಟ್‌ಗಳ ಸಮಾಗಮ ಬಿಪಾಶಾ-ಜಾನ್.

ಸುಮಾರು 40ಕ್ಕೂ ಹೆಚ್ಚು ಚಿತ್ರಗಳಲ್ಲಿ ಈಗಾಗಲೇ ನಟಿಸಿರುವ ಬಿಪಾಶಾಗೆ ಇದೀಗ ಸಿಲ್ಲಿ ಸಿಲ್ಲಿ ಪಾತ್ರಗಳು ಬೇಡವಂತೆ. ಗಂಭೀರ ಪಾತ್ರಗಳೇ ಬೇಕು, ಸಿಕ್ಕಿದ್ದಕ್ಕೆಲ್ಲಾ ಸಹಿ ಮಾಡುವುದನ್ನು ಬಿಟ್ಟಿದ್ದೇನೆ ಎನ್ನುವುದು ಆಕೆಯ ಇತ್ತೀಚಿನ ವರಸೆ.

ಹ್ಯಾಪಿ ಬರ್ತ್ ಡೇ ಬಿಪಾಶಾ....!

ಚಿತ್ರ: ಜಾನ್ ಅಬ್ರಹಾಂ ಪ್ರಿಯತಮೆ ಬಿಪಾಶಾ ಬಸು
IFM
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬಾಲಿವುಡ್, ಬಿಪಾಶಾ ಬಸು, ಜಾನ್ ಅಬ್ರಹಾಂ, ಹುಟ್ಟುಹಬ್ಬ