ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ರಿಕ್ಷಾ ಡ್ರೈವರ್ ಜತೆ ಕತ್ರಿನಾಳ ಒಂದು ರಾತ್ರಿ...!
ಸುದ್ದಿ/ಗಾಸಿಪ್
Feedback Print Bookmark and Share
 
ಇದೇನಪ್ಪಾ ಕತ್ರಿನಾಗೆ ರೋಗ ಬಂತು ಅಂತ ಎಲ್ಲರೂ ಅಂದುಕೊಳ್ಳುವಂತದ್ದೇ. ಸುರಸುಂದರಾಂಗ ಬಾಲಿವುಡ್ ಬ್ರಹ್ಮಾಚಾರಿ ಸಲ್ಮಾನ್ ಖಾನ್ ತೆಕ್ಕೆಯಲ್ಲಿ ಸುಖವಾಗಿದ್ದಾಕೆಗೆ ಆಟೋ ಡ್ರೈವರ್ ಅಂಗ-ಸಂಗ ಯಾಕೆ ಬೇಕಿತ್ತು?

ಕೂಲಂಕಷವಾಗಿ ಇಣುಕಿ ನೋಡಿದಾಗ ವಿಷಯ ಸುಳ್ಳಲ್ಲ! ಯಾರೇನೇ ಹೇಳಿಕೊಳ್ಳಲಿ, ಅದರ ಬಗ್ಗೆ ಸೆಲೆಬ್ರಿಟಿಗಳು ಯಾವತ್ತೂ ಚಿಂತೆ ಮಾಡಿದವರಲ್ಲ. ಬಂದ ರೂಮರುಗಳಿಗೆಲ್ಲಾ ಪ್ರತಿಕ್ರಿಯಿಸುತ್ತಾ ಕೂತರೆ ಅವರ ಕೆಲಸ ಮಾಡುವವರ‌್ಯಾರು?

ಮೊನ್ನೆ ಹೊಸ ವರ್ಷದ ಹಿಂದಿನ ದಿನ ಸಲ್ಮಾನ್ ಖಾನ್ ಇದ್ದಕ್ಕಿದ್ದಂತೆ ಬಾಡಿಗೆ ರಿಕ್ಷಾವಾಲನನ್ನು ಕರೆಸಿದನಂತೆ. ನಂತರ ತನ್ನ ಕನಕಾಂಬರಿ ಕತ್ರಿನಾಳನ್ನು ತನ್ನ ಕಾರಿನಲ್ಲಿ ಕೂರಿಸಿದ ಸಲ್ಮಾನ್ ರಿಕ್ಷಾ ಚಲಾಯಿಸಿದ. ಮುಂಬೈಯ ಗಲ್ಲಿ-ಗಲ್ಲಿಗಳಲ್ಲಿ ದೌಡಾಯಿಸಿ ಕತ್ರಿನಾಳ ರಾತ್ರಿಯನ್ನು ಸುಂದರವಾಗಿಸಿದ. ಆದರೆ ಅಷ್ಟೂ ಹೊತ್ತು ಕತ್ರಿನಾ ಜತೆಗಿದ್ದದ್ದು ಬಡಪಾಯಿ ರಿಕ್ಷಾ ಡ್ರೈವರ್. ಮುಂದೆ ರಿಕ್ಷಾ, ಅದರ ಹಿಂದೆ ಕಾರು !

ಭಾರತದ ಸೆಕ್ಸಿಯೆಸ್ಟ್ ಸರ್ವಾಂಗ ಸುಂದರಿಯ ಜತೆ ಯಕಃಶ್ಚಿತ್ ರಿಕ್ಷಾ ಚಾಲಕನೊಬ್ಬ ರಾತ್ರಿ ಕಳೆಯುವುದೆಂದರೆ ಸುಲಭದ ಮಾತೇ.. ಅದು ಕೂಡ ಅಕ್ಕ ಪಕ್ಕದಲ್ಲಿ ಯಾರೂ ಇಲ್ಲ.. ಸುತ್ತಮುತ್ತ ಕತ್ತಲು ಬೇರೆ.. ಪಾಪ, ಆತ ಭುಜ ಹೊಸಕಿಕೊಳ್ಳಲೂ ಮುಜುಗರ ಪಡುತ್ತಿದ್ದನೇನೋ?!

ಸಲ್ಮಾನ್ ಖಾನ್‌ನ ರಿಕ್ಷಾ ಹುಚ್ಚು ಹೊಸತೇನಲ್ಲ. ಈ ಹಿಂದೆ ಕೂಡ ಅಪರಾತ್ರಿಗಳಲ್ಲಿ ಬಾಡಿಗೆ ರಿಕ್ಷಾವನ್ನು ಎತ್ಹಾಕಿಕೊಂಡು ಗಲ್ಲಿ ಮಾರ್ಚಿಂಗ್ ಮಾಡಿದ್ದಿದೆಯಂತೆ. ಈ ಬಾರಿ ಹೊಸ ವರ್ಷವನ್ನು ಕತ್ರಿನಾಳಿಗೆ ಈ ರೀತಿಯಾಗಿ ತೋರಿಸಿದ್ದು ಮಾತ್ರ ವಿಶೇಷ.

ರಿಕ್ಷಾ ಸವಾರಿ ಮುಗಿಸಿದ ನಂತರ ಇಬ್ಬರೂ ರೆಸ್ಟೋರೆಂಟ್‌ವೊಂದರಲ್ಲಿ ಸಾಕಷ್ಟು ಹೊತ್ತು ಜತೆಯಾಗಿ ಕಳೆದರೆಂಬುದೂ ಸುದ್ದಿ. ಬಹಳಷ್ಟು ಹೊತ್ತಿನ ನಂತರ ಇಬ್ಬರೂ ಅಲ್ಲಿಂದ ನಿರ್ಗಮಿಸಿದರಂತೆ. ಹಾಗಾಗಿ ಇವರಿಬ್ಬರ ನಡುವೆ ಏನೂ ಇಲ್ಲ ಎಂಬುದೆಲ್ಲ ಸುಳ್ಳು ಎಂದೀಗ ಖಚಿತವಾಗಿದೆ.

ಅವರಿಬ್ಬರೂ ದೂರವಾಗಿದ್ದಾರೆ ಎನ್ನುವವರಿಗೆ ಧಿಕ್ಕಾರವಿರಲಿ...!

ಚಿತ್ರ: ಬಾಲಿವುಡ್ ಬೆಡಗಿ ಕತ್ರಿನಾ ಕೈಫ
IFM
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕತ್ರಿನಾ ಕೈಫ್, ಸಲ್ಮಾನ್ ಖಾನ್, ಬಾಲಿವುಡ್, ನಟ, ನಟಿ, ರಾತ್ರಿ